
ಪ್ರೀತಿಯ ಪುಸ್ತಕ : ಸಂಚಿಕೆ - 46
Friday, February 17, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 46
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ... ಮನುಷ್ಯನೊಬ್ಬನಿಗೆ ಎಷ್ಟು ಜಮೀನು ಬೇಕು, ಅಂತ ನಿಮ್ಮನ್ನು ಕೇಳಿದರೆ ನೀವು ಎಷ್ಟು ಅಂತ ಹೇಳುತ್ತೀರಿ? ಯೋಚನೆ ಮಾಡಿ. ಈ ಪುಸ್ತಕ ನಮ್ಮನ್ನು ಬಹಳ ಯೋಚಿಸುವಂತೆ ಮಾಡುತ್ತದೆ. ಕಥೆ ಓದಿಸಿಕೊಂಡು ಹೋಗುತ್ತದೆ. ಓದುತ್ತಾ ಓದುತ್ತಾ ಕೊನೆಯಲ್ಲಿ ಒಂದು ವಿಚಾರ ನಮ್ಮ ಮನಸ್ಸಿಗೆ ತಟ್ಟುವ ಹಾಗೆ ಇದೆ. ಅತಿಯಾಸೆಗೆ ಬಲಿಯಾದರೆ ಏನಾಗುತ್ತದೆ ಎಂಬುದನ್ನು ಹೇಳುವ ಕಥೆಗಳು ನಮ್ಮ ನಡುವೆಯೂ ಸಾಕಷ್ಟು ಇವೆ. ಅಂತಹುದೇ ಒಂದು ಕಥೆ ಇದು. ಪಾಹೋಮ ಎಂಬ ರೈತ ಹೇಗೆ ಅತಿಯಾಸೆ ಎಂಬ ಸೈತಾನನ ಬಲೆಗೆ ಬಿದ್ದು ಯಾವ ಗತಿ ಕಾಣುತ್ತಾನೆ ಎಂಬ ಚಿತ್ರಣ ಇದರಲ್ಲಿ ಇದೆ. ಚಿತ್ರಗಳೂ ಮನ ಸೆಳೆಯುವ ಹಾಗೆ ಇವೆ. ಖಂಡಿತಾ ಓದಿ ನೋಡಿ. ಇದನ್ನು ಬರೆದ ‘ಲಿಯೋ ಟಾಲ್ ಸ್ಟಾಯ್’ ಅವರ ಹೆಸರು ಕೇಳಿದ್ದೀರಾ? ಇವರೊಬ್ಬ ಮಹಾನ್ ಚಿಂತಕರು. ರಷ್ಯಾ ದೇಶದವರು. ಬಹಳಷ್ಟು ಬರೆದಿದ್ದಾರೆ. ದೊಡ್ಡವರಾದ ಮೇಲೆ ನೆನಪಿನಿಂದ ಇವರ ಬಗ್ಗೆ ತಿಳಿದುಕೊಳ್ಳಿ.
ಲೇಖಕರು: ಲಿಯೋ ಟಾಲ್ ಸ್ಟಾಯ್
ಅನುವಾದ: ವಿ.ಎಸ್.ಎಸ್. ಶಾಸ್ತ್ರಿ
ಚಿತ್ರಗಳು: ವಿಜಯ ಕಿರೇಸೂರ
ಪ್ರಕಾಶಕರು: ಭಾರತ ಜ್ಞಾನ ವಿಜ್ಞಾನ ಸಮಿತಿ-ಕರ್ನಾಟಕ (ಈ ಪುಸ್ತಕಗಳು ಬೇಕಾದಲ್ಲಿ ನೀವು ಇವರನ್ನು ಸಂಪರ್ಕಿಸಬಹುದು – ಶ್ರೀನಿವಾಸ್ - 9611447102
ಬೆಲೆ: ರೂ.60/
ಆರು, ಏಳನೆ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************