-->
ಸಂಚಾರಿಯ ಡೈರಿ : ಸಂಚಿಕೆ - 28

ಸಂಚಾರಿಯ ಡೈರಿ : ಸಂಚಿಕೆ - 28

ಸಂಚಾರಿಯ ಡೈರಿ : ಸಂಚಿಕೆ - 28

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
                               
           "ಆತ್ ಎದುರು ಇತ್ತ್ಂಡ್, ಆಂಡಲಾ ನಿಕ್ಕ್ ತಿಕ್ಕುಜಿ ಅತಾ" (ಅಷ್ಟು ಎದುರಿದ್ದರೂ ನಿನಗೆ ಸಿಗಲ್ಲ) ಇದು ನಾನೇನಾದರೂ ಹುಡುಕಿ ಸಿಗದಿದ್ದರೆ ನಮ್ಮಮ್ಮ ಹೇಳೋ dialogue. ಅದೇನೋ ಚಮತ್ಕಾರವೇ ಎಂಬಂತೆ ಅವರಿಗೆ (especially ಮಹಿಳೆಯರಿಗೆ) ಥಟ್ಟನೇ ಕಾಣೋ ವಸ್ತುಗಳು, ನಮ್ಮ ಕಣ್ಣೆದುರಲ್ಲಿ ಯಾವ ಕಾರಣಕ್ಕಾಗಿ ಮರೆಯಾಗಿರುತ್ತವೋ ನಾ ತಿಳಿಯೆ..!
    ಇಲ್ಲಿ ಈ ಘಟನೆ ಉಲ್ಲೇಖಿಸಲು ಕಾರಣವೊಂದಿದೆ. ಸದಾ ಸಂಚಾರಿಯಾಗಿರೋ ನನಗೆ ವರ್ಷದ 200 ದಿನ ರೈಲು, ಬಸ್ಸಿನಲ್ಲೇ ಕಳೆದು ಹೋಗುತ್ತೆ. ತಮಿಳುನಾಡಿನ ಸೇಲಂನಿಂದ ತಿರುಚಿರಾಪಳ್ಳಿ ತೆರಳಲು ಟ್ರೈನ್ ಏರಿದ್ದೆ. ಕೂರಲು ಬಿಡಿ, ಕಾಲಿಡಲು ಜಾಗವಿಲ್ಲದಷ್ಟು ಜನ..! ಹಾಗೋ ಹೀಗೋ ಒಂದೆಡೆ ನಿಂತಾಗ ಅಲ್ಲಿ ಕೂತವರೊಬ್ಬರು 'ಅಂದ bag ಇಂಗ ಕುಡುಂಗಳೇ, ಇಂಗ ತೊಂಗಿವಿಡ್ರೆ (ಆ ಬ್ಯಾಗ್ ಈಕಡೆ ಕೊಡಿ ಸಾರ್, ಇಲ್ಲೇ ನೇತು ಹಾಕುವೆ) ಎಂದರು. ನಾನು ಅವರಲ್ಲಿ ಕೊಟ್ಟಿದ್ದೆ. ಈರೋಡ್ ಅನ್ನೋ station ಬಂದಾಗ ಹತ್ತಾರು ಜನ ಇಳಿದುಹೋಗುವವರಿದ್ದರು. ಅದಕ್ಕಾಗಿ ನಾನು ಹಿಂದೆ ಹೋಗಿದ್ದೆ ಆ ಹೊತ್ತಿಗೆ ಅಲ್ಲೊಂದು ಮೂಲೆಯಲ್ಲಿ ಕೂತು ತೂಕಡಿಸುತ್ತಿದ್ದೆನಷ್ಟೆ. ಟ್ರೈನ್ ತೀವ್ರಮಂದಗತಿಯ ಚಲನೆ ಮುಂದುವರಿಸಿತ್ತು.
     ತಿರುಚಿರಾಪಳ್ಳಿ ತಲುಪಲು ಇನ್ನೇನು ಹತ್ತು ಕಿಮೀ ಇದೆ ಎಂದಾಗ ಎದ್ದು ನಿಂತು ನಾ ಬ್ಯಾಗ್ ಇಟ್ಟ ಜಾಗದ ಪಕ್ಕ ಬಂದು ನೋಡಿ‌‌ ಒಂದು ಕ್ಷಣ ಆವಕ್ಕಾದೆ. ನನ್ನ ಬ್ಯಾಗ್ ಮಾಯವಾಗಿತ್ತು. ಇಲ್ಲಿ ಇಲ್ಲಿ ಕೊಡಿ ಅಂತಾ ಕೇಳಿದಾತ ಎಗರಿಸಿರಬಹುದಾ..? ಎಂಬ ಸಂಶಯ ಮೂಡಿತ್ತು. ಅದಾಗ್ಯೂ ಬ್ಯಾಗ್ ಒಳಗೆ ಇದ್ದಿದ್ದು ಮೈಕ್, ಶೂಟಿಂಗ್ ಸ್ಟಾಂಡ್ ಇಂತಹುವೇ...! ಆದರೂ ಬ್ಯಾಗ್ ಕಳೆದುಕೊಳ್ಳೋಕೆ ಯಾರು ಇಷ್ಟ ಪಡುತ್ತಾರೆ ಹೇಳಿ...? ಅದೇ ಕ್ಷಣ ನನ್ನ ಸಹಪ್ರಯಾಣಿಕರೆಲ್ಲಾ, "ಮೇಲೆ ಕೀಳೆ ಸರಿಯಾ ತೇಡ್ಂಗ" ಅಂದರು. ಮನೆಯ ಟೇಬಲ್ ಮೇಲೆ ಇಟ್ಟಿರೋ ಲೋಟನೇ ಅಮ್ಮ ಬಂದು ನೋಡು ನಿನ್ನೆದರುಗೇ ಇತ್ತು ಅನ್ನೋ ಸನ್ನಿವೇಶ ಇರೋವಾಗ ಅಷ್ಟು ದೊಡ್ಡ ಟ್ರೈನ್‌ ಅಲ್ಲಿ , ನೂರಾರು ಜನರ ಕಾಲಕೆಳಗೆ, ತಲೆಯ ಮೇಲೆ ಹುಡೋಕೋದು ಹೇಗೆ. ನಾ ಪ್ರಯತ್ನ ಪಡದಿದ್ದರೂ ನನ್ನೊಂದಿಗಿದ್ದ ಸಹಪ್ರಯಾಣಿಕರು ಇದೇನಾ ? ಯಾವ ಬಣ್ಣದ್ದು ? ಅದರ ಕೈಹಗ್ಗ ಯಾವುದು ? ದೊಡ್ಡ ಬ್ಯಾಗಾ ?ಬಹುಶಃ ಅಲ್ಲಿದ್ದವರೆಲ್ಲಾ ಅತ್ತಿಂದಿತ್ತ ಹುಡುಕಾಡತೊಡಗಿದರು. ಅಲ್ಲೆ ಸೀಟ್ ಮೇಲೆ ಕುಳಿತಿದ್ದ ಹುಡುಗನೊಬ್ಬ 'ಅಣ್ಣಾ! ಇದೇನಾ ನಿಮ್ಮ ಬ್ಯಾಗ್ ಒಮ್ಮೆ ನೋಡಿ' ಎಂದ. ಅರೇ ಹೌದು! ಹತ್ತಾರು ಬ್ಯಾಗ್‌ಗಳು, ಎಂಟ್ಹತ್ತು ಕಾಲುಗಳು, ಕಸ, ಧೂಳಿನ ಸೀಟಿನ ಕೆಳಗಿನಿಂದ ಮೆಲ್ಲನೆ ಗುಲಾಬಿ ಬಣ್ಣದ ಬ್ಯಾಗ್ ಹೊರಬಂತು...! ಎಲ್ಲರಿಗೂ ಧನ್ಯವಾದ ತಿಳಿಸಿದೆ ಕಾರಣ ಅವರೆಲ್ಲರೂ ನನ್ನ ತಾಯಿಯ ಪಾತ್ರ ನಿಭಾಯಿಸಿದ್ದರು.
     ಇಲ್ಲಿನ ಉದ್ದೇಶ ಇಷ್ಟೇ... ಪ್ರಯಾಣ ಸಂದರ್ಭದಲ್ಲಿ ಆದಷ್ಟು ಎಚ್ಚರಿಕೆಯಿಂದಿರಿ. ಬ್ಯಾಗ್ ಕಳ್ಳರು ನಿಮ್ಮ ಚಲನವಲನಗಳನ್ನು ಗಮನಿಸಿರುತ್ತಾರೆ. (ಕೆಲವರಿಗೆ ಒಂದು ಅಭ್ಯಾಸ ಇದೆ, ಪದೇ ಪದೇ ಬ್ಯಾಗ್ ಓಪನ್ ಮಾಡಿ ದುಡ್ಡು ಎಣಿಸೋದು/ಅಥವಾ ಬೆಲೆಬಾಳೋ ವಸ್ತುಗಳನ್ನ ನೋಡಿ ಒಳಗೆ ಇಡೋದು ಇದೆಲ್ಲಾ ಕಳ್ಳರಿಗೆ ಅದೇ ಬ್ಯಾಗನ್ನ ಕದಿಯಲು ದಾರಿ ಮಾಡಿ ಕೊಟ್ಟಂತಾಗುತ್ತದೆ.) ಹಾಗೇ ಸಹಪ್ರಯಾಣಿಕರಲ್ಲಿ ಬ್ಯಾಗ್ ಒಳಗೆ ಬೆಲೆಬಾಳುವ ವಸ್ತುಗಳಿವೆ ಅಂತಾನೂ‌‌ ಹೇಳೋಕೆ ಹೋಗಬೇಡಿ. ಅವರ ಜತೆಗಿನ ಮಾತು ಸ್ನೇಹದಾಯಕವಾಗಿರಲಿ, ಹಾಗಂದ ಮಾತ್ರಕ್ಕೆ ಇದ್ದಬದ್ದ ರಹಸ್ಯ ವಿವರ ಬೇಡ. ಮುಖ್ಯವಾಗಿ ಯಾವುದೇ ತರಹದ ಅಪಾಯಕಾರಿ ಅನುಭವಗಳಾದಲ್ಲಿ‌ ತಕ್ಷಣ ರೈಲ್ವೆ ಪೊಲೀಸ್ ಸಂಪರ್ಕಿಸೋದನ್ನ ಮರೆಯಬೇಡಿ.
......................................... ಸುಭಾಸ್ ಮಂಚಿ 
ಕಾಡಂಗಾಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
YouTube : The Silent Sanchari
Link :
https://youtu.be/hgBGZHhGz7Y
******************************************

Ads on article

Advertise in articles 1

advertising articles 2

Advertise under the article