ಪ್ರೀತಿಯ ಪುಸ್ತಕ : ಸಂಚಿಕೆ - 32
Friday, November 11, 2022
Edit
ಪ್ರೀತಿಯ ಪುಸ್ತಕ
ಸಂಚಿಕೆ - 32
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ.... ಪುಟ್ಟ ಕಥೆ ಇದು. ಕಾಡಿನ ಗೆಳೆಯರಿಗೆ ತಲೆಬಿಸಿ. ದಟ್ಟ ಹಸಿರು ಕಾಡಿನಲ್ಲಿ ಅವರಿಗೆ ಬೇಡದೆ ಇರುವ ಬದಲಾವಣೆ ಆಗುತ್ತಿದೆ. ಹಸಿರು ಮಾಯವಾಗುತ್ತಿದೆ. ಬಿಸಿಲು ಹೆಚ್ಚುತ್ತಿದೆ. ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಏನು ಮಾಡುವುದು ಅಂತ ಚಿಂತೆ ಮಾಡುವಾಗ ಅದು ಹೇಗೋ ಎಲ್ಲಾ ಸರಿಯಾಗುತ್ತದೆ. ಹೇಗೆ ಸರಿಯಾಗಿರಬಹುದು? ನೀವು ಊಹಿಸಲು ಸಾಧ್ಯವಿದೆ. ನಿಮ್ಮ ಊಹೆ ಸರಿಯಾಗಿದೆಯಾ ಅಂತ ನೋಡಲು ಪುಸ್ತಕ ನೋಡಿ. ಆಗಬಹುದೇ?
ಪರಿಸರ ಸಂರಕ್ಷಣೆಯ ಕುರಿತು ಬೇರೆ ಬೇರೆ ರೀತಿಯ ಕಥೆ ಪುಸ್ತಕಗಳು ಪ್ರಕಟವಾಗಿವೆ. ನೀವು ಇವುಗಳನ್ನು ಓದುತ್ತಾ ಹೋಗುವಾಗ ತುಲನೆ ಮಾಡಿ ನೋಡಬಹುದು. ಪ್ರತಿ ಪುಟ ತುಂಬಾ ಚಿತ್ರಗಳಿವೆ. ಕೆಲವೇ ಸಾಲುಗಳಲ್ಲಿ ವಿವರ ಇದೆ. ಸರ ಸರನೆ ಓದಿ ಮುಗಿಸಬಹುದು.
ಲೇಖಕರು: ವಿಮಲೇಂದ್ರ ಚಕ್ರವರ್ತಿ
ಅನುವಾದ: ಬಸು ಬೇವಿನ ಗಿಡ
ಚಿತ್ರಗಳು: ಸ್ವಪನ್ ನಂದಿ
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ (ಈ ಪ್ರಕಾಶಕರ ಪುಸ್ತಕಗಳು ಬೇಕಿದ್ದಲ್ಲಿ ಇವರನ್ನು ಸಂಪರ್ಕಿಸಬಹುದು – ಮೋಹನ – 9980181718)
ಬೆಲೆ: ರೂ.30
ನಾಲ್ಕು ಐದನೆಯ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************