ಭಾಗ್ಯಲಕ್ಷ್ಮಿ ಬರೆದಿರುವ ಕವನಗಳು
Wednesday, October 26, 2022
Edit
ಮಕ್ಕಳ ಜಗಲಿಯಲ್ಲಿ
8ನೇ ತರಗತಿ ವಿದ್ಯಾರ್ಥಿನಿ
ಭಾಗ್ಯಲಕ್ಷ್ಮಿ
ಬರೆದಿರುವ ಕವನಗಳು
ಸೈನಿಕರು - ಕವನ
-----------------------
ದೇಶವನ್ನು ಕಾಯುವ ಸೈನಿಕರು
ದೇಶಕ್ಕೆ ಕಾವಲಾದ ಪ್ರಾಮಾಣಿಕರು
ದೇಶದ ಗುಡಿಗೆ ಇವರೇ ದೇವರು
ದೇಶದ ಗತವೈಭವ ಕಂಡಾಗ
ಇವರೇ ವೀರ ಪುತ್ರರು
ದೇಶಸೇವೆಗೆ ಸೈನಿಕರ ಪಾತ್ರ ದೊಡ್ಡದು
ದೇಶಕ್ಕೆ ಸೈನಿಕರ ಕೊಡುಗೆ ಅಪಾರವಾದದ್ದು
ದೇಶವು ಮುನ್ನಡೆ ಸಾಗಲು ಬೇಕು ಸೈನಿಕರು
ಈ ಕೇಸರಿ, ಬಿಳಿ, ಹಸಿರು
ಸೈನಿಕರ ಎದೆಯ ಬಿಸಿ ಉಸಿರು
ಅಜರಾಮರವಾಗಿದೆ ಸೈನಿಕರ ಹೆಸರು
ಸೈನಿಕರು ತನ್ನ ನಾಡಿಗಾಗಿ
ಕುಟುಂಬವನ್ನೇ ಬಿಟ್ಟು ಬಂದರು.
ಈಗ ಯೋಚಿಸತಕ್ಕದ್ದು ಸೈನಿಕರ ಭಾವ ಬಂಧನ
ಇವರು ಧ್ವಜಹಾರಿಸಿ ಹಾಡಿದರು ಜನಗಣಮನ
................................................ ಭಾಗ್ಯಲಕ್ಷ್ಮಿ
8ನೇ ತರಗತಿ
ಸರಕಾರಿ ಉನ್ನತೀಕರಿಸಿದ ಹಿರಿಯ
ಪ್ರಾಥಮಿಕ ಶಾಲೆ, ಸಾವ್ಯ ,
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ದೀಪಾವಳಿ ಕವನ
---------------------
ಮನೆ ಮನೆಯಲ್ಲೂ ದೀಪಾವಳಿ ಸಡಗರವ
ಮುಖದಲ್ಲಿ ಅದೆಂಥಾ ಸಂತೋಷವ
ನಲಿವಿನಲ್ಲಿ ಕುಣಿಯಿತು ನಮ್ಮ ಜೀವ
ಆಹಾ! ಇದೆಂಥಾ ಸದ್ಭಾವ
ಕಾಮಧೇನುವಿನ ಮನದ ಹೂವಿನ ಮಾಲೆ
ಇದರಿಂದ ನನ್ನ ಮನೆಯೆಲ್ಲ ಕಳೆ
ಶುರುವಾಯಿತು ಪಟಾಕಿಯ ಸದ್ದು
ದೀಪಕ್ಕೆ ದೀಪ ಹಚ್ಚುವ ಕ್ರಮ
ಇದೇ ನಮಗೆ ಇಂದಿನ ಸಂಭ್ರಮ
ಮನೆಮನೆಯಲ್ಲೂ ಇಂಪಿನ ಪ್ರೇಮ
ಇದೇ ಮೂರುದಿನಗಳ ದೀಪಾವಳಿ
ನೋವು ನಲಿವುಗಳ ಕಚಗುಳಿ
ಹಲವಾರು ನೆನಪುಗಳ ಹಾವಳಿ
ಇದೇ ಸುಂದರವಾದ ದೀಪಾವಳಿ
................................................ ಭಾಗ್ಯಲಕ್ಷ್ಮಿ
8ನೇ ತರಗತಿ
ಸರಕಾರಿ ಉನ್ನತೀಕರಿಸಿದ ಹಿರಿಯ
ಪ್ರಾಥಮಿಕ ಶಾಲೆ, ಸಾವ್ಯ ,
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ನಗು - ಕವನ
---------------
ಖುಷಿಗೂ ಮೀರಿದ ಬಾಂಧವ್ಯ ನಗು
ಮನಸ್ಸು ಎಂಬ ತಾರೆಗಳ ಮಿನುಗು
ಈ ಮಿನುಗುವಿನಲ್ಲಿ ಯಾವತ್ತು
ಬಾರದು ಗುಡುಗು
ಎಲ್ಲವನ್ನು ನೋಡುವ ನಮ್ಮ ಕಣ್ಣಿಗೂ
ಎಲ್ಲಾ ಶಬ್ದಗಳನ್ನು ಆಲಿಸುವ ಕಿವಿಗೂ
ಆನಂದ ಕೊಡುವ ವಿಷಯ ಮಗುವಿನ ನಗು
ಜೀವನ - ಕವನ
-------------------
ಮೂರು ಅಕ್ಷರದ ಪದ ಜೀವನ
ಗಾಳಿಯಂತೆ ಸಂಚರಿಸುವ
ಜೀವನವು ನೋವು - ನಲಿವಿನ ಬಂಧನ
ಮೋಸ ವಂಚನೆಗಳ ಮೇಲೆ ಚಂದನ
ಜೀವನವು ಕಲಿಸುವುದು ಪ್ರೀತಿ ಅಕ್ಕರೆ
ಮನ ಭಾವಿಸುವುದು ಕೇವಲ ಉತ್ತರೆ
ಆದರೆ , ನಮ್ಮ ಆಸೆ ಬಯಸುವುದು ಅಪ್ಸರೆ
ಹಿಂದೂ-ಮುಸ್ಲಿಂ ರ ಗೆಳೆತನವು
ಅವರಿಬ್ಬರ ಅನುಬಂಧನವು
ಇದೇ ಕಲಿಸಿತು ನಮ್ಮ ಮನದಾಳದ ಜೀವನವು
ಗೆಳೆತನ - ಕವನ
-------------------
ನನ್ನ ನಿನ್ನಯ ಗೆಳೆತನವು
ಅದು ನೂರಾರು ಜನುಮದ ಅನುಬಂಧವು
ನನ್ನ ನಿನ್ನ ಪ್ರೀತಿಯ ಪಯಣ
ನಾನೇ ನಿನಗೆ ಅಹ್ವಾನ
ನಮ್ಮ ಮನ - ಮನಗಳ ಆಮಂತ್ರಣ
ನೀನೆ ನನ್ನ ಪಾಲಿಗೆ ಆಗಮನ
ನಾನು ದಿನವೂ ಆಚರಿಸಲು ಬಯಸುವೆ
ನನ್ನ ನಿನ್ನ ಗೆಳೆತನ
ಈ ದಿನವನ್ನು ಸ್ಮರಿಸ ಬಯಸುವೆ ಅನುದಿನ
ಕೊರೋನಾ ವೈರಸ್ - ಕವನ
-----------------------------------
ಎಲ್ಲಿ ನೋಡಿದರು ಅಲ್ಲಿ
ಕಾಣಸಿಗುವುದು ಕೊರೋನಾ
ಇದರಿಂದ ಬದಲಾಯಿತು ನಮ್ಮೆಲ್ಲರ ಜೀವನ
ನಿನ್ನ ಅಟ್ಟಹಾಸಕ್ಕೆ ಎಲ್ಲರ ಮನಸ್ಸು ಮೌನ
ನೀನು ಎಲ್ಲರನ್ನು ಕಾಣುವೆ ಸಮಾನ
ಕೊರೋನಾವೆಂದರೆ ಎಲ್ಲರಿಗೂ ಭಯ - ಭೀತಿ
ಇದೇ ಕೊರೋನಾವನ್ನು ಎದುರಿಸಬಹುದು
ಒಳ್ಳೆಯ ರೀತಿ
ಇದು ಜಗತ್ತನ್ನೆ ಮಾಡಿತು ಅಶಾಂತಿ
ಇದು ಎಲ್ಲರ ಬದುಕಲ್ಲಿ ನೀಡಲಿಲ್ಲ ಕಾಂತಿ
ಇದನ್ನು ಧೈರ್ಯದಿಂದ ಎದುರಿಸೋಣ ನಾವು
ಇದರಿಂದ ತಪ್ಪಿಸಬಹುದು
ಲಕ್ಷಾಂತರ ಜನರ ಸಾವು
ಇದೆಲ್ಲವನ್ನು ಸಹಿಸದ ನನ್ನ ಮನವು
ಕೊರೋನಾಗೆ ಇಲ್ಲ ಶ್ರೀಮತ-ಬಡವರ ಭೇದ
ಇನ್ನು ಮುಂದೆಯಾದರೂ ಬದುಕೋಣ
ಒಂದೇ ಭಾವದಿಂದ
ಕಲಿಸಿತು ಮನುಷ್ಯ ಜೀವದ ಪ್ರೀತಿ
ಇದು ಎಲ್ಲರಿಗೂ ಮನ ಮುಟ್ಟುವ ನೀತಿ...
................................................ ಭಾಗ್ಯಲಕ್ಷ್ಮಿ
8ನೇ ತರಗತಿ
ಸರಕಾರಿ ಉನ್ನತೀಕರಿಸಿದ ಹಿರಿಯ
ಪ್ರಾಥಮಿಕ ಶಾಲೆ, ಸಾವ್ಯ ,
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ನಮ್ಮ ದೇಶ
---------------
ನಮ್ಮ ದೇಶ ಭಾರತ
ನಮ್ಮ ದೇಶದ ಜನರು ಒಂದಾಗುತ
ತ್ರಿವರ್ಣ ಧ್ವಜವನ್ನು ಹಾರಿಸುತ
ಈ ದೇಶಕ್ಕೆ ಗೌರವ ಸಲ್ಲಿಸುತ
ನೋಡಲು ಸುಂದರ ನಮ್ಮ ದೇಶ
ಇದನ್ನು ನೋಡಲು ನನಗಾಗುತ್ತೆ ಹರ್ಷ
ಈ ಬ್ರಿಟಿಷರೆಲ್ಲ ಬರಿ ವೇಷ
ಇದೆಲ್ಲ ತಿಳಿಸಿದ್ದು ನಾನು ಓದಿದ ಕೋಶ
ನನಗಾಗಿ ದೇಶ ಏನು ಕೊಟ್ಟಿದೆ
ಎಂಬ ಯೋಚನೆ ಬಿಡಿ
ನಾನು ದೇಶಕ್ಕಾಗಿ ಏನೂ ಕೊಡಬಲ್ಲೆ
ಎಂದು ಸೂಚನೆ ನೀಡಿ
ಎಲ್ಲರಿಗೂ ಪ್ರೀತಿ, ವಿಶ್ವಾಸದಿಂದ ಆದೇಶ ಕೊಡಿ
ಯಾರಿಗೂ ಉಪದೇಶ ನೀಡಬೇಡಿ
ನಮ್ಮ ದೇಶಕ್ಕೆ ಪ್ರಾಣ ನೀಡಲು ಸಿದ್ಧರಾಗಿರಿ
ಯಾರ ಪ್ರಾಣ ತೆಗೆಯಲು ಮುಂದಾಗದಿರಿ
................................................ ಭಾಗ್ಯಲಕ್ಷ್ಮಿ
8ನೇ ತರಗತಿ
ಸರಕಾರಿ ಉನ್ನತೀಕರಿಸಿದ ಹಿರಿಯ
ಪ್ರಾಥಮಿಕ ಶಾಲೆ, ಸಾವ್ಯ ,
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ವಿದ್ಯೆ- ಕವನ
---------------
ಆರದಿರಲಿ ದೀವಿಗೆ
ಬೆಳಕನು ಕರುಣಿಸು ಬಾಳಿಗೆ
ವಿದ್ಯೆಗೆ ವಿನಯವೇ ಭೂಷಣವು
ಶಾಂತಿಗೆ ಸಹನೆಯೇ ಕಾರಣವು
ಬಾಲಗಂಗಾಧರ ತಿಲಕ್ - ಕವನ
-------------------------------------
ತೀವ್ರಗಾಮಿಗಳಲ್ಲಿ ಒಬ್ಬರಾದ
ಬಾಲಗಂಗಾಧರ ತಿಲಕ್ ರವರು
ಇವರು ಇಡೀ ದೇಶಕ್ಕೆ ತಮ್ಮ ಘೋಷಣೆಗಳಿಂದ ಪ್ರಮುಖರಾದವರು
ತಿಲಕರು "ಸ್ವರಾಜ್ಯವು ನನ್ನ ಜನ್ಮಸಿದ್ಧಹಕ್ಕು" ಎಂದು ಪ್ರಕಟಿಸಿದರು
ಇವರೆಲ್ಲರ ಪಾಲಿಗೆ ತಿಲಕ್‌ರವರು ಉತ್ತಮ ಸ್ವಾತಂತ್ಯ ಹೋರಾಟಗಾರರು
ಬಾಲಗಂಗಾಧರ ತಿಲಕ್ ಅಪ್ರತಿಮ ದೇಶಭಕ್ತ
ಇವರು ದೇಶಕ್ಕಾಗಿ ಸುರಿಸಿದರು ತಮ್ಮ ಪ್ರಾಣವೆಂಬ ರಕ್ತ
ಹಲವಾರು ಕಡೆಗಳಲ್ಲಿ ಇವರು ಜನರನ್ನು ಒಗ್ಗೂಡಿಸಿದರು
ಇದರೊಂದಿಗೆ ತಿಲಕರು ಗಣೇಶ ಮತ್ತು ಶಿವಾಜಿ
ಉತ್ಸವ ಆರಂಭಿಸಿದರು
ಇಂಗ್ಲೀಷ್ ನಲ್ಲಿ ಹರಡಿಸಿದರು ಮರಾಠ
ಎಂಬ ಪತ್ರಿಕೆ
ಪ್ರಜೆಗಳ ಮುಖದಲ್ಲಿ ಕಾಣಿಸಿತು
ಸಂತೋಷ ಎಂಬ ಹಾಡುಗಾರಿಕೆ
ಇದರ ನಂತರ ಪ್ರಾರಂಭಿಸಿದರು ಮರಾಠಿಯಲ್ಲಿ ಕೇಸರಿ ಎಂಬ ಪ್ರಕಟಣೆ
ಇದಕ್ಕಾಗಿ ತಿಲಕರ ಸಂಘಟನೆ
ಇವರನ್ನು ಪ್ರೀತಿಯಿಂದ ಕರೆದರು ಬಾಲ್
ಇವರಿಗೆ ಹುರಿದುಂಬಿಸಿದ ಲಾಲ್ ಮತ್ತು ಪಾಲ್
ಈ ಮೂವರಿಗೆ ಯಾರು ಸಮಾನವಿಲ್ಲ
ಇವರ ಸಾಧನೆಗೆ ಜಯಕಾರ ಜನರಿಂದೆಲ್ಲಾ
ನಿಮ್ಮ ಸಾಧನೆಗೆ ನನ್ನದೊಂದು ಸಲಾಂ
ಪುಸ್ತಕ - ಕವನ
---------------
ಪುಸ್ತಕದ ಒಂದೊಂದು ಹಾಳೆ
ಅದರಲ್ಲಿದೆ ಮಕ್ಕಳ ಭವಿಷ್ಯದ ಬಾಳ್ವೆ
ಓದಲು, ಬರೆಯಲು ಬೇಕು ಪುಸ್ತಕ
ಇದರಿಂದ ಬದಲಾಯಿತು ಎಲ್ಲರ ಮಸ್ತಕ
ಪುಸ್ತಕ ಬರೆಯುವ ಕಲೆ
ಇದಕ್ಕೆ ಕಟ್ಟಲಾಗದು ಬೆಲೆ
ಕಲಿಯಲು, ಓದಲು ಬೇಕು ಪುಸ್ತಕ
ಇದೇ ಕಲಿಸಿತು ಗಾಂಧಿ ತಾತನ ಚರಕ
ಗಾಂಧಿ ದೇಶದ ಯುವಜನತೆಯ ಜನಕ
ನಮ್ಮ ಮನೆ
---------------
ಪುಟ್ಟದಾದ ನಮ್ಮ ಮನೆ
ನನಗೆ ಅದೇ ಅರಮನೆ
ನಮ್ಮಮನೆ ಜನರಿಗೆ ಪ್ರೇರಣೆ
ಮೊಳಕೆ ಬರಲಿದೆ ಭತ್ತದ ತನೆ
ಅಡುಗೆ ಮನೆಯಲ್ಲಿದೆ ಹಾಲಿನ ಕೆನೆ
ದೇವರ ಮನೆಯಲ್ಲಿ ದೇವರ ಭಜನೆ
ಇದೆಲ್ಲ ನನಗೆ ಸುಂದರ ಘಟನೆ
ನಮ್ಮ ಮನೆಯಲ್ಲಿದೆ ಮುದ್ದಾದ ಶ್ವಾನ
ಅದಕ್ಕೆ ನಾನೆಂದರೆ ಪಂಚಪ್ರಾಣ
ಈ ಖುಷಿಗೆ ಬರಬಾರದು ಕೊನೆ
ಇವನ್ನೆಲ್ಲ ಅರಿತ ನಾನೇ ಜಾಣೆ
8ನೇ ತರಗತಿ
ಸರಕಾರಿ ಉನ್ನತೀಕರಿಸಿದ ಹಿರಿಯ
ಪ್ರಾಥಮಿಕ ಶಾಲೆ, ಸಾವ್ಯ ,
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************