ಪ್ರೀತಿಯ ಪುಸ್ತಕ : ಸಂಚಿಕೆ - 42
Friday, January 20, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 42
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ, ಎಷ್ಟು ಕಥೆ ಹೇಳಿದರೂ ‘ಇನ್ನೊಂದು ಕಥೆ ಬೇಕು’ ಅಂತ ಕೇಳುತ್ತಾ ಸದಾ ಕಥೆ ಕೇಳುವುದನ್ನು ಪ್ರೀತಿಸುವವರು ನೀವು. ನಿಮಗೆ ಇಷ್ಟವಾಗಬಹುದಾದ ಆರು ಕಥೆಗಳು ಈ ಪುಸ್ತಕದಲ್ಲಿ ಇವೆ. ಓದುತ್ತಾ ಹೋಗುವಾಗ, ಯಾರೋ ಎದುರಿಗೆ ಕೂತುಕೊಂಡು ಹೇಳುವ ರೀತಿಯಲ್ಲಿ ಈ ಕಥೆಗಳು ಇವೆ. ವೈದೇಹಿಯವರು ತಮ್ಮ ಮೊಮ್ಮಕ್ಕಳಿಗೆ ಉಡುಗೊರೆಯಾಗಿ ಈ ಚಿಕಣಿ ಕಥಾಸಂಗ್ರಹ ಮಾಡಿದ್ದಾರೆ. ಅಬ್ಬಾಲಕ್ಕ ಅಜ್ಜಿ ಮನೆಗೆ ಹೋಗಿದ್ದು, ಚಿಕ್ಕವ್ವಾ.. ಚಿಕ್ಕವ್ವಾ.., ಚಿಟ್ಟಿ ಬಾಲೆ, ಅರ್ಧಚಂದ್ರ ಮಿಠಾಯಿ, ಪುಟ್ಟಿ ಪುಟ್ಟರ ಪುಟಾಣಿ ದಿನಗಳು, ಪುಟ್ಟುಮರಿಯೂ ಮುಗಿಲ ಹಡಗೂ – ಎಂಬ ಕಥೆಗಳು ಇವೆ. ಹೆಸರು ಕೇಳುವುದಕ್ಕೇ ಮಜವಾಗಿ ಇದೆಯಲ್ಲಾ. ನಮ್ಮ ಅನುಭವಗಳು ಮತ್ತು ಕಲ್ಪನೆಗಳು ಸೇರಿದಂತೆ ಇರುವ ಈ ಕಥೆಗಳು ಬೇರೆ ಬೇರೆ ಲೋಕ ತೆರೆಯುತ್ತವೆ. ಅಬ್ಬಾಲಕ್ಕಂಗೆ ಅಜ್ಜಿ ಮನೆಗೆ ಒಬ್ಬಳೇ ಹೋಗಬೇಕು ಅಂತ ಆಸೆಯಾಯಿತಂತೆ, ರಾತ್ರಿ ಊಟ ಮುಗಿಸಿ, ಎಲ್ಲರೂ ಮಲಗಿದ ಮೇಲೆ ಒಬ್ಬಳೇ ಹೊರಟಳಂತೆ, ಹೊರಗೆ ಕತ್ತಲು ಇತ್ತಂತೆ; ಗೂಬೆ ‘ಗೂಕ್ ಗೂಕ್’ ಅನ್ನುತ್ತಿತ್ತಂತೆ. ಆದ್ರೂ ಅವಳು ಹೆದರಿಲ್ಲವಂತೆ.. “ನಂಗೆ ತುಂಬಾ ಧೈರ್ಯ’ ಅಂತ ಹೇಳಿಕೊಳ್ಳುತ್ತಾ ಮುಂದೆ ಮುಂದೆ ನಡೆದಳಂತೆ..” ಆಮೇಲೆ ಅಜ್ಜಿ ಮನಗೆ ಹೇಗೆ ತಲುಪಿದಳು, ಏನಾಯಿತು ಅಂತ ಕುತೂಹಲ ಇದ್ದರೆ ಓದಿ ನೋಡಿ.
ಲೇಖಕರು: ವೈದೇಹಿ
ಚಿತ್ರಗಳು: ಎನ್.ಪಿ.ಚೀಲಾಪುರ
ಪ್ರಕಾಶಕರು: ಜಡಭರತ ಪ್ರಕಾಶನ
ಬೆಲೆ: ರೂ.70
ಐದು ಆರನೆಯ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************