-->
ಕವನ ರಚನೆ : ರಮ್ಯ ಶ್ರೀನಿವಾಸ್ ಚಕ್ರಸಾಲಿ

ಕವನ ರಚನೆ : ರಮ್ಯ ಶ್ರೀನಿವಾಸ್ ಚಕ್ರಸಾಲಿ

ಕವನ ರಚನೆ : ರಮ್ಯ ಶ್ರೀನಿವಾಸ್ ಚಕ್ರಸಾಲಿ
ದ್ವಿತೀಯ ಪಿಯುಸಿ
ಸೈನ್ಸ್ ಅಕಾಡೆಮಿ ಪದವಿ ಪೂರ್ವ ಕಾಲೇಜು
ದಾವಣಗೆರೆ. 

ರಮ್ಯ ಶ್ರೀನಿವಾಸ್ ಚಕ್ರಸಾಲಿ ಬರೆದಿರುವ ಕೆಲವು ಕವನಗಳು.......

           ಶಾಯರಿ
          -------------
ಬುದ್ದನಿರಲಿ ಮನೆಗೆ.....
ಸಕಲ ಶುದ್ಧಿಯ ನೀಡುವ ಹಾಗೆ..
ಸಕಲ ಬುದ್ದಿಯ ಕೊಡುವ ಹಾಗೆ..
ಸಕಲ ವೃದ್ಧಿಯ ಪಡೆವ ಹಾಗೆ..
ಸಕಲ ಸಿದ್ದಿಯು ಸಿದ್ಧಿಸುವ ಹಾಗೆ..


              ಶಾಯರಿ
            -------------
ಹಿಂದಿನ ಬೆಂಚಿನ ಹುಡುಗಿ
ಕಾಡುವಳು ನಿತ್ಯವೂ 
ತನ್ನ ಹಾಡಿನಲ್ಲಿ, ಮೋಜು ಮಸ್ತಿಯಲ್ಲಿ
ಬೆನ್ನ ಹಿಂದೆ ಗೀಚುತ, ಕಚಗುಳಿಯ ನೀಡುತ
ನಗಿಸುವಳು ಅಳಿಸುವಳು
ತನ್ನೆಲ್ಲ ಮಾತಿನಲ್ಲಿ....



              ಶಾಯರಿ
             --------------
ನನಗೇನೂ ತಿಳಿಯದಿದ್ದರೂ
ಬರೆದಿರುವೆ ನಾಲ್ಕು ಸಾಲು 
ತಿಳಿಯಬೇಡ ಈ ಬುದ್ಧಿಗೇಡಿಯ 
ಅಲ್ಪ ಮನಸಿನವಳೆಂದು 
ಇರು ಹೀಗೆ ನೀ ನಗುತ, 
ನಗಿಸುತ ಎಲ್ಲರ ಮನದೊಳಗೆ ಕೂತು 
ನಿನ್ನ ಸಾಧನೆಯ ಮೆಟ್ಟಿಲೇರಿ ನಿಂತು.....



                 ನನ್ನಪ್ಪ
               -------------
ಹಿಂದೆಂದೂ ಕಾಡದ ನೋವೊಂದು
ಕಾಣುತಿದೆ ನನ್ನೆದೆಯಲಿ 
ನನ್ನ ಜೀವನದ ದಾರಿದೀಪವದು 
ನನ್ನಿಂದು ಅಗಲಿರುವ ಜೀವವದು||
    ತನ್ನವರಿಗಾಗಿ ಮುಡಿಪಿಟ್ಟ ಜೀವವದು 
    ತನ್ನ ಮಕ್ಕಳಿಗೆಂದೇ ಬರೆದಿಟ್ಟ ಜೀವ
    ತನಗೆನನ್ನೂ ಬಯಸದ ಜೀವವದು 
    ತನ್ನೆಲ್ಲ ನೋವನ್ನು ಬಚ್ಚಿಟ್ಟ ಜೀವ ||
ಬಲವಾಗಿದ್ದ ನಮ್ಮೆಲ್ಲರ ಬೆನ್ನೆಲುಬಿಗೆ
ವರವಾಗಿದ್ದ ನಮ್ಮ ಕುಟುಂಬಕ್ಕೆ
ಒಲವಾಗಿದ್ದ ನನ್ನಮ್ಮನ ಹೃದಯಕ್ಕೆ
ದೇವನಾಗಿದ್ದ ನಮ್ಮೆಲ್ಲರ ಆತ್ಮಕ್ಕೆ ||
    ಈ ಹಂಬಲವೆಲ್ಲ ನನ್ನೆದೆಯ ಪ್ರಪಂಚಕ್ಕೆ
    ಕಾಡಿದಷ್ಟು ಭಾವದ ಆತ್ಮಪ್ರಭುವಿಗೆ
    ಒಲವಿಂದಲೆ ಗೆಲ್ಲುವ ಸರದಾರನಿಗೆ
    ಕೊನೆಯಿಲ್ಲದ ಬದುಕಿನ, ಕನಸಿನ      
    ಜೊತೆಗಾರನಿಗೆ ||
ಜೊತೆಗಿಲ್ಲವೆಂಬ ಭಾವವಿಲ್ಲ
ನನ್ನಪ್ಪನೊಂದಿಗೆ ಕಳೆದ ಮಧುರ ಕ್ಷಣಗಳಿಗೆ
ನೋವಿರುವ ದಿನಗಳಿಲ್ಲ
ನನ್ನಪ್ಪನೊಂದಿಗೆ ಕಲೆತ ಒಲವ ಕ್ಷಣಗಳಿಗೆ ||
     ಕಂಡಿರಲಿಲ್ಲ ಕನಸೊಂದನ್ನು
     ಅವನ ಬಿಟ್ಟಿರುವ ಕ್ಷಣದಲ್ಲಿ
     ಹೇಗೋ ದೂರಮಾಡಿಯೇ ಬಿಟ್ಟನವನು
     ನಮ್ಮೆಲ್ಲರ ಬಲವಿಲ್ಲದ ಬದುಕಿಗೆ ||
......................... ರಮ್ಯ ಶ್ರೀನಿವಾಸ್ ಚಕ್ರಸಾಲಿ
ದ್ವಿತೀಯ ಪಿಯುಸಿ
ಸೈನ್ಸ್ ಅಕಾಡೆಮಿ ಪ ಪೂ ಕಾಲೇಜು
ದಾವಣಗೆರೆ. 
*******************************************

Ads on article

Advertise in articles 1

advertising articles 2

Advertise under the article