-->
ಪ್ರೀತಿಯ ಪುಸ್ತಕ : ಸಂಚಿಕೆ - 41

ಪ್ರೀತಿಯ ಪುಸ್ತಕ : ಸಂಚಿಕೆ - 41

ಪ್ರೀತಿಯ ಪುಸ್ತಕ
ಸಂಚಿಕೆ - 41

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ 

                                             ಏನಿದು ಗ್ರಹಣ ?
           ಪ್ರೀತಿಯ ಮಕ್ಕಳೇ, ಗ್ರಹಣದ ಬಗ್ಗೆ ನಿಮಗೆ ಕುತೂಹಲ ಇದ್ದೇ ಇರುತ್ತದೆ. ಜೊತೆಗೆ ವಿಸ್ಮಯ, ಭಯ ಎರಡೂ ಇರುತ್ತದೆ. ಸಾಧಾರಣವಾಗಿ ಗ್ರಹಣದ ಕುರಿತಂತೆ ಒಂದಷ್ಟು ನಂಬಿಕೆಗಳಿವೆ. ರಾಹು ಅನ್ನುವ ರಾಕ್ಷಸ ಸೂರ್ಯನನ್ನು, ಕೇತು ಅನ್ನುವ ರಾಕ್ಷಸ ಚಂದ್ರನನ್ನು ಹಿಡಿಯುವುದರಿಂದ ಗ್ರಹಣ ಉಂಟಾಗುತ್ತದೆ ಎಂಬುದು ಹಳೆಯ ಕಾಲದ ನಂಬಿಕೆ. ವೈಜ್ಞಾನಿಕವಾಗಿ ನೋಡಿದರೆ ಇದು ಮತ್ತೇನಲ್ಲ, ಆಕಾಶಕಾಯಗಳ ನಡುವೆ ನಡೆವ ನೆರಳು ಬೆಳಕಿನ ಆಟ. ಗ್ರಹಣದ ಹೊತ್ತಿನಲ್ಲಿ ಯಾವುದೇ ಅಪಾಯಕಾರಿ ಕಿರಣಗಳು ಭೂಮಿಗೆ ಬರುವುದಿಲ್ಲ. ಈ ಎಲ್ಲಾ ವಿವರಗಳನ್ನು ಸ್ಪಷ್ಟವಾಗಿ ಸರಳವಾಗಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಹಾಗೂ ಗ್ರಹಣವನ್ನು ಎಲ್ಲಿ ನೋಡಬಹುದು? ಗ್ರಹಣದಲ್ಲಿ ಏನನ್ನು ನೋಡಬೇಕು? ಯಾವ ಯಾವ ರೀತಿಯಲ್ಲಿ ನೋಡಬೇಕು? ಯಾವ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು? – ಎಂಬ ವಿವರಗಳೂ ಈ ಪುಸ್ತಕದಲ್ಲಿ ಸಿಗುತ್ತವೆ. ಓದಿ ನೋಡಿ, ಗ್ರಹಣ ವೀಕ್ಷಣೆಯನ್ನು ಸಂತೋಷವಾಗಿ ಮಾಡುವ ವಿವಿಧ ಮಾರ್ಗಗಳನ್ನು ಅರಿತುಕೊಳ್ಳಿ. 
ಲೇಖಕರು: ಎಂ.ಡಿ. ಹರಿದಾಸ್ ಮತ್ತು ಕಮಲಾ ಲೊಡಾಯಿ
ಅನುವಾದ: ಸಹನ ಎಲ್.ವಿ ಮತ್ತು ಅನಂತ ಪದ್ಮನಾಭ 
ಚಿತ್ರಗಳು: ರಾಜೀವ್ ಗೌಡ ಎಂ,ಜೆ 
ಪ್ರಕಾಶಕರು: ಭಾರತ ಜ್ಞಾನ ವಿಜ್ಞಾನ ಸಮಿತಿ-ಕರ್ನಾಟಕ (ಈ ಪುಸ್ತಕಗಳು ಬೇಕಾದಲ್ಲಿ ನೀವು ಇವರನ್ನು ಸಂಪರ್ಕಿಸಬಹುದು – ಶ್ರೀನಿವಾಸ್ - 9611447102 )
ಬೆಲೆ: ರೂ.50/
ಆರು ಏಳನೆ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************

Ads on article

Advertise in articles 1

advertising articles 2

Advertise under the article