-->
ಪ್ರೀತಿಯ ಪುಸ್ತಕ : ಸಂಚಿಕೆ - 45

ಪ್ರೀತಿಯ ಪುಸ್ತಕ : ಸಂಚಿಕೆ - 45

ಪ್ರೀತಿಯ ಪುಸ್ತಕ
ಸಂಚಿಕೆ - 45

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ 
  
     
ಒಂದಾನೊಂದು ಕಾಲದಲ್ಲಿ ಇಲಿಯೊಂದಿತ್ತು 
          ಪ್ರೀತಿಯ ಮಕ್ಕಳೇ..... ‘ಒಂದಾನೊಂದು ಕಾಲದಲ್ಲಿ’ ಅಂತ ಹೇಳುವಾಗಲೇ ಮಕ್ಕಳ ಕಿವಿ ಅರಳುತ್ತದೆ ಅಲ್ಲವೇ...? ಇದೂ ಅಂತಹುದೇ ಒಂದು ಇಲಿಯ ಕತೆ. ಚಿತ್ರಗಳ ಜೊತೆಗೆ ಕತೆ ಸಾಗುತ್ತದೆ. ಈ ಪುಸ್ತಕದಲ್ಲಿ ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಕತೆ ಬರೆದಿದ್ದಾರೆ. ಇದನ್ನು ಬರೆದ ಮಾರ್ಸಿಯಾ ಅವರು ಅಮೇರಿಕಾ ದೇಶದ ಲೇಖಕಿ ಮತ್ತು ಚಿತ್ರ ಕಲಾವಿದರು. ಮಕ್ಕಳಿಗಾಗಿ ಅನೇಕ ಪುಸ್ತಕ ಬರೆದಿದ್ದಾರೆ. ಈ ಇಲಿ ಒಂದು ಇತ್ತಲ್ಲಾ, ಅದು ಋಷಿಯೊಬ್ಬನ ಸಹಾಯದಲ್ಲಿ ಬೇರೆ ಬೇರೆ ರೂಪಕ್ಕೆ ಬದಲಾಗುತ್ತಾ ಹೋಗುತ್ತದೆ. ಯಾಕೆ ಬದಲಾಗುತ್ತದೆ? ಹೇಗೆ ಬದಲಾಗುತ್ತದೆ? ಎಂಬುದು ಪುಸ್ತಕದ ಒಳಗಿನ ಮ್ಯಾಜಿಕ್. ಅದನ್ನು ಅರ್ಥಮಾಡಿಕೊಳ್ಳಬೇಕಾದರೆ ನೀವು ಪುಸ್ತಕ ಓದಬೇಕಲ್ಲವೇ? ಕಥೆಯಷ್ಟೇ ವಿವರವಾಗಿ ಚಿತ್ರಗಳೂ ಇವೆ. ಓದಿ ಆನಂದಿಸಿ. 
ಲೇಖಕರು: ಮಾರ್ಸಿಯಾ ಬ್ರೌನ್ 
ಅನುವಾದ: ವಿ.ಎಸ್. ಶಾಸ್ತ್ರಿ 
ಚಿತ್ರಗಳು: ಮಾರ್ಸಿಯಾ ಬ್ರೌನ್ 
ಪ್ರಕಾಶಕರು: ಭಾರತ ಜ್ಞಾನ ವಿಜ್ಞಾನ ಸಮಿತಿ-ಕರ್ನಾಟಕ (ಈ ಪುಸ್ತಕಗಳು ಬೇಕಾದಲ್ಲಿ ನೀವು ಇವರನ್ನು ಸಂಪರ್ಕಿಸಬಹುದು – ಶ್ರೀನಿವಾಸ್ - 9611447102)
ಬೆಲೆ: ರೂ.70
ನಾಲ್ಕು ಐದು ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************

Ads on article

Advertise in articles 1

advertising articles 2

Advertise under the article