
ಪ್ರೀತಿಯ ಪುಸ್ತಕ : ಸಂಚಿಕೆ - 37
Friday, December 16, 2022
Edit
ಪ್ರೀತಿಯ ಪುಸ್ತಕ
ಸಂಚಿಕೆ - 37
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ.... ಹಳ್ಳಿಯಲ್ಲಿ ಬೆಳೆದ ಮಕ್ಕಳಿಗೆ ಮೊಟ್ಟೆಯಿಂದ ಕೋಳಿಮರಿ ಆಗುವ ಕಥೆ ಕೇಳಿ, ನೋಡಿ ಗೊತ್ತಿರುತ್ತದೆ. ದಿನನಿತ್ಯವೂ ನಮ್ಮ ಜೀವನದಲ್ಲಿ ಎಷ್ಟೊಂದು ಅಚ್ಚರಿಗಳು, ಅದ್ಭುತಗಳು ನಡೆಯುತ್ತಿರುತ್ತವೆ. ಅವುಗಳ ಬಗ್ಗೆ ಮೊದ ಮೊದಲು ಏನೇನೋ ಪ್ರಶ್ನೆಗಳೂ ಮೂಡುತ್ತವೆ. ಪ್ರಶ್ನೆಗಳಿವೆ ಉತ್ತರ ಹುಡುಕಲು ಶುರುಮಾಡಿದರೆ, ಇನ್ನೂ ಏನೇನೋ ಅದ್ಭುತ ವಿಚಾರಗಳು ಗೊತ್ತಾಗುತ್ತವೆ. ನಮ್ಮ ಪರಿಸರ ಅಚ್ಚರಿಗಳ ಒಂದು ದೊಡ್ಡ ಖಜಾನೆ. ಕೋಳಿ ಬಸಿರಲ್ಲಿ ಮೊಟ್ಟೆ ರೂಪುಗೊಳ್ಳವುದು ಹೇಗೆ ಎಂಬಲ್ಲಿಂದ ತೊಡಗಿ, ಮೊಟ್ಟೆ ಒಡೆದು ಮರಿ ಹೊರಬರುವ ತನಕದ ಕತೆ ಈ ಪುಸ್ತಕದಲ್ಲಿ ಚಿತ್ರ ಮತ್ತು ಸಾಹಿತ್ಯ ಮೂಲಕ ಸುಂದರವಾಗಿ ಚಿತ್ರಣಗೊಂಡಿದೆ. ಪ್ರಕೃತಿಯಲ್ಲಿ ಇಂತಹ ನೂರಾರು ಸಾವಿರಾರು ವಿಚಾರಗಳಿವೆ. ಇಂತಹ ಪುಸ್ತಕಗಳನ್ನು ಓದುತ್ತಾ, ಕಣ್ಣಾರೆ ಪರಿಸರವನ್ನು ನೋಡುತ್ತಾ, ಅರ್ಥಮಾಡಿಕೊಳ್ಳುವುದು ಒಂದು ಸುಂದರ ಅನುಭವ. ಈ ಪುಸ್ತಕ ದ್ವಿಭಾಷೆಯಲ್ಲಿದೆ. ಅಂದರೆ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಇವೆ. ಓದಿ ನೋಡುತ್ತೀರಾ?
ಲೇಖಕರು: ಮಿಲಿಸೆಂಟ್ ಸೆಲ್ ಸ್ಯಾಮ್
ಅನುವಾದ: ಟಿ.ಎ.ಪ್ರಶಾಂತ್ ಬಾಬು
ಚಿತ್ರಗಳು: ಉದಯ ಗಾಂವಕರ
ಪ್ರಕಾಶಕರು: ಭಾರತ ಜ್ಞಾನ ವಿಜ್ಞಾನ ಸಮಿತಿ-ಕರ್ನಾಟಕ (ಈ ಪುಸ್ತಕಗಳು ಬೇಕಾದಲ್ಲಿ ನೀವು ಇವರನ್ನು ಸಂಪರ್ಕಿಸಬಹುದು – ಶ್ರೀನಿವಾಸ್ - 9611447102)
ಬೆಲೆ: ರೂ.80
ಏಳನೆ, ಎಂಟನೆಯ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************