-->
ಪ್ರೀತಿಯ ಪುಸ್ತಕ : ಸಂಚಿಕೆ - 39

ಪ್ರೀತಿಯ ಪುಸ್ತಕ : ಸಂಚಿಕೆ - 39

ಪ್ರೀತಿಯ ಪುಸ್ತಕ
ಸಂಚಿಕೆ - 39

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ 

                                    ಪುಟ್ಟ ಪುಟಾಣಿ ಮೊಲ
            ಪ್ರೀತಿಯ ಮಕ್ಕಳೇ, ಮೊಲ ಮುದ್ದು ಮುದ್ದು ಪ್ರಾಣಿ. ಅದರ ಚುರುಕುತನ ಎಲ್ಲರಿಗೂ ಇಷ್ಟವಾಗುತ್ತದೆ. ಈ ಪುಸ್ತಕ ಒಂದು ಪುಟ್ಟ ಪುಟಾಣಿ ಮೊಲದ ಕತೆ ಹೇಳುತ್ತದೆ. ಪುಟ್ಟ ಮೊಲಕ್ಕೆ ಏನೋ ಒಂದು ಸಣ್ಣ ಚಿಂತೆ, ಅಲ್ಲಲ್ಲಾ, ಅದರ ಮಟ್ಟಿಗೆ ಅದೊಂದು ದೊಡ್ಡ ಚಿಂತೆಯೇ ಹೌದು. ಪ್ರತಿಯೊಬ್ಬರೂ ತನಗಿಂತ ದೊಡ್ಡ ಇದ್ದಾರೆ, ತಾನು ಇಷ್ಟು ಚಿಕ್ಕದು, ಗಜ್ಜರಿಯಷ್ಟೇ ಚಿಕ್ಕದು.. ಎಂಬುದೇ ಅದರ ಚಿಂತೆ. ಚಿಕ್ಕದು ಅಂತ ಬೇರೆಯವರು ತೊಂದರೆ ಕೊಡುತ್ತಾರೆ ಎಂಬುದು ಬಹಳ ಕಿರಿಕಿರಿ. ‘ಯಾವಾಗ ದೊಡ್ಡವರಾಗುವುದಪ್ಪಾ’ ಅನ್ನುವ ಚಿಂತೆ ನಿಮಗೂ ಆಗಾಗ ಆಗುತ್ತಿರಬಹುದಲ್ಲಾ... ಮತ್ತೆ ಅದರ ಚಿಂತೆ ಹೇಗೆ ಪರಿಹಾರವಾಗಿರಬಹುದು ಅನ್ನುವುದನ್ನು ಮೊದಲು ಊಹಿಸಿನೋಡಿ. ಆಮೇಲೆ ಓದಿ ನೋಡಿ.
       ಉದಯ ಗಾಂವಕರ ಅವರು ಮೊಲ, ಅದರ ಕುಟುಂಬ, ಪರಿಸರದ ಚಿತ್ರಗಳನ್ನು ಬಹಳ ಸುಂದರವಾಗಿ ಬಿಡಿಸಿದ್ದಾರೆ. ಕತೆ ಜೊತೆಗೆ ಚಿತ್ರಗಳೂ ಸಾಗುತ್ತವೆ. ಇದು ದ್ವಿಭಾಷಾ ಪುಸ್ತಕ. ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳು ಇದರಲ್ಲಿ ಇವೆ. 
ಲೇಖಕರು: ರಾಬರ್ಟ್ ಕ್ರೂಸ್  
ಅನುವಾದ: ಲೀಲಾ ಗರಡಿ
ಚಿತ್ರಗಳು: ಉದಯ ಗಾಂವಕರ
ಪ್ರಕಾಶಕರು: ಭಾರತ ಜ್ಞಾನ ವಿಜ್ಞಾನ ಸಮಿತಿ-ಕರ್ನಾಟಕ (ಈ ಪುಸ್ತಕಗಳು ಬೇಕಾದಲ್ಲಿ ನೀವು ಇವರನ್ನು ಸಂಪರ್ಕಿಸಬಹುದು – ಶ್ರೀನಿವಾಸ್ – 9611447102)
ಬೆಲೆ: ರೂ.80
ನಾಲ್ಕು ಐದನೆಯ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************


     

Ads on article

Advertise in articles 1

advertising articles 2

Advertise under the article