-->
ಸಂಚಾರಿಯ ಡೈರಿ : ಸಂಚಿಕೆ - 24

ಸಂಚಾರಿಯ ಡೈರಿ : ಸಂಚಿಕೆ - 24

ಸಂಚಾರಿಯ ಡೈರಿ : ಸಂಚಿಕೆ - 24

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
                    
         ಬ್ರಹ್ಮಪುತ್ರ ಭಾರತದ ಅತ್ಯಂತ ದೊಡ್ಡ ನದಿಗಳಲ್ಲಿ ಒಂದು. ಅಸ್ಸಾಂನ ಈ ಜೀವನದಿಗೆ ಹಲವಾರು ಉಪನದಿಗಳು. ಆ ಉಪನದಿಗಳಲ್ಲಿ ಸ್ಫಟಿಕ ಶುದ್ಧತೆಯ ಮತ್ತು ಹೊಳಪು ಹೊಂದಿದ ನದಿ ಧನಶ್ರಿ ನದಿ. ಈ ನದಿಯ ಪಕ್ಕದಲ್ಲಿ ಅಷ್ಟೊಂದು ಜನಪ್ರಿಯವಲ್ಲದ ತಾಣವೊಂದಿದೆ. ಅದೇ 'ಭೈರಬ್‌ಕುಂಡ', ಇದು ಅಸ್ಸಾಂನ ಉಡಾಲ್ಗುರಿ ಜಿಲ್ಲೆಯಲ್ಲಿದೆ.. 
       ಬರೀ ಉಪನದಿ ಇದ್ರೆ ಅಂದ್ರೆ ಅದೊಂದು ಪ್ರವಾಸೀ ತಾಣಾನಾ, ಅಂತಾ ಕೇಳ್ಬೇಡಿ! ಇದು ಪ್ರಖ್ಯಾತಿ ಪಡೆದಿರೋದು ಎರಡು ಕಾರಣಕ್ಕಾಗಿ. ಒಂದು ಈ ತಾಣ ಅಸ್ಸಾಂನ ಪಕ್ಕದ ಸುಂದರ ರಾಜ್ಯಕ್ಕೆ ಗಡಿಯಾಗಿದೆ. ಎರಡನೆಯದಾಗಿ ವೀಸಾವೇ ಅಗತ್ಯವಿಲ್ಲದ ಒಂದು ದೇಶಕ್ಕೆ ಪ್ರವೇಶ ದ್ವಾರವಾಗಿದೆ. ಆ ರಾಜ್ಯ ಅರುಣಾಚಲ ಪ್ರದೇಶ, ದೇಶ ಭೂತಾನ್.
     ಆಳೆತ್ತರದ ಪ್ರವೇಶ ದ್ವಾರವೊಂದು 'Welcome to Bhutan' ಸ್ವಾಗತಿಸುತ್ತದೆ. ಜಗತ್ತಿನಲ್ಲೆ ಅತ್ಯಂತ ಖುಷಿಯಿಂದ ಜೀವಿಸುವ ಜನಾಂಗವಿರುವ ದೇಶ ಭೂತಾನ್. ಇಲ್ಲಿ ಸ್ವಲ್ಪ ದೂರದವರೆಗೆ ಹೋಗಲು ಬಿಡುತ್ತಾರೆ, ಆದರೆ ದೇಶದ ಒಳಗೆ ಪ್ರವಾಸ ಮಾಡಲು‌, ತಿರುಗಾಡಲು ಬೇರೆ formalities ಪೂರ್ಣ ಮಾಡ ಬೇಕಾಗುತ್ತದೆ.
     ಇನ್ನಾ ಪಕ್ಕದಲ್ಲೇ ಅರುಣಾಚಲದ ಸೀಮೆ ಇರೋದರಿಂದ ಅಲ್ಲಿಗೂ ತೆರಳಬಹುದು. ದಾರಿಯುದ್ದಕ್ಕೂ ಹಸಿರ ವೈಭವ ತೋರುವ ಬೆಟ್ಟಗುಡ್ಡಗಳೇ ತುಂಬಿ ಇಡೀ ಪ್ರದೇಶಕ್ಕೆ ನವವೈಭವ ನೀಡುತ್ತವೆ. ಮಳೆಗಾಲದಲ್ಲಿ‌ ಬೆಟ್ಟಗಳ ಮೇಲಿಂದ ಹರಿವ ಚಿಕ್ಕ ಝರಿಗಳು ಶಿರಾಡಿ-ಚಾರ್ಮಾಡಿಯ ಅನುಭವ ನೀಡುತ್ತದೆ. ಬಹುಜನರಿಗೆ ಪರಿಚಯವಿಲ್ಲದ ಕಾರಣ ಈ ತಾಣ ಇಂದಿಗೂ ಹಸಿಯಾಗಿದೆ, ನೈಜ ರೂಪದಲ್ಲಿದೆ.
ಮುಂದೊಂದು ದಿನ ಅಸ್ಸಾಂ ಹೋದರೆ ಭೈರಬ್‌ಕುಂಡ ನೋಡೋಕೆ ಮರೆಯಬೇಡಿ!
......................................... ಸುಭಾಸ್ ಮಂಚಿ 
ಕಾಡಂಗಾಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
YouTube channel:
https://youtube.com/@thesilentsanchari4227
******************************************

Ads on article

Advertise in articles 1

advertising articles 2

Advertise under the article