ಕಥೆ ರಚನೆ : ಶೃತಾ 6ನೇ ತರಗತಿ
Friday, January 27, 2023
Edit
ಕಥೆ ರಚನೆ : ಶೃತಾ
6ನೇ ತರಗತಿ
ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ನಾರಾವಿ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಒಂದು ಊರಿನಲ್ಲಿ ಅದೊಂದು ಶಾಲೆ ಇತ್ತು. ಅಲ್ಲಿ ಮಕ್ಕಳೆಲ್ಲರೂ ತುಂಬಾ ತುಂಟತನ ಮಾಡುತ್ತಿದ್ದರು. ಅದನ್ನು ನೋಡಿ ಗುರುಗಳಿಗೆ ತುಂಬಾ ಬೇಸರವಾಯಿತು. ಒಂದು ದಿನ ಗುರುಗಳು ತರಗತಿಗೆ ಬಂದರು. ತರಗತಿಗೆ ಬಂದು ಸುಮ್ಮನೆ ಕುಳಿತುಕೊಂಡರು. ಅದನ್ನು ನೋಡಿ ಮಕ್ಕಳು, "ಗುರುಗಳೇ, ನೀವು ಏಕೆ ಸುಮ್ಮನೆ ಕುಳಿತುಕೊಂಡಿರುವಿರಿ" ಎಂದು ಕೇಳಿದರು. ಅದಕ್ಕೆ ಗುರುಗಳು, "ನೀವು ಹೀಗೆ ತರಗತಿಯಲ್ಲಿ ತುಂಟತನ ಮಾಡಿದರೆ ನಾನು ಹೀಗೇನೆ ಕುಳಿತುಕೊಳ್ಳುವೆ" ಎಂದು ಹೇಳಿದರು.
ಸ್ವಲ್ಪ ಸಮಯದ ನಂತರ ಗುರುಗಳು ತರಗತಿಯಿಂದ ಎದ್ದು ಹೋದರು. ಮಕ್ಕಳೆಲ್ಲರೂ ತುಂಬಾ ಯೋಚಿಸಿದರು. ಮಕ್ಕಳಿಗೆ ತಮ್ಮ ತಪ್ಪಿನ ಅರಿವಾಯಿತು. ಇನ್ನೊಂದು ದಿನ ಗುರುಗಳು ತರಗತಿಗೆ ಬಂದಾಗ ಎಲ್ಲರೂ ಶಿಸ್ತು ಬದ್ಧವಾಗಿ ಓದುತ್ತಿದ್ದರು, ಬರೆಯುತ್ತಿದ್ದರು.
6ನೇ ತರಗತಿ
ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ನಾರಾವಿ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************