-->
ಸಂಚಾರಿಯ ಡೈರಿ : ಸಂಚಿಕೆ - 29

ಸಂಚಾರಿಯ ಡೈರಿ : ಸಂಚಿಕೆ - 29

ಸಂಚಾರಿಯ ಡೈರಿ : ಸಂಚಿಕೆ - 29

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
              
     
       ತಂಜಾವೂರು ತಮಿಳುನಾಡಿನ ಐತಿಹಾಸಿಕ ನಗರಗಳಲ್ಲಿ ಒಂದಾಗಿದೆ. ಈ ನಗರ ತನ್ನ ರೇಷ್ಮೆ ಕೃಷಿಗೆ ಹೆಸರಾಗಿದ್ದರೂ, ಇದು ಅತ್ಯಂತ ಪ್ರಸಿದ್ಧಿ ಪಡೆದಿದ್ದು ಮಾತ್ರ ಚೋಳ ರಾಜವಂಶದ ರಾಜಧಾನಿಯಾಗಿ. ಭಾರತದ ಅತೀ 
ಬಲಿಷ್ಠ ಮತ್ತು ವಿಶ್ವವಿಖ್ಯಾತ ರಾಜಮನೆತನವಾದ ಚೋಳರು ಹಲವಾರು ಕ್ಷೇತ್ರಗಳಲ್ಲಿ ತಮ್ಮ ನೈಪುಣ್ಯತೆಯನ್ನು ತೋರಿಸಿದ್ದರು. ಅಂತಹ ಅದ್ಭುತ ವಾಸ್ತುಶಿಲ್ಪಕ್ಕೆ ನೇರ ಕುರುಹು ತಂಜಾವೂರಿನ ಬೃಹದೀಶ್ವರ ದೇವಾಲಯ. ತಮಿಳು ಭಾಷೆಯಲ್ಲಿ ಪೆರಿಯ ಕೋಯಿಲ್ ಎಂದು ಕರೆಯಲ್ಪಡುವ ಈ ದೇವಾಲಯ ತಮಿಳುನಾಡಿನ ತಂಜಾವೂರಿನಲ್ಲಿದೆ. ರಾಜರಾಜ ಚೋಳ ಕಟ್ಟಿಸಿದ ಈ ಆಲಯ ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಯಲ್ಲಿದೆ. ಈ ದೇವಾಲಯ ಮುಖಮಂಟಪ, ನಂದಿಮಂಟಪ, ಮಹಾಮಂಟಪಗಳ ಜೊತೆ ಗರ್ಭಗುಡಿಯನ್ನೂ ಹೊಂದಿದೆ.
      ಬೃಹದೀಶ್ವರ ಎಂಬ ಪದದ ಅರ್ಥ ಬೃಹತ್ ಅಂದರೆ ದೊಡ್ಡ ಈಶ್ವರ ಅಂದರೆ ಆತ್ಮ ಎಂಬರ್ಥವಿದೆ. ಇನ್ನೊಂದು ವಿಶಿಷ್ಟ ವಿಚಾರವೆಂದರೆ ಇಲ್ಲಿ ಕೆತ್ತನೆಯಾಗಿರುವ ಶಿಲ್ಪಗಳ ಜತೆ ಗೋಡೆಯ ಮೇಲೆ ಚಿತ್ರಿಸಿದ ಚಿತ್ರಣಗಳು ಇತಿಹಾಸದ ಪುಟಗಳನ್ನು ತೆರೆಯುತ್ತವೆ. ಚೋಳ ಸಾಮ್ರಾಜ್ಯದ ಪತನದ ಬಳಿಕ ಮರಾಠರು ಈ ದೇವಾಲಯಕ್ಕೆ ಸುತ್ತು ಪ್ರಾಂಗಣ ಕಟ್ಟಿಸಿದರು. 
      ಇಂದು ಈ ಆಲಯ ಒಂದು ಪ್ರವಾಸಿ ತಾಣವಾಗಿ, ಲಕ್ಷಗಟ್ಟಲೆ ಜನ ಇಲ್ಲಿ ಭೇಟಿ ನೀಡುತ್ತಾರೆ. ವಿದೇಶೀ ಪ್ರವಾಸಿಗರಿಗಂತೂ ಇಲ್ಲಿಯ ವಾಸ್ತುಶಿಲ್ಪವೇ ಮುಖ್ಯಾಕರ್ಷಣೆ. ಅದಲ್ಲದೆ ತಮಿಳುನಾಡಿನಲ್ಲಿ ಇಂತಹ ನೂರಾರು ಆಲಯಗಳನ್ನ ಕಾಣಬಹುದು. ಮುಂದೆ ಎಂದಾದರೂ ತಮಿಳುನಾಡಿಗೆ ಭೇಟಿ ಕೊಟ್ಟರೆ ತಂಜಾವೂರಿನ ಬೃಹದೀಶ್ವರ ದೇವಾಲಯ ನೋಡೋದನ್ನ ಮರೆಯಬೇಡಿ!
......................................... ಸುಭಾಸ್ ಮಂಚಿ 
ಕಾಡಂಗಾಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
YouTube : The Silent Sanchari
Link :
https://youtu.be/hgBGZHhGz7Y
******************************************

Ads on article

Advertise in articles 1

advertising articles 2

Advertise under the article