
ಪ್ರೀತಿಯ ಪುಸ್ತಕ : ಸಂಚಿಕೆ - 31
Friday, November 4, 2022
Edit
ಪ್ರೀತಿಯ ಪುಸ್ತಕ
ಸಂಚಿಕೆ - 31
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ.... ನಾಟಕ ನೋಡಲು, ನಾಟಕ ಮಾಡಲು ಇಷ್ಟಾನಾ? ಈ ಪುಸ್ತಕದಲ್ಲಿ ನಾಟಕ ಓದಬಹುದು. ಒಂದು ಚಿಕ್ಕ ಕಥೆ ಇದು, ಸೂರ್ಯ ಕಾಣದ ಊರು, ಅಲ್ಲಿ ಒಬ್ಬ ಅಜ್ಜ ಮತ್ತು ಅವರ ಜೊತೆಗೆ ಒಂದಷ್ಟು ಮಂದಿ ಮಕ್ಕಳು. ಊರವರೆಲ್ಲಾ ನಿದ್ರಾದೇವಿಯ ಪ್ರಭಾವದಲ್ಲಿ ನಿದ್ರಾಲೋಕದಲ್ಲಿ ಇದ್ದಾರೆ. ಸೂರ್ಯ ಬರಲಿಲ್ಲ, ಊರಿಗೆ ಬೆಳಕಿಲ್ಲ ಅಂತ ಅಜ್ಜನಿಗೆ ತಲೆಬಿಸಿ. ಹೀಗೆ ನಾಟಕ ಸಾಗುತ್ತದೆ. ಇಂತಹ ಸ್ಥಿತಿಗೆ ಕಾರಣ ಒಬ್ಬ ರಾಕ್ಷಸ. ಅಜ್ಜನಿಗೆ ತಾನು ಸುಮ್ಮನೆ ಕೂರುವುದು ಸರಿಯಲ್ಲ ಅನಿಸುತ್ತದೆ. ತಾನೊಬ್ಬನೇ ಸಾಹಸಕ್ಕೆ ಹೊರಡುತ್ತಾನೆ, ಆದರೆ ಮರಳಿ ಬರುವುದಿಲ್ಲ; ಮಕ್ಕಳಿಗೆ ಆತಂಕವಾಗುತ್ತದೆ, ಅವರು ಹುಡುಕಿಕೊಂಡು ಹೋಗುತ್ತಾರೆ. ಅಜ್ಜ ಎಲ್ಲಿಗೆ ಹೋದ? ಅಜ್ಜನಿಗೆ ಏನಾಯಿತು? ರಾಕ್ಷಸ ಏನು ಮಾಡುತ್ತಿದ್ದ? ಸೂರ್ಯ ಕೊನೆಗೆ ಹೇಗೆ ಬಂದ? – ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಪುಸ್ತಕ ಓದಿ. ನಾಟಕ ನೋಡುತ್ತಿದ್ದೇವೇನೋ ಎಂಬಷ್ಟು ಬಣ್ಣ ಬಣ್ಣದ, ಪುಟ ತುಂಬಿಕೊಂಡ ದೊಡ್ಡ ದೊಡ್ಡ ಚಿತ್ರಗಳು ಪುಸ್ತಕದಲ್ಲಿ ಇವೆ. ಒಂದಷ್ಟು ಪದ್ಯಗಳೂ ಇವೆ. ಚೆನ್ನಾಗಿ ರಾಗ ಹಾಕಿ ಹಾಡಬಹುದು. ಮತ್ತು ನೀವೇ ಮಕ್ಕಳು ಜೊತೆ ಸೇರಿ ಈ ನಾಟಕ ಮಾಡಬಹುದು.
ಲೇಖಕರು: ವೈದೇಹಿ
ಚಿತ್ರಗಳು: ಸುಮಂತ್ರ ಸೇನಗುಪ್ತ
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ ( ಈ ಪ್ರಕಾಶಕರ ಪುಸ್ತಕಗಳು ಬೇಕಿದ್ದಲ್ಲಿ ಇವರನ್ನು ಸಂಪರ್ಕಿಸಬಹುದು – ಮೋಹನ – 9980181718)
ಬೆಲೆ: ರೂ.125
ಆರು, ಏಳನೆಯ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಸಣ್ಣ ಮಕ್ಕಳಿಗೆ ಓದಿಹೇಳಬಹುದು
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************