ಪ್ರೀತಿಯ ಪುಸ್ತಕ : ಸಂಚಿಕೆ - 38
Friday, December 23, 2022
Edit
ಪ್ರೀತಿಯ ಪುಸ್ತಕ
ಸಂಚಿಕೆ - 38
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ, ಸೂರ್ಯಕಾಂತಿ ಹೂ, ಚಿಟ್ಟೆ ಅಂತ ಯೋಚಿಸುವಾಗಲೇ ಕಣ್ಣೆದುರು ಬಣ್ಣಗಳು ಕುಣಿದಾಡುವ ಹಾಗೆ ಆಗುತ್ತದೆ. ಈ ಕತೆಯಲ್ಲಿ ಬರುವ ಕಾಂಚನಾಗೂ ಹಾಗೇ ಹೂಗಳು, ಚಿಟ್ಟೆಗಳು ಅಂದರೆ ಇಷ್ಟ. ಚಿಟ್ಟೆಗಳನ್ನು ಹಿಡಿವ ಆಸೆ. ಹಿಡಿಯಲಿಕ್ಕೆ ಸುಲಭವಾಗಿ ಸಿಗುವುದಿಲ್ಲ. ಅವಳಿಗೆ ಚಿಟ್ಟೆ ಹಿಡಿಯಲು ಆಗುವುದಿಲ್ಲ ಅಂತ ಅವಳ ತಮ್ಮ ಅವಳನ್ನು ಚುಡಾಯಿಸುತ್ತಾನೆ. ಅವಳಿಗೆ ಬೇಸರವಾಗುತ್ತದೆ. ಆಗ ಅವಳು ಸೂರ್ಯಕಾಂತಿ ಹೂವಿನ ಒಂದು ಸುಂದರವಾದ ಚಿತ್ರ ಮಾಡುತ್ತಾಳೆ. ಆ ಹೂವಿನ ಚಿತ್ರ ಎಷ್ಟು ಸುಂದರವಾಗಿತ್ತೆಂದರೆ ಚಿಟ್ಟೆ ಬಂದು ಆ ಹೂವಿನ ಮೇಲೆಯೇ ಕುಳಿತುಕೊಳ್ಳುತ್ತದೆ. ಮತ್ತೆ ಒಂದು ಚಿಟ್ಟೆ, ಮತ್ತೆ ಇನ್ನೊಂದು ಚಿಟ್ಟೆ. ಅವಳು ಚಿಟ್ಟೆ ಹಿಂದೆ ಹೋಗಬೇಕಾಗಿಲ್ಲ, ಚಿಟ್ಟೆಗಳೇ ಅವಳ ಹಿಂದೆ ಬಂದಿವೆ. ಕಾಂಚನಾಗೆ ಎಷ್ಟು ಸಂಭ್ರಮವಾಗಿರಬೇಕಲ್ಲಾ. ಆಮೇಲೆ ಚಿಟ್ಟೆ ಹಿಡಿದಳೇ, ಚಿಟ್ಟೆಗಳ ಹಿಂದೆ ಅವಳು ಓಡಿದಳೇ.. ಏನು ಮಾಡಿದಳು.. ಅವಳ ತಮ್ಮ ಆಮೇಲೆ ಏನು ಮಾಡಿದ.. ಎಲ್ಲವನ್ನೂ ಸುಂದರವಾದ ಚಿತ್ರಗಳೊಂದಿಗೆ ಓದಿ ಆನಂದಿಸಿ.
ಲೇಖಕರು: ಜಯಂತಿ ಮನೋಕರನ್
ಅನುವಾದ: ಎಸ್ತರ್ ಅನಂತಮೂರ್ತಿ
ಚಿತ್ರಗಳು: ಸುಜಶ ದಾಸ್ ಗುಪ್ತ
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ (ಈ ಪ್ರಕಾಶಕರ ಪುಸ್ತಕಗಳು ಬೇಕಿದ್ದಲ್ಲಿ ಇವರನ್ನು ಸಂಪರ್ಕಿಸಬಹುದು – ಮೋಹನ – 9980181718)
ಬೆಲೆ: ರೂ.9 (ಈಗ ಬೆಲೆ ಬದಲಾಗಿರಬಹುದು)
ನಾಲ್ಕು ಐದನೆಯ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************