ಭಾರತ್ ಸೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ - 2022
Wednesday, December 21, 2022
Edit
ಭಾರತ್ ಸೌಟ್ಸ್ ಮತ್ತು ಗೈಡ್ಸ್
ಅಂತರಾಷ್ಟ್ರೀಯ ಸಾಂಸ್ಕೃತಿಕ
ಜಾಂಬೂರಿ - 2022
21ರಿಂದ 27 ಡಿಸೆಂಬರ್ 2022
ಆಳ್ವಾಸ್ ಆವರಣ, ವಿದ್ಯಾಗಿರಿ,
ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
◾ಕೃಷಿಸಿರಿ - ಎ.ಜಿ.ಕೊಡ್ಗಿ ಆವರಣದಲ್ಲಿ 12 ಎಕರೆ ವಿಸ್ತಾರದ ಪಾರಂಪರಿಕ ತರಕಾರಿ ತೋಟ.
100 ವಿಧ ತರಕಾರಿಗಳ ಅತ್ಯಾಕರ್ಷಕ ನೈಜ ತೋಟ. ದೇಶ-ವಿದೇಶಗಳ ಬಾಳೆ, ತೆಂಗು, ಧಾನ್ಯ, 530 ವಿಧ ಭತ್ತ, ವಿವಿಧ ಗೆಡ್ಡೆ ಗೆಣಸುಗಳು, ವಿಶಾಲ ನೈಜ ಪುಷ್ಪಾಲಂಕಾರದಿಂದ ಸುತ್ತುವರಿದ ಕೃಷಿ ಸಿರಿ ಆವರಣ.
◾ ವಿಜ್ಞಾನಮೇಳ : ಪ್ರಾಥಮಿಕದಿಂದ ಸ್ನಾತಕೋತ್ತರದವರೆಗಿನ ವಿದ್ಯಾರ್ಥಿಗಳು ಅಗತ್ಯವಾಗಿ ನೋಡಲೇ ಬೇಕಾದ ವಿವಿಧ ವಿಜ್ಞಾನ ಮಾದರಿಗಳ ಪ್ರದರ್ಶನ.
◾ಪುಸ್ತಕಮೇಳ : ಪ್ರಾದೇಶಿಕ, ಪ್ರಾಂತೀಯ, ದೇಶೀಯ ಮತ್ತು ಅಂತಾರಾಷ್ಟ್ರೀಯ ಭಾಷೆಗಳ ಅಸಂಖ್ಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ.
◾ ಕಲಾಮೇಳ : ದೇಶ-ವಿದೇಶಗಳ ಪ್ರತಿಭಾನ್ವಿತ ಕಲಾವಿದರ ಸಂಗಮದ ಚಿತ್ರಕಲೆ, ಶಿಲ್ಪಕಲೆ, ವ್ಯಂಗ್ಯ ಚಿತ್ರ ಹಾಗೂ ಫೋಟೋಗ್ರಫಿ ರಚನೆ ಮತ್ತು ಪ್ರದರ್ಶನ.
◾ ಆಹಾರೋತ್ಸವ ಮೇಳ : ಸಾಂಪ್ರದಾಯಿಕ ಮತ್ತು ಆಧುನಿಕ ವೈವಿಧ್ಯಮಯ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರಗಳ ಮೇಳ
◾ಪ್ರತಿನಿತ್ಯ 5 ವೇದಿಕೆಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು :
▪️ಆಳ್ವಾಸ್ ನುಡಿಸಿರಿ ವೇದಿಕೆ
▪️ಡಾ| ವಿ.ಎಸ್. ಆಚಾರ್ಯ ವೇದಿಕೆ
▪️ಕೃಷಿಸಿರಿ ವೇದಿಕೆಗಳಲ್ಲಿ
◾ಕೆ.ವಿ.ಸುಬ್ಬಣ್ಣ ವೇದಿಕೆಯಲ್ಲಿ ಸಂಜೆ 5.30ರಿಂದ ರಾತ್ರಿ 9.00ರವರೆಗೆ
◾ಕೈಮಗ್ಗ, ಖಾದಿ, ರೇಷ್ಮೆ, ಕರಕುಶಲ ವಸ್ತುಗಳು, ತಿಂಡಿ ತಿನಿಸುಗಳ ದೇಸಿ ಮಳಿಗೆಗಳು.
◾1000ಕ್ಕೂ ಮಿಕ್ಕಿದ ವೈವಿಧ್ಯಮಯ ಮತ್ತು ದಿನವಹಿ ಅಗತ್ಯವಸ್ತುಗಳ ಮಾರಾಟ ಮಳಿಗೆಗಳು
◾ಬೇರೆಲ್ಲೂ ದೊರೆಯದ, ಪ್ರತಿಯೊಬ್ಬರೂ ಕುಟುಂಬ ಸಮೇತ ಅಗತ್ಯವಾಗಿ ನೋಡಲೇಬೇಕಾದ ಜಾಂಬೂರಿ ಉತ್ಸವ.
◾ ಆಬಾಲ ವೃದ್ಧರಾಗಿ ಎಲ್ಲರಿಗೂ ಅಗತ್ಯದ ಮತ್ತು ಅನುಕೂಲದ ಆಕರ್ಷಕ ಸಾಂಸ್ಕೃತಿಕ ಜಾಂಬೂರಿ.