-->
ಬುದ್ಧಿವಂತ ಆಮೆ - ಕಥೆ

ಬುದ್ಧಿವಂತ ಆಮೆ - ಕಥೆ

ಕಥೆ ರಚನೆ : ಪ್ರಿನ್ಸನ್ ಲಾಯ್ ಡಿ ಸೋಜ 
6ನೇ ತರಗತಿ 
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕೊಯಿಲ 
ಬಡಗನ್ನೂರು ಪುತ್ತೂರು 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

ಚಿತ್ರರಚನೆ : ಅಶ್ವಿನ್ ಕೃಷ್ಣ ಮಂಚಿ
           
        ಒಂದಾನೊಂದು ಕಾಡಿನಲ್ಲಿ ತುಂಬಾ ಪ್ರಾಣಿಗಳು ವಾಸಿಸುತ್ತಿದ್ದವು. ಆ ಕಾಡಿನಲ್ಲಿ ಒಂದು ಜಂಭದ ಸಿಂಹವಿತ್ತು. ಅದು ಯಾವಾಗಲೂ ಪ್ರಾಣಿಗಳನ್ನು ಬೇಟೆಯಾಡುತ್ತಿತ್ತು.
    ಒಂದು ದಿನ ಒಂದು ತೋಳ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿತ್ತು. ಸಿಂಹ ಎದುರಿಗೆ ಬಂದು ನಿಂತು ಹೇಳಿತು "ನೀನು ನನಗೆ ಆಹಾರವನ್ನು ತಂದು ಕೊಡಬೇಕು ಇಲ್ಲದಿದ್ದರೆ ನೀನೆ ನನ್ನ ಆಹಾರವಾಗಬೇಕು". ತೋಳ ಭಯದಿಂದ ಹೇಳಿತು, "ಮಹಾರಾಜರೆ, ನಾನು ನಿಮಗೆ ಆಹಾರವನ್ನು ತಂದು ಕೊಡುತ್ತೇನೆ". ಸಿಂಹ ಹೇಳಿತು, "ನಿನಗೆ ಎರಡು ದಿನ ಸಮಯ ಕೊಡುತ್ತೇನೆ". ತೋಳ, "ಸರಿ. ತಂದು ಕೊಡುತ್ತೇನೆ" ಎಂದಿತು. ತೋಳ ಆಹಾರವನ್ನು ಹುಡುಕಲು ಪ್ರಾರಂಭಿಸಿತು. 
       ತೋಳದ ಗೆಳೆಯ ಕಾಗೆ ಹಾರಿಕೊಂಡು ಬಂದು ತೋಳದ ಮುಂದೆ ಬಂದು ನಿಂತಿತು. ಕಾಗೆ ಕೇಳಿತು "ಯಾಕೆ ಗೆಳೆಯ ದುಖಃದಿಂದಿರುವೆ?" ತೋಳ ನಡೆದ ಎಲ್ಲಾ ವಿಷಯ ಕಾಗೆಗೆ ತಿಳಿಸಿತು. ಕಾಗೆ, "ಸರಿ ಗೆಳೆಯ ನನಗೆ ಹೊತ್ತಾಗುತ್ತಿದೆ. ನನ್ನ ಮರಿಗಳಿಗೆ ಆಹಾರವನ್ನು ತೆಗೆದುಕೊಂಡು ಹೋಗಬೇಕು". ಎಂದು ಹೇಳಿ ಕಾಗೆ ಹಾರಿಕೊಂಡು ಹೋಯಿತು. ತೋಳದ ಇನ್ನೊಂದು ಗೆಳೆಯ ಆಮೆ ಬಂದಿತು. ಆಮೆ ಕೇಳಿತು, "ಯಾಕೆ ಗೆಳೆಯ ದುಖಃದಿಂದಿರುವೆ....?" ತೋಳ ನಡೆದ ಎಲ್ಲಾ ವಿಷಯ ಆಮೆಗೆ ತಿಳಿಸಿತು. ಆಮೆ ಹೇಳಿತು, "ಗೆಳೆಯ ದುಖಃಪಡಬೇಡ, ನಾನು ನಿನಗೆ ಸಹಾಯ ಮಾಡುತ್ತೇನೆ". ಎಂದು ಹೇಳಿ ಆಮೆ ಹೋಯಿತು.  
      ಆಮೆ ಒಂದು ಉಪಾಯ ಮಾಡಿತು. ಒಂದು ದಿನ ಸಿಂಹ ಗುಹೆಯಲ್ಲಿ ಮಲಗಿಕೊಂಡು ಇರುವಾಗ ಆಮೆ ಒಂದು ಸಿಂಹದ ವೇಷ ಹಾಕಿರುವ ನಾಯಿಯನ್ನು ಕರೆದುಕೊಂಡು ಬಂದು ಗುಹೆಯ ಮುಂದೆ ತಂದು ನಿಲ್ಲಿಸಿತು. ನಾಯಿ ಸಿಂಹದ ಹಾಗೆ ಘರ್ಜನೆ ಮಾಡಿತು. ಸಿಂಹ ನನ್ನ ಹಾಗೆ ಘರ್ಜನೆ ಮಾಡುವವರು ಯಾರು ಎಂದು ಗುಹೆಯಿಂದ ಹೊರಗೆ ಬಂದಿತು. ಆಗ ಸಿಂಹ ನೀನು ಯಾರು ಎಂದು ಕೇಳಿತು. ಸಿಂಹದ ವೇಷ ಹಾಕಿರುವ ನಾಯಿ ಹೇಳಿತು, "ನಾನು ಪಕ್ಕದ ದೊಡ್ಡ ಕಾಡಿನ ರಾಜ ಸಿಂಹ". ಹಾಗೆ ಹೇಳಿದ ಕೂಡಲೆ ಸಿಂಹ ಭಯದಿಂದ ನಡುಗಲು ಪ್ರಾರಂಭಿಸಿತು. ಆಗ ಸಿಂಹದ ವೇಷ ಹಾಕಿರುವ ನಾಯಿ ಹೇಳಿತು, "ಇನ್ನು ಮುಂದೆ ನಾನೇ ಈ ಕಾಡಿನ ರಾಜ" ಎಂದು ಹೇಳಿತು. ಮರುದಿನ ಸಿಂಹ ಭಯದಿಂದ ಓಡಿಹೋಯಿತು. ಆಗ ಸಿಂಹದ ವೇಷ ಹಾಕಿರುವ ನಾಯಿಗೆ ತೋಳ ಧನ್ಯವಾದ ಹೇಳಿತು. ಮತ್ತೆ ಕಾಡಿನ ಪ್ರಾಣಿಗಳು ಸುಖದಿಂದ ಮತ್ತು ಸಂತೋಷದಿಂದ ಬಾಳಿದವು.
............................. ಪ್ರಿನ್ಸನ್ ಲಾಯ್ ಡಿ ಸೋಜ 
6ನೇ ತರಗತಿ 
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕೊಯಿಲ 
ಬಡಗನ್ನೂರು ಪುತ್ತೂರು 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article