ಪ್ರೀತಿಯ ಪುಸ್ತಕ : ಸಂಚಿಕೆ - 44
Friday, February 3, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 44
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ,
“ಇವಳ ಹೆಸರು ಪುಟ್ಟಿ
ಅವಳ ಹೆಸರು ಚಿಟ್ಟಿ
ಪುಟ್ಟಿ ಚಿಟ್ಟಿ ಸೇರಿಕೊಂಡು
ಹೆಣೆದರೊಂದು ಬುಟ್ಟಿ” – ಇಂತಹ ಪುಟ್ಟ ಪುಟ್ಟ ಗೀತೆಗಳು ಎಷ್ಟು ಖುಶಿ ಕೊಡುತ್ತದೆ ಅಲ್ಲವೇ? ನಾವು ಚಿಕ್ಕವರಿರುವಾಗ ಇಂತಹ ಗೀತೆಗಳನ್ನು ಕೇಳಿಕೊಂಡು ನಾವೂ ಏನೇನೋ ಗೀತೆಗಳನ್ನು ರಚಿಸುತ್ತಿದ್ದೆವು. ನೀವೂ ರಚಿಸಬಹುದು. ಈ ಪುಸ್ತಕದಲ್ಲಿ ಇಂತಹ ಸರಳವಾದ 35 ಗೀತೆಗಳು ಇವೆ. ಮಳೆ, ಮರಳು, ಕಪ್ಪೆ, ಆನೆ, ಹೂವು, ಬಣ್ಣದ ವಾಚು, ಕರಡಿ, ಪಟಾಕಿ ಹೀಗೆ ಬೇರೆ ಬೇರೆ ವಿಷಯಗಳ ಮೇಲೆ ಈ ಗೀತೆಗಳು. ಇವೆ. ಓದಲು ಮತ್ತು ಹಾಡಲು ಸುಲಭವೆನಿಸುವಂತೆ ಇದೆ. ನೀವೇ ರಾಗ ಹಾಕಿ ಹಾಡುವ ಪ್ರಯತ್ನ ಮಾಡಬಹುದು. ಗುಜ್ಜಾರಪ್ಪವರು ಬಿಡಿಸಿದ ಚಿತ್ರಗಳಂತೂ ತುಂಬಾ ತುಂಬಾ ಚಂದ ಇವೆ. ಓದುವಿರಾ? ನಿಮ್ಮ ಖುಶಿಗಾಗಿ ಮತ್ತೊಂದು ಗೀತೆ –
ಸೈಕಲ್ ಬೆಲ್ ಟ್ರಿಣ್ ಟ್ರಿಣ್ ಟ್ರಿಣ್ !
ಶಾಲೆಯ ಬೆಲ್ ಢಣ್ ಢಣ್ ಢಣ್ !
ಜೇಬಲಿ ದುಡ್ಡು ಝಣ್ ಝಣ್ ಝಣ್ !
ತಿರುಗುವೆ ನಾನು ಗಣ್ ಗಣ್ ಗಣ್ !
ಲೇಖಕರು: ಎಸ್.ಮಂಜುನಾಥ್
ಚಿತ್ರಗಳು: ಗುಜ್ಜಾರ
ಪ್ರಕಾಶಕರು: ನವಕರ್ನಾಟಕ ಪ್ರಕಾಶನ
ಬೆಲೆ: ರೂ.50
ಮೂರು ನಾಲ್ಕನೆಯ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************