ಕಲಿಕಾ ಹಬ್ಬ - ಮಕ್ಕಳ ಅನಿಸಿಕೆ - 1
Friday, February 3, 2023
Edit
ಕಲಿಕಾ ಹಬ್ಬ - ಮಕ್ಕಳ ಅನಿಸಿಕೆ - 1
ರಾಜ್ಯದ ಎಲ್ಲಾ ಕ್ಲಸ್ಟರ್ ಗಳಲ್ಲಿ 'ಕಲಿಕಾ ಹಬ್ಬ' ದ ಸಂಭ್ರಮ ನಡೀತಾ ಇದೆ.... ಇಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ....
ನನ್ನ ಹೆಸರು ಹಿಬಾ ಫಾತಿಮಾ. ನಾನು ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಉಪ್ಪಿನಂಗಡಿ ಇಲ್ಲಿ 3ನೇ ತರಗತಿಯಲ್ಲಿ ಕಲಿಯುತ್ತಿದ್ದೇನೆ. ನಮ್ಮ ಶಾಲೆಯಲ್ಲಿ 2/2/2023 ಗುರುವಾರ & 3/2/2023 ಶುಕ್ರವಾರ ದಂದು, ಕಲಿಕಾ ಹಬ್ಬವು ಕಾಲ ಜಗಲಿಗೂ ಸಮಾರಂಭ ತುಂಬಾ ಸಡಗರ ಸಂಭ್ರಮ ಮತ್ತು ವಿಜೃಂಭಣೆಯಿಂದ ನಡೆಯಿತು.
ನಾನು ಒನಕ್ಕೆ ಓಬವ್ವ ವೇಷ ಧರಿಸಿ ಕಲಿಕಾ ಹಬ್ಬದ ಮೆರವಣಿಗೆಯಲ್ಲಿ ಭಾಗವಹಿಸಲು ನನ್ನ ತರಗತಿಯ ಟೀಚರ್ ಶ್ರೀಲತಾ ಮೇಡಂ ಹೇಳಿದರು. ಆದಕಾರಣ ನಾನು ಬೆಳಿಗ್ಗೆ ಬೇಗ 8:30 ಕ್ಕೆ ಸರಿಯಾಗಿ ಲಗುಬಗೆಯಿಂದ ಮತ್ತು ಖುಷಿಯಿಂದ ತಮ್ಮನ ಜೊತೆ ಶಾಲೆಗೆ ಬಂದೆ. ನಮ್ಮ ಶಾಲೆಯ ಕಲಿಕಾ ಹಬ್ಬದ ಸಿಂಗಾರ ನನಗೆ ತುಂಬಾ ಖುಷಿ ಕೊಟ್ಟಿತು.
ನನ್ನ ಅಮ್ಮನಿಗೂ ಕೂಡ ತುಂಬಾ ಖುಷಿಯಾಯಿತು. ಶಾಲೆಯ ವಿಶೇಷವಾದ ಅಲಂಕಾರ ಕ್ರಾಫ್ಟ್ ಸೆಲ್ಫಿ ಕಾರ್ನರ್ ನೋಡಿ, ತುಂಬಾ ಖುಷಿಯಾಯಿತು ಮತ್ತು ವಿಶೇಷವಾದ ಊಟ ಹೋಳಿಗೆ ಪಾಯಸವನ್ನು ಸವಿಯುವ ಸಂತೋಷವೇ ಬೇರೆ...
ನಾನು ಮೂರನೇ ತರಗತಿ ಆದ ಕಾರಣ ನನಗೆ, ಯಾವುದೇ ರೀತಿಯ ಚಟುವಟಿಕೆ ಇರಲಿಲ್ಲ. ಆದರೂ ಕೂಡ ಹಾಡು -ಆಡು, ಕಾರ್ನರ್ ನಲ್ಲಿ, ನಾನು ಮತ್ತು ನಮ್ಮ ಶಾಲೆಯ ಟೀಚರುಗಳು, ಮತ್ತು ನನ್ನ ಫ್ರೆಂಡ್ಸ್ ಗಳು ಹಾಡನ್ನು ಹಾಡಿ ಕುಣಿದು ತುಂಬಾ ಖುಷಿ ಪಟ್ಟೆವು.
ಪೊಯಮ್ ಪೊಯಮ್ ಪೊರಾಟೆ ಹಾಡು, ನನಗೆ ತುಂಬಾ ತುಂಬಾ ಇಷ್ಟವಾಯಿತು. ನಾನು ಬಸ್ಸಿನಲ್ಲಿ ಇಡೀ ದಿನ ಅದನ್ನೇ ಹಾಡುತ್ತಾ ಬಂದಿದ್ದೆ. ಒಟ್ಟಿನಲ್ಲಿ ಕಲಿಕಾ ಹಬ್ಬ ಮರೆಯಲಾಗದ ಸಂತಸದಾಯಕವಾದ ಶಾಲಾ ಹಬ್ಬವಾಗಿ ತುಂಬಾ ಖುಷಿಯನ್ನು ತಂದಿತು.
3ನೇ ತರಗತಿ
ಸರಕಾರಿ ಮಾದರಿ ಉನ್ನತ ಹಿರಿಯ
ಪ್ರಾಥಮಿಕ ಶಾಲೆ, ಉಪ್ಪಿನಂಗಡಿ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************