ಪ್ರೀತಿಯ ಪುಸ್ತಕ : ಸಂಚಿಕೆ - 35
Friday, December 2, 2022
Edit
ಪ್ರೀತಿಯ ಪುಸ್ತಕ
ಸಂಚಿಕೆ - 35
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ.... ಈ ಪುಟ್ಟ ಫಕ್ರು ಇದ್ದಾನಲ್ಲಾ, ಬಹಳ ಗಡಿಬಿಡ ಹುಡುಗ, ಅವನನ್ನು ಕೀಟಲೆ ಫಕ್ರು, ಕೆರಳಿದ ಫಕ್ರು ಅಂತ ಕೂಡಾ ಕರೆಯುತ್ತಿದ್ದರು. ಯಾಕೆ ಗೊತ್ತಾ? ಅವನು ಚಿಕ್ಕ ಚಿಕ್ಕ ವಿಷಯಗಳಿಗೂ ಚಿಂತೆ ಮಾಡುವ, ಗಾಬರಿ ಬೀಳುವ ಹುಡುಗ. ಕರೆಂಟ್ ಇಲ್ಲ ಅಂದರೆ ಅದಕ್ಕೂ ಗಾಬರಿ. “ಅಯ್ಯೋ, ಕರೆಂಟು ಇಲ್ಲ, ಬೆಳಕು ಇಲ್ಲ, ನಾನು ಹೇಗೆ ಓದುವುದು? ನಾನು ಓದದಿದ್ದರೆ ಹೇಗೆ ಪಾಸ್ ಆಗುವುದು? ನಾನು ಫೈಲ್ ಆದರೆ ಏನು ಮಾಡುವುದು..?” – ಹೀಗೆ ಚಿಂತೆಯೇ ಚಿಂತೆ. ಅವನ ತಾಯಿ ಹೇಳುತ್ತಿರುತ್ತಾರೆ, “ಫಕ್ರು, ನೀನು ಯಾವಾಗಲೂ ಸುಮ್ಮನೇ ಗಾಬರಿಗೊಳ್ಳುತ್ತೀಯಾ, ನಿನ್ನ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಪ್ರಯತ್ನ ಮಾಡುವುದೇ ಇಲ್ಲ!” ಇಂತಹ ಫಕ್ರುದ್ದೀನನ ಮನೆಯಲ್ಲಿ ಒಮ್ಮೆ ಫ್ರಿಜ್ ಸಂಪೂರ್ಣ ಕೆಟ್ಟು ಹೋಗುತ್ತದೆ. ಫಕ್ರುವಿನ ತಲೆ ಕೂಡಾ ಕೆಟ್ಟು ಹೋಗುತ್ತದೆ. ಫ್ರಿಜ್ ಇಲ್ಲದೆ ಬದುಕುವುದು ಹೇಗೆ, ಬೇಸಿಗೆಯಲ್ಲಿ ತಣ್ಣೀರು ಇಲ್ಲದೆ ಇರುವುದು ಹೇಗೆ – ಫಕ್ರುವಿಗೆ ಚಿಂತಯೇ ಚಿಂತೆ. ಆದರೆ ಈ ಸಾರಿ ಅವನು ಅಮ್ಮನ ಹೇಳಿಕೆ ಮೇರೆಗೆ ತನ್ನ ಸಮಸ್ಯೆ ತಾನೇ ಬಗೆಹರಿಸುತ್ತಾನೆ. ಪುಸ್ತಕ ಓದಿ, ಅವನ ಹುಡಕಾಟ, ಸಮಸ್ಯೆ ಬಗೆಹರಿಸಿದ ರೀತಿ ಎಲ್ಲವೂ ಗೊತ್ತಾಗುತ್ತದೆ. ಚಂದದ ಪುಸ್ತಕ, ಚಂದದ ಚಿತ್ರಗಳು.
ಲೇಖಕರು: ಮೀನು ಥಾಮಸ್
ಅನುವಾದ: ಶಾಲಿನಿ ಜೈಕುಮಾರ್
ಚಿತ್ರಗಳು: ತನ್ವಿ ಭಟ್
ಪ್ರಕಾಶಕರು: ತುಲಿಕಾ ಪಬ್ಲಿಷರ್ಸ್
ಬೆಲೆ: ರೂ.110
5+ ವಯಸ್ಸಿನವರಿಗಾಗಿ ಇದೆ, ನಾಲ್ಕನೆ, ಐದನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************