-->
ಮಕ್ಕಳ ಕವನಗಳು : ಚಿಂತನ

ಮಕ್ಕಳ ಕವನಗಳು : ಚಿಂತನ

ಕವನ ರಚನೆ : ಚಿಂತನ 
8ನೇ ತರಗತಿ 
ಸರಕಾರಿ ಪ್ರೌಢಶಾಲೆ, ಮಳಲಿ
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ


              ಓ ಮನುಜ
             ----------------
ಅಮೂಲ್ಯವಾದ ಸಂಪನ್ಮೂಲ ನೀರು
ನೀರನ್ನು ಉಳಿಸುವಲ್ಲಿ ನೀ 
ಎಲ್ಲರನ್ನೂ ಮೀರು
        ಕಸ ಹಾಕಬೇಡ ನದಿಗಳಿಗೆ
        ಅಪಾಯ ತಂದಿಕ್ಕಬೇಡ 
        ಸಕಲ ಜೀವ ಸಂಕುಲಗಳಿಗೆ
ಕಾರ್ಖಾನೆಯ ವಿಷ ಹೊಗೆಯನ್ನು 
ನೀ ಉಸಿರಾಡಬೇಡ
ನಿನ್ನ ಪರಿವಾರಕ್ಕೆ ಎಂದಿಗೂ ನೀ ಹೊರೆಯಾಗಬೇಡ
       ಎಲ್ಲಿ ನೋಡಿದರೂ ರೋಗದ ರಾಗ
       ಅದನ್ನೆಲ್ಲ ನಿಲ್ಲಿಸು ನೀನು ಈಗ
ಪರಿಸರವನ್ನು ಉಳಿಸು ಓ ಮನುಜ
ಇಲ್ಲದಿದ್ದರೆ ರೋಗದಿಂದ ಬಳಲುವುದು 
ಈ ಸಮಾಜ
       ಜಾತಿ ಮತ ಧರ್ಮಗಳ ಗಲಾಟೆಯಲ್ಲಿ
      ನೀ ಹೋಗುವೆ ಎಲ್ಲಿ?
      ಜಾತಿ ಮತ ಧರ್ಮಗಳ ಮರೆತು 
      ನೀನು ಜಗತ್ತಿಗೆ ಪಸರಿಸು 
      ಸ್ನೇಹ ಭಾಂದವ್ಯದ ಸಂದೇಶವನು
ಹೆಣ್ಣು ಎಂದಿಗೂ ಒಲಿದರೆ ನಾರಿ 
ಮುನಿದರೆ ಮಾರಿ
ಕೆಟ್ಟ ಯೋಚನೆಗಳೊಂದಿಗೆ 
ಹಿಡಿಯಬೇಡ ನೀ ತಪ್ಪು ದಾರಿ
...................................................... ಚಿಂತನ 
8ನೇ ತರಗತಿ 
ಸರಕಾರಿ ಪ್ರೌಢಶಾಲೆ, ಮಳಲಿ
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************




              ಗೆಳೆತನ - ಕವನ
            ------------------------
ಸ್ನೇಹವೆಂಬುವುದೊಂದು ಸುಂದರ ಬಂಧನ
ಮರೆಯಲಾಗದ ಅನುರಾಗ ಚಂದನ
     ಸ್ನೇಹವಿದ್ದರೆ ನಮ್ಮ ಬದುಕಲ್ಲಿ 
     ಎಂದೆಂದೂ ಸಿರಿತನ
     ಬೇಕಾದವರು ಕೈ ಬಿಟ್ಟಾಗ 
    ಕೈ ಹಿಡಿಯುವುದೇ ಈ ಗೆಳೆತನ
ಜಗತ್ತಿಗೆ ಪಸರಿಸೋಣ ಈ ಗೆಳೆತನ
ದೂರಾಗಿಸೋಣ ಎಲ್ಲರ 
ಮನಸ್ಸಲ್ಲಿರುವ ದ್ವೇಷ ಹಗೆತನ
...................................................... ಚಿಂತನ 
8ನೇ ತರಗತಿ 
ಸರಕಾರಿ ಪ್ರೌಢಶಾಲೆ, ಮಳಲಿ
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************


             ನೀರು
          -------------
ಜೀವ ನೀನೆ ಜೀವನ ನೀನೆ
ಗಾಳಿ ಬೆಳಕು ಜೊತೆಗೆ 
ನೀರು ಬೇಕು ತಾನೆ
      ನೀರನ್ನು ಉಳಿಸುವ ನಿನ್ನ ಕಾಯಕ
      ಮಾಡಬಹುದು ನಿನ್ನನ್ನು ಜಗತ್ತಿನ ನಾಯಕ
ಕಾಡನ್ನು ಉಳಿಸು ನಾಡನ್ನು ಬೆಳೆಸು
ನೀರಿನ ಅಭಾವವನ್ನು ಎಂದೆಂದಿಗೂ ಮರೆಸು
      ತೋಡು ಇಂಗುಗುಂಡಿಯ
      ಮರೆಸು ಅಂತರ್ಜಲದ ಕೊರತೆಯ
ನಾಶ ಮಾಡಬೇಡ ಮರಗಿಡಗಳನ್ನು 
ನೀ ಮನುಜ
ನಾಶ ಮಾಡಿದರೆ ನೀರಿನ ಅಭಾವದಿಂದ ಬಳಲುವುದು ಈ ಸಮಾಜ
...................................................... ಚಿಂತನ 
8ನೇ ತರಗತಿ 
ಸರಕಾರಿ ಪ್ರೌಢಶಾಲೆ, ಮಳಲಿ
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article