-->
ಸಂಚಾರಿಯ ಡೈರಿ : ಸಂಚಿಕೆ - 27

ಸಂಚಾರಿಯ ಡೈರಿ : ಸಂಚಿಕೆ - 27

ಸಂಚಾರಿಯ ಡೈರಿ : ಸಂಚಿಕೆ - 27

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ                  
             ಉತ್ತರ ಭಾರತದ ಕೆಲವು ಕಡೆ ಸದಾ ಕುದಿಯುವ, ಬಿಸಿನೀರ ಬುಗ್ಗೆ/ಚಿಲುಮೆಗಳನ್ನ ಕಾಣಬಹುದು. ಅಲ್ಲಿಯ ಹಲವಾರು ನದಿ, ಕಾನನ, ತೊರೆಗಳ ಮಧ್ಯೆ ಇಂತಹ ವಿಶಿಷ್ಟ ಚಿಲುಮೆಗಳನ್ನ ನೋಡಲು ಮತ್ತು ಅದರಲ್ಲಿ ಜಳಕದ ಪುಳಕ ಪಡೆಯಲು ಬಹುತೇಕರು ಭೇಟಿ ನೀಡುತ್ತಾರೆ. ಇಂತಹ ಹತ್ತಾರು ಬಿಸಿನೀರ ಚಿಲುಮೆಗಳು ಉತ್ತರ ಭಾರತದಲ್ಲಿ ಸಾಮಾನ್ಯವೆನಿಸಿದರೂ ದಕ್ಷಿಣ ಭಾರತದ ಭೂ ಫಲಕಗಳು ಅದಕ್ಕೆ ಯೋಗ್ಯವಾಗಿಲ್ಲ. ಹಾಗಾಗಿ ಇಂತಹ ಬಿಸಿನೀರ ಬುಗ್ಗೆಗಳ ರಚನೆ ಕಷ್ಟ ಎನ್ನುವುದು ತಜ್ಞರ ಅಭಿಮತವಾಗಿತ್ತು. ಆದರೆ ಅದಕ್ಕೆ ತದ್ವಿರುದ್ಧವೆಂಬಂತೆ ದಕ್ಷಿಣ ಭಾರತದ ಒಂದು ಪುಟ್ಟ ದಟ್ಟ ಕಾಡಿನ ಗ್ರಾಮದಲ್ಲಿ, ಚಿಕ್ಕದಾದ ಬಿಸಿನೀರ ಚಿಲುಮೆ ಕಂಡಿತ್ತು. ಅಲ್ಲಿ 100° ಫಾರನ್‌ಹೀಟ್ ಉಷ್ಣತೆಯ ಕುದಿನೀರು ಬಂದು ಗಂಧಕದ ಅಂಶವಿತ್ತಂತೆ. ಅಲ್ಲಿ‌ನ ಜನರು ಆ ಪುಟ್ಟ ಬುಗ್ಗೆಯ ನೀರನ್ನ ಒಯ್ದು ಸ್ನಾನ ಮಾಡುತ್ತಿದ್ದರಂತೆ. ಅಂದಹಾಗೆ ದಕ್ಷಿಣ ಭಾರತದ ಏಕೈಕ ಬಿಸಿನೀರ ಬುಗ್ಗೆ ಇದ್ದ ಸ್ಥಳ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಇರ್ದೆ ಗ್ರಾಮ. ಸ್ಥಳೀಯವಾಗಿ ಇದರ ಹೆಸರು 'ಬೆಂದ್ರ ತೀರ್ಥ' ಎಂದಾಗಿದೆ. 
ಇಂದು ಇಲ್ಲಿ ಬಿಸಿನೀರು ಬರೋದು ಬಿಡಿ ಇಲ್ಲಿ ಇಂತಹ ಬಿಸಿನೀರ ಬುಗ್ಗೆ ಇತ್ತೆಂಬ ಕುರುಹೂ ಇಲ್ಲದಂತಾಗಿದೆ. ಹೆಸರಿಗೇ ಒಂದು ಕಟ್ಟೆ, ಮೂರ್ನಾಲ್ಕು ಕಟ್ಟಡಗಳು ಉದುರಿದ ಸಿಮೆಂಟ್, ಛಾವಣಿ ಬಣ್ಣದ ಜತೆ ಇರೋ ಇವನ್ನ ನೋಡೋರೂ‌ ಇಲ್ಲ. ಅಕ್ಕಪಕ್ಕದ ಅಡಿಕೆ ತೋಟಗಳಿಗಾಗಿ ಕೊರೆದ ವಿಪರೀತ ಬೋರ್‌ವೆಲ್‌ಗಳು ಇಲ್ಲಿದ್ದ ನೀರೆಲ್ಲಾ ಆವಿಯಾಗಿದೆ. ಬೆಂದ್ರತೀರ್ಥದ ಕಡೆ ಸರ್ಕಾರದ ಆಸಕ್ತಿಯೂ ಇಲ್ಲ, ಸ್ಥಳೀಯ ಸಹಕಾರವೂ ಇಲ್ಲದೆ ದಕ್ಷಿಣ ಭಾರತದ ಏಕೈಕ ಬಿಸಿನೀರ ಬುಗ್ಗೆ ಭೂಮಿಯಲ್ಲಿ‌‌ ಲುಪ್ತವಾಗಿದೆ.
ಒಂದು ಸಣ್ಣ ವೀಡಿಯೋ‌ ಇಲ್ಲಿದೆ..
https://youtu.be/VQRM3j23Yi4 
......................................... ಸುಭಾಸ್ ಮಂಚಿ 
ಕಾಡಂಗಾಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
YouTube : The Silent Sanchari
Link :
https://youtu.be/hgBGZHhGz7Y
******************************************



Ads on article

Advertise in articles 1

advertising articles 2

Advertise under the article