-->
ಬದಲಾಗೋಣವೇ ಪ್ಲೀಸ್ - 77

ಬದಲಾಗೋಣವೇ ಪ್ಲೀಸ್ - 77

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು

                

        ಇತ್ತೀಚೆಗೆ ಜೀವ ವೈವಿಧ್ಯತೆಗಳ ಬಗ್ಗೆ ಆಸಕ್ತಿಕರ ವಿಚಾರವೊಂದನ್ನು ತಿಳಿದೆನು. ಪ್ರಕೃತಿಯಲ್ಲಿ ಅತ್ಯಂತ ಶ್ರೇಷ್ಠ ಎನಿಸಿಕೊಂಡಿರುವ ಕಣಕಣದಲ್ಲೂ ಅದ್ಭುತ ಶಕ್ತಿಯನ್ನು ಹೊಂದಿರುವ ಜೇನುತುಪ್ಪದ ಕತೆ. ಸುಮಾರು ಅಂದಾಜು 450 ಗ್ರಾಂ ನಷ್ಟು ಜೇನುತುಪ್ಪವಾಗಲು 1152 ಜೇನು ನೊಣಗಳು ಸುಮಾರು 18246 ಕಿಲೋ ಮೀಟರ್ ಸಂಚರಿಸಿ 45 ಮಿಲಿಯನ್ ಹೂಗಳ ಮಕರಂದವನ್ನು ಹೀರಬೇಕಂತೆ. ಅಂದರೆ ಪ್ರತಿಯೊಂದು ಜೇನುನೊಣವು 155 ಕಿಲೋ ಮೀಟರ್ ಚಲಿಸಬೇಕಾಗುತ್ತದೆ. ಇದು ಅದ್ಭುತ ವಿಚಾರ. ಜೇನುತುಪ್ಪದ ಬಿಂದು ಬಿಂದುವಿನಲ್ಲೂ ಅದರ ಪರಿಶ್ರಮ ಹಾಗೂ ಶ್ರದ್ಧೆ ಯನ್ನು ಕಾಣಬಹುದು.
       ಜೇನುತುಪ್ಪ ಶ್ರೇಷ್ಠತೆ ಪಡೆಯಲು ಜೇನುನೊಣದ ಹಿಂದಿನ ಪರಿಶ್ರಮ ಹೇಗೆ ಕಾರಣವೋ ಅದೇ ರೀತಿ ನಮ್ಮ ಸಾಧನೆಗೂ ಅವಿರತ ಶ್ರದ್ಧೆ,  ಪ್ರಯತ್ನ, ನಿರಂತರ ಸಾಧನೆ ಅತ್ಯಗತ್ಯವಾಗಿದೆ. ಟೀಕೆಗಳಿಗೆ ಮಾತಿನ ಮೂಲಕ ಉತ್ತರಿಸದೆ ಕ್ರಿಯೆಯ ಮೂಲಕ ಉತ್ತರಿಸಲು ಕಲಿಯಬೇಕು. ಮಕ್ಕಳೇ ನಿಮ್ಮ ಸಾಧನೆಯ ಹಾದಿಗೆ ಸದಾ ಕ್ರಿಯಾಶೀಲವಾಗಿರುವ ಜೇನು ನೊಣ ಸ್ಫೂರ್ತಿಯಾಗಲಿ. ಪ್ರತಿಯೊಂದು ಸಾಧನೆಯ ಹಿಂದಿನ ಪರಿಶ್ರಮ ಹಾಗೂ ಶ್ರದ್ದೆಯನ್ನು ಅರಿಯುವ ಮನಸ್ಸು ನಮ್ಮದಾದರೆ ನಾವು ಕೂಡಾ ಸಾಧಕರಾಗಬಹುದು. ಬನ್ನಿ ಈ  ಬದಲಾವಣೆಗೆ  ನಾವೆಲ್ಲ ತೆರೆದುಕೊಳ್ಳೋಣ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?.
...........................  ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು
Mob:  +91 99802 23736
********************************************


Ads on article

Advertise in articles 1

advertising articles 2

Advertise under the article