
ಪ್ರೀತಿಯ ಪುಸ್ತಕ : ಸಂಚಿಕೆ - 33
Friday, November 18, 2022
Edit
ಪ್ರೀತಿಯ ಪುಸ್ತಕ
ಸಂಚಿಕೆ - 33
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ.... ಪುಸ್ತಕವೆಂದರೆ ದುಂಬಿಯ ಹಾಗೆ ಅಂತ ಈ ಪುಸ್ತಕ ಹೇಳುತ್ತದೆ. ಯಾಕೆ ಅದು ದುಂಬಿಯ ಹಾಗೆ ಅಂತ ಕೂಡಾ ವಿವರಿಸುತ್ತದೆ. ಯಾಕೆಂದರೆ ನಮ್ಮ ತಲೆ ಒಳಗೆ ಝಂಯ್ಗುಡುತ್ತಾ ವಿಷಯವ ಮೆಲ್ಲನೆ ಉಸುರುವುದಂತೆ.. ಹೌದಲ್ಲಾ.. ಈಗ ನೀವು ಹೇಳಿ, ನಿಮಗೆ ಪುಸ್ತಕ ಅಂದರೆ ಏನು ಅನಿಸುತ್ತದೆ.. ಮತ್ತು ಯಾಕೆ ಹಾಗೆ ಅನಿಸುತ್ತದೆ ಅಂತ. ಈ ಪುಸ್ತಕದ ಉದ್ದಕ್ಕೂ ಪುಸ್ತಕ ಅಂದರೆ ಏನು ಅಂತ ನಾನಾ ರೀತಿಯ ವಿವರಣೆ ಇದೆ. ಅದಕ್ಕೆ ಪೂರಕವಾಗಿ ಅತ್ಯಂತ ಸುಂದರ ಚಿತ್ರಗಳಿವೆ. ಚಿತ್ರಗಳನ್ನು ನೋಡುತ್ತಾ ಒಂದಿಷ್ಟು ಕಾಲ ಕಳೆಯಬಹುದು. ಒಂದು ಪುಟಕ್ಕೆ ಒಂದೇ ವಾಕ್ಯ. ಎಂತೆಂತಹ ವಿಷಯಕ್ಕೆ ಪುಸ್ತಕಗಳನ್ನು ಹೋಲಿಸಿದ್ದಾರೆ ಗೊತ್ತಾ.. ಓದುವಾಗ ಹೌದಪ್ಪಾ ಹೌದು ಅನಿಸಿಬಿಡುತ್ತದೆ. ಇನ್ನೊಂದೇ ಒಂದು ಹೇಳುತ್ತೇನೆ ಕೇಳಿ, “ಪುಸ್ತಕವೆಂದರೆ ಬೀಜದ ಹಾಗೆ, ನವಚಿಂತನೆಗಳ ತಾ ಮೊಳೆಸುವುದು” ಎಷ್ಟು ಚೆನ್ನಾಗಿದೆ ಅಲ್ವಾ? ಉಳಿದವುಗಳನ್ನು ನೀವೇ ಓದಿ ನೋಡುವಿರಾ? ಓದುವ ಮೊದಲು ನಿಮ್ಮ ಪ್ರಕಾರ ಪುಸ್ತಕ ಎಂದರೆ ಏನು ಅಂತ ಒಂದು ಪಟ್ಟಿ ಮಾಡಿ, ಆಮೇಲೆ ಓದಿ, ಮಜಾ ಅನಿಸಬಹುದು.
ಲೇಖಕರು: ಲಾವಣ್ಯ ಕಾರ್ತಿಕ್
ಅನುವಾದ: ನಯನಾ ಕಶ್ಯಪ್
ಚಿತ್ರಗಳು: ರುಚಿ ಶಾಹ್
ಪ್ರಕಾಶಕರು: ತುಲಿಕಾ ಪಬ್ಲಿಷರ್ಸ್
ಬೆಲೆ: ರೂ.120
ನಾಲ್ಕು ವರುಷದ ಮಕ್ಕಳು ಚಿತ್ರ ನೋಡಿ ದೊಡ್ಡವರ ಜೊತೆ ಓದಿ ಆನಂದಿಸಬಹುದು, ಅಕ್ಷರ ಚೆನ್ನಾಗಿ ಪರಿಚಯ ಆದ ತಕ್ಷಣ ತಾವೇ ಓದಿಕೊಳ್ಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************