ಕಲಿಕಾ ಹಬ್ಬ : ಶಿಕ್ಷಕರ ಅನಿಸಿಕೆ - 2
Saturday, February 4, 2023
Edit
ಲೇಖಕರು : ಶ್ರೀ ಸ್ವಾಮಿ ಎಸ್ ಕೆ
ಪ್ರಧಾನ ಗುರುಗಳು
ಸ.ಕ.ಕಿ.ಪ್ರಾಥಮಿಕ ಶಾಲೆ, ಮುತಾರಿತೋಟ (ಮೇಖಳಿ) ರಾಯಬಾಗ ತಾಲೂಕು.
ಶೈಕ್ಷಣಿಕ ಜಿಲ್ಲೆ - ಚಿಕ್ಕೋಡಿ.
ಕಾರ್ಯಕ್ರಮಕ್ಕೆ ಸೀಮಿತವಾಗದೆ, ನಿರಂತರತೆ ಕಾಯ್ದುಕೊಳ್ಳಲು ನಾವು ಅವಕಾಶಗಳನ್ನು ನಮ್ಮ ವರ್ಗ ಕೋಣೆಯಲ್ಲಿ ಮಾಡಬೇಕಾಗಿದೆ. NEP ಆಶಯದಂತೆ H W I L ಮತ್ತು E C L ಗಳ ಸಮ್ಮಿಳಿತವಾದ ಕಲಿಕಾ ಹಬ್ಬ 5 Es ಗಳ ರಚನಾವಾದದ ಮೇಲೆ ನಿಂತಿದೆ.
ನಮ್ಮ ವರ್ಗ ಕೋಣೆಯ ವಿದ್ಯಾಪ್ರವೇಶದ ಅಸ್ತಿತ್ವವನ್ನು ಸಹ ಇದು ಪ್ರಸ್ತುತ ಪಡಿಸಿದ್ದು ಸುಳ್ಳಲ್ಲ. ನಮ್ಮನ್ನು ನಾವು ಸಮರ್ಪಕವಾಗಿ ತೊಡಗಿಸಿಕೊಂಡಾಗ ಮಾತ್ರ 4 ಕಾರ್ನರ್ ಗಳು ಮಗುವಿನ ಸಂಪೂರ್ಣ ಮೌಲ್ಯ ಮಾಪನ ಮಾಡುವ ಬಲಿಷ್ಠ ಸಾಧನ ಮತ್ತು ತಂತ್ರಗಳಾಗಿ ಬಳಕೆಯಾಗುತ್ತದೆ ಎಂಬುದು ನಾನು ಕಂಡು ಕೊಂಡ ಸತ್ಯ. ಜ್ಞಾನ ಸಂಪಾದನೆಯು 3 R ನಿಂದ 3 H ಗಳಿಗೆ ಬದಲಾಗಿದ್ದು ಇತಿಹಾಸ.
NEP ಆಶಯದಂತೆ 21ನೇ ಶತಮಾನದ ಶಿಕ್ಷಣವು ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ. ಈ ಕಾಲಘಟ್ಟದಲ್ಲಿ ನಮ್ಮ ಕಲಿಕಾ ಹಬ್ಬ ಮಗು ಮತ್ತು ನಮ್ಮ ಮೇಲೆ ಪ್ರಯೋಗ ಶೀಲತೆ, ಹೊಸತನ, ರಚನಾತ್ಮಕತೆ, ಸೃಜನಶೀಲತೆ, ಯೋಚನಾಲಹರಿ, ತತ್ ಕ್ಷಣದಲ್ಲಿ ಎದುರಾದ ಸಮಸ್ಯೆಗೆ ಬದುಕನ್ನು ಕಟ್ಟಿಕೊಳ್ಳುವ ಪ್ರಕ್ರಿಯೆ, ಪರಿಸರದೊಂದಿಗೆ ಬದುಕುವ ಆಶಯ, ಎಲ್ಲದಕ್ಕಿಂತ ಮುಖ್ಯವಾಗಿ ಜ್ಞಾನದಿಂದ ಮಾತ್ರ ದೇಶದ ಹಿರಿಮೆಯನ್ನು ಸಾಧಿಸಲು ಇರುವ ಏಕೈಕ ಸಾಧನ ಎಂಬುದು ಪ್ರಾಮಾಣಿಕರಿಸಲಾಗಿದೆ.
ಇದು ಕಾರ್ಯಕ್ರಮವಾಗದೆ, ಉಪಕ್ರಮವಾಗಬೇಕು. ಮಗು ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಗರಿಷ್ಠ ಮಟ್ಟದ ಕಲಿಕೆಯಾಗುತ್ತದೆ ಎಂಬುದು ಸದಾಭಿಪ್ರಾಯವಾಗಿದೆ. ಅತ್ಯಂತ ಖುಷಿಯ ವಾತಾವರಣದಲ್ಲಿ ಅನುಷ್ಠಾನಗೊಂಡಿದ್ದು ನಮಗೆ ಪ್ರೇರಣಾದಾಯಕ ಅಂಶವಾಗಿದೆ. ಅವಕಾಶ ನೀಡಿದ ಸರ್ವರಿಗೂ ಆಭಾರಿಯಾಗಿರುತ್ತಾ ಧನ್ಯವಾದಗಳು.
ಪ್ರಧಾನ ಗುರುಗಳು
ಸ.ಕ.ಕಿ.ಪ್ರಾಥಮಿಕ ಶಾಲೆ, ಮುತಾರಿತೋಟ (ಮೇಖಳಿ) ರಾಯಬಾಗ ತಾಲೂಕು.
ಶೈಕ್ಷಣಿಕ ಜಿಲ್ಲೆ - ಚಿಕ್ಕೋಡಿ.
*****************************************