ಕಲಿಕಾ ಹಬ್ಬ - ಮಕ್ಕಳ ಅನಿಸಿಕೆ - 2
Tuesday, February 7, 2023
Edit
ಕಲಿಕಾ ಹಬ್ಬ - ಮಕ್ಕಳ ಅನಿಸಿಕೆ - 2
ರಾಜ್ಯದ ಎಲ್ಲಾ ಕ್ಲಸ್ಟರ್ ಗಳಲ್ಲಿ 'ಕಲಿಕಾ ಹಬ್ಬ' ದ ಸಂಭ್ರಮ ನಡೀತಾ ಇದೆ.... ಇಲ್ಲಿ ಭಾಗವಹಿಸಿರುವ ಕಾರುಣ್ಯ ಎನ್ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ....
ನನ್ನ ಹೆಸರು ಕಾರುಣ್ಯ ಎನ್. ನಾನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ. ಇಲ್ಲಿನ 4ನೇ ತರಗತಿಯ ವಿದ್ಯಾರ್ಥಿನಿ. ನಾನು ವಲಯ ಮಟ್ಟದ ಕಲಿಕಾ ಹಬ್ಬದಲ್ಲಿ ಭಾಗವಹಿಸಿದ 18 ವಿದ್ಯಾರ್ಥಿಗಳಲ್ಲಿ ನಾನು ಒಬ್ಬಳು. ಇದು ನಮ್ಮ ಹತ್ತಿರದ ಗೋಳ್ತ ಮಜಲು ಶಾಲೆಯಲ್ಲಿ ನಡೆದ ಎರಡು ದಿನದ ಶಿಬಿರ ಮರೆಯಲಾಗದ ಅನುಭವ.
ಅದರಲ್ಲೂ ಹಾಡು -ಆಡು, ಕಾಗದ-ಕತ್ತರಿ, ಮಾಡು-ಆಡು ಹಾಗೂ ಊರು ತಿಳಿಯೋಣದ ಎಲ್ಲಾ ನಾಲ್ಕು ಚಟುವಟಿಕೆಗಳಲ್ಲಿ ಪಾಲ್ಗೊಂಡು ತುಂಬಾ ಸಂತೋಷದಿಂದ ಎಲ್ಲಾ ಮಕ್ಕಳೊಂದಿಗೆ ಬೆರೆತುಕೊಂಡೆನು.
ಹಲವಾರು ವಿಷಯಗಳನ್ನು ತಿಳಿದುಕೊಂಡು ನಮ್ಮ ಶಾಲೆಯ ಇತರ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕಲಿಸುವ ಅವಕಾಶ ಸಿಕ್ಕಿದ್ದು ಈ ಕಲಿಕಾ ಹಬ್ಬದ ಮೂಲಕ. ಈ ಅವಕಾಶ ನೀಡಿದ ಶಾಲಾ ಮುಖ್ಯೋಪಾಧ್ಯಾಯರಿಗೂ ಶಿಕ್ಷಕರಿಗೂ ಅಭಾರಿಯಾಗುತ್ತಾ ನನ್ನ ಕಲಿಕಾ ಹಬ್ಬದ ಅನಿಸಿಕೆಯನ್ನು ಕೊನೆಗೊಳಿಸುತ್ತೇನೆ ಧನ್ಯವಾದಗಳು.
4ನೇ ತರಗತಿ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ
ಪ್ರಾಥಮಿಕ ಶಾಲೆ ನೆಟ್ಲ.
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************