-->
ಪ್ರತಿಫಲನ : ಸಂಚಿಕೆ - 11

ಪ್ರತಿಫಲನ : ಸಂಚಿಕೆ - 11

ಪ್ರತಿಫಲನ : ಸಂಚಿಕೆ - 11
ಮಕ್ಕಳಿಗಾಗಿ ಲೇಖನ ಸರಣಿ
     
                ಕಲಿಕೆ ಎಂಬುದು ವಿದ್ಯಾರ್ಜನೆಯ ಮೆಟ್ಟಿಲು. ಅದೆಷ್ಟೇ ದೊಡ್ಡ ಪದವಿ ಪಡೆಯಬೇಕಾದರೂ ಅಧ್ಯಯನ ಎಂಬ ಪ್ರಕ್ರಿಯೆಗೊಳಗಾಗಲೇಬೇಕು. ಕ್ಷಣಶಃ ಕಣಶಶ್ಚೈವ ವಿದ್ಯಾಮರ್ಥಂ ಚ ಸಾಧಯೇತ್.. ವಿದ್ಯೆಯನ್ನು ಪಡೆಯಲು ಕ್ಷಣಕ್ಷಣದ ಪ್ರಯತ್ನ ಅಗತ್ಯ ಎಂಬುದು ಸುಭಾಷಿತ ಸಾರ...!
      ಕಲಿಕಾ ಪ್ರಕ್ರಿಯೆ ಎಲ್ಲರಿಗೂ ಒಂದೇ ರೀತಿಯಾಗಿರಬೇಕಾಗಿಲ್ಲ. ಕೆಲವರು ಬೆಳಗಾತ ಬೇಗನೆದ್ದು ಓದಿದರೆ ಹಲವರು ತಡರಾತ್ರೆಯವರೆಗೂ ಓದುವರು. ಸಂಗೀತವನ್ನಾಲಿಸುತ್ತಾ ಓದುವ ಕೆಲ ಮಂದಿಯಿದ್ದರೆ ಬಹುಮಂದಿಗೆ ಸೂಜಿ ಬಿದ್ದರೂ ಕೇಳುವ ಮೌನ ವಾತಾವರಣ ಬೇಕು. ಗಟ್ಟಿ ಓದು, ಮೌನ ಓದು, ನಡೆದು, ಕುಳಿತು, ಮಲಗಿ, ವಿವಿಧ ಭಂಗಿಗಳ ಓದು ಹೀಗೆಲ್ಲಾ ಭಿನ್ನತೆಗಳು ಕಲಿಕಾ ಸೌಧದ ವಿವಿಧ ಸೋಪಾನಗಳು. ಹಾಗಾದರೆ ಕಲಿಕೆ ಹೇಗಿದ್ದರೆ ಚೆನ್ನ….? ತಿಳಿಯೋಣ ಬನ್ನಿ…..
▪️ಪೂರ್ವಾಭಿಮುಖವಾಗಿ ಕುಳಿತು ಓದುವುದು ಅತ್ಯಂತ ಸೂಕ್ತ.
▪️ಸಾಧ್ಯವಾದಷ್ಟೂ ಮೌನವಾದ ಪರಿಸರದಲ್ಲಿ ಓದಬೇಕು.
▪️ಬೆಳಗಾತ (ಬ್ರಾಹ್ಮೀ ಮುಹೂರ್ತದಲ್ಲಿ) ಎದ್ದು ಓದುವುದು ಅತ್ಯುತ್ತಮ. ಆದರೆ ರಾತ್ರೆಯೊಂದಿಗೆ ಒಗ್ಗಿಕೊಂಡಿದ್ದರೆ ಅದನ್ನೇ ಮುಂದುವರಿಸುವುದು ಸೂಕ್ತ. 
▪️ಆರೋಗ್ಯವಂತರಾಗಿರಲು ಕನಿಷ್ಠ 7 ಗಂಟೆಗಳ ನಿದ್ದೆ ಅನಿವಾರ್ಯ. 
▪️ನಿದ್ದೆಗೆಟ್ಟು ಓದಿದರೆ ಆರೋಗ್ಯದಲ್ಲಿ ಏರುಪೇರಾಗುವುದೆಂಬುದನ್ನು ಮರೆಯದಿರೋಣ.‌
▪️ಒಂದು ಬಾರಿ ಕಲಿಕೆಗೆ ಆರಂಭಿಸಿದರೆ ಕನಿಷ್ಠ 45 ನಿಮಿಷಗಳವರೆಗಾದರೂ ನಿರಂತರ ಅಭ್ಯಾಸನಡೆಸುವ ಪ್ರಕ್ರಿಯೆಗೆ ನಿಮ್ಮ ಮನಸ್ಸನ್ನು ಹೊಂದಿಸಿಕೊಳ್ಳಿರಿ. 
▪️ಓದುತ್ತಾ ತಿನ್ನುವ ಹವ್ಯಾಸ ತೀರಾ ಕೆಟ್ಟದ್ದು ಎಂಬುದು ನಿಮ್ಮ ಗಮನದಲ್ಲಿರಲಿ. ಹಾಗಾದಾಗ ತಿಂಡಿಗಳ ಪ್ಯಾಕೇಟ್ ಗಳು ಖಾಲಿಯಾಗಿ ಹೊಟ್ಟೆ ತುಂಬಬಹುದಾದರೂ ಕಲಿಕೆ ಸಾಗದು ನೆನಪಿಡಿ. 
▪️ಹೆಚ್ಚು ಹೊತ್ತು ಓದಲು ಚಹಾ, ಕಾಫಿ ಸಹಕಾರಿ ಎಂದು ತಿಳಿದು ಮರುಳಾಗದಿರಿ.
▪️ಕಠಿಣ ವಿಷಯಗಳನ್ನು ಬೆಳಗ್ಗೆಯೂ ಸ್ವಲ್ಪ ಸರಳ ವಿಷಯಗಳನ್ನು ರಾತ್ರೆಯೂ ಓದುವುದು ಸೂಕ್ತ. 
▪️ಅಂದರೆ ಮನಸ್ಸು ನಿರಾಳವಾಗಿರುವ ಸಮಯದಲ್ಲಿ ಕಠಿಣ ವಿಷಯಗಳ ಕಲಿಕೆ ಸಾಗಲಿ
▪️ವೇಳಾಪಟ್ಟಿಯ ಅನುಸಾರ ಓದುವುದನ್ನು ರೂಢಿಸಿಕೊಳ್ಳಿರಿ.
▪️ಒಂದೇ ವಿಷಯಕ್ಕೆ ಜೋತುಬೀಳದೆ ಎಲ್ಲಾ ವಿಷಯಗಳಿಗೂ ಮಹತ್ವ ನೀಡಿರಿ.
▪️ಎಲ್ಲಾ ವಿಷಯಗಳೂ‌ ಬಾಯಿ ಓದಿಗೆ ನಿಲುಕದು. ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಇಂಗ್ಲೀಷ್ ಮೊದಲಾದ ವಿಷಯಗಳ ಅಧ್ಯಯನಕ್ಕೆ ಓದಿನ ಜತೆ ಬರಹ ಕೂಡ ಮುಖ್ಯ ಮರೆಯದಿರಿ. 
▪️ಓದಿ ಮನನ ಮಾಡಿಕೊಂಡ ವಿಷಯವನ್ನು ಬರೆದು ಕಲಿತಾಗ ವಿಷಯ ದೃಢಗೊಳ್ಳುತ್ತದೆ.. ತಿಳಿದಿರಲಿ.  
▪️ಪರೀಕ್ಷೆ ಬಂದಾಗ ಮಾತ್ರ ಓದುವ ಜಾಯಮಾನ ತಮ್ಮದೇ….? ಅದು ವ್ಯರ್ಥ ‌ಪ್ರಯತ್ನ. ಯುದ್ದ ಕಾಲೇ ಶಸ್ತ್ರಾಭ್ಯಾಸಃ ಇದು ನಿಷ್ಪ್ರಯೋಜಕ ನೆನಪಿಡಿ. 
▪️ಪ್ರತಿದಿನದ ಓದು ಕಲಿಕೆ ಹಾದಿಯ ಜಯದ ಸೋಪಾನ. ನಿಶ್ಚಿತ ಫಲಿತವ್ಯಕ್ಕೆ ನಿರಂತರ ಕಲಿಕೆಯೇ ಪ್ರತಿಫಲನ 
.......................................... ಪುಷ್ಪಲತಾ ಎಂ
ಸಹಶಿಕ್ಷಕಿ
ಸರಕಾರಿ ಪ್ರೌಢಶಾಲೆ ವಳಾಲು
ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ
Mob : +91 99009 00456
*******************************************


Ads on article

Advertise in articles 1

advertising articles 2

Advertise under the article