-->
ಆರ್ಟ್ ಗ್ಯಾಲರಿ : ಕಲಾವಿದ ದಿನೇಶ್ ಹೊಳ್ಳ : ಸಂಚಿಕೆ - 17

ಆರ್ಟ್ ಗ್ಯಾಲರಿ : ಕಲಾವಿದ ದಿನೇಶ್ ಹೊಳ್ಳ : ಸಂಚಿಕೆ - 17

ಆರ್ಟ್ ಗ್ಯಾಲರಿ : ಕಲಾವಿದ ದಿನೇಶ್ ಹೊಳ್ಳ ಸಂಚಿಕೆ - 17
ART GALLERY : ನಾಡಿನ ಹೆಸರಾಂತ ಚಿತ್ರಕಲಾವಿದರ ಚಿತ್ರಕಲಾಕೃತಿಗಳ ಪ್ರದರ್ಶನ

◾ಕಲಾವಿದರ ಹೆಸರು : ದಿನೇಶ್ ಹೊಳ್ಳ 
Artist Name : DINESH HOLLA


◾ದಿನೇಶ್ ಹೊಳ್ಳ 
◾Dinesh Holla
Mesha graphics
Carstreet
Mangaluru
Dakshina Kannada
Mob : 9341116111
E-MAIL : dsholla@yahoo.com
◾ಕಲಾವಿದ , ಕವಿ , ಲೇಖಕ , ಚಾರಣ ಸಂಘಟಕ ,  
◾ಕಥೆ , ಕವನ , ಲೇಖನ , ಕಲಾವಿಮರ್ಶೆ ಮುಂತಾದವುಗಳ ಬರಹಗಾರರು 
◾ಇವರು ಬರೆದು ಪ್ರಕಟಿಸಿದ 5 ಪುಸ್ತಕಗಳು : 
▪️ಚಿಗುರು 
▪️ಅಡವಿಯ ನಡುವೆ 
▪️ಸೂರ ಕಾಂತಿಗಳು 
▪️ಬೆಟ್ಟದ ಹೆಜ್ಜೆಗಳು 
▪️ಹೊಳೆಯ ಬೆಳದಿಂಗಳು  
◾ಪಶ್ಚಿಮ ಘಟ್ಟದಿಂದ ಹಿಮಾಲಯದ ತುತ್ತ ತುದಿಯವರೆಗೆ ಇವರು ಮಾಡಿದ ಚಾರಣಗಳು 350 ಕ್ಕೂ ಹೆಚ್ಚು .  
◾ಜನಜಾಗೃತಿ ಕಾರ್ಯಕ್ರಮ : 
▪️ನೇತ್ರಾವತಿ ನದಿ ತಿರುವು ಯೋಜನೆ , ▪️ಜಲವಿದ್ಯುತ್ ಯೋಜನೆ ಬಗ್ಗೆ ಜನಜಾಗೃತಿ ಕಾರ್ಯಕ್ರಮ , 
▪️ನಾಗರಹೊಳೆ ಅಭಯಾರಣ್ಯದಲ್ಲಿ ಡಾ | ಕೆ . ಉಲ್ಲಾಸ್ ಕಾರಂತರೊಂದಿಗೆ ಹುಲಿ ಸಂರಕ್ಷಣಾ ಯೋಜನೆ.
▪️ಹುಲಿ ಗಣತಿ ಮುಂತಾದ ವನ್ಯ ಜೀವಿ ಸಂರಕ್ಷಣಾ ಕಾಠ್ಯಕ್ರಮಗಳಲ್ಲಿ ಸತತ ಭಾಗವಹಿಸುತ್ತಿದ್ದಾರೆ.  
◾ಅಂತರ್‌ರಾಷ್ಟ್ರೀಯ ಖ್ಯಾತಿ ಪಡೆದ 'ಟೀಮ್ ಮಂಗಳೂರು' ಹವ್ಯಾಸೀ ಗಾಳಿಪಟ ತಂಡದಲ್ಲಿ ಗಾಳಿಪಟ ವಿನ್ಯಾಸಕಾರನಾಗಿ ಇವರು ಮಾಡಿದ 36 ಅಡಿ ಎತ್ತರದ ಕಥಕ್ಕಳಿ ಗಾಳಿಪಟವು ಭಾರತದಲ್ಲೇ ಅತಿದೊಡ್ಡ ಗಾಳಿಪಟ “ಲಿಮ್ಯಾ ಬುಕ್ ಆಫ್ ರೆಕಾರ್ಡ್ಸ್" ನಲ್ಲಿ ದಾಖಲೆಯಾಗಿದೆ.
◾ದೇಶ ವಿದೇಶಗಳಲ್ಲಿ ಇದುವರೆಗೆ 13 ಅಂತರ್‌ರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿರುತ್ತಾರೆ . 
◾ಫ್ರಾನ್ಸ್ , ಇಟೆಲಿ , ಹಾಂಕಾಂಗ್ , ದಕ್ಷಿಣ ಕೊರಿಯಾ , ಥಾಯ್ಲೆಂಡ್ , ಶ್ರೀಲಂಕ ಮುಂತಾದ ದೇಶಗಳಲ್ಲಿ ಜರಗಿದ ಅಂತರ್‌ರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿರುತ್ತಾರೆ . 
◾ಫ್ರಾನ್ಸ್ , ಇಟೆಲಿಯಲ್ಲಿ ರೇಖಾ ಚಿತ್ರಗಳ ಪ್ರದರ್ಶನ ಮತ್ತು ಪ್ರಾತ್ಯಕ್ಕಿತೆ ಮಾಡಿರುತ್ತಾರೆ . 
◾ಇವರ ರೇಖಾ ಚಿತ್ರಗಳು ಫ್ರಾನ್ಸ್ , ಇಂಗ್ಲೆಂಡ್ , ಕೆನಡ , ಜರ್ಮನಿ , ನೆದರ್‌ಲ್ಯಾಂಡ್ , ಇಟಲಿ , ಆಸ್ಟ್ರೇಲಿಯಾ , ಕೊರಿಯಾ , ಥಾಯ್ಲೆಂಡ್ , ಶ್ರೀಲಂಕ ಮುಂತಾದ ದೇಶಗಳಲ್ಲಿ ಸಂಗ್ರಹಗೊಂಡಿವೆ.
◾ಸಮೂಹ ಚಿತ್ರಕಲಾ ಪ್ರದರ್ಶನ : ಮಂಗಳೂರು ಹಾಗೂ ದೇಶದ ಇತರ ಭಾಗಗಳಲ್ಲಿ 25 ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನದಲ್ಲಿ ಭಾಗಿ.
◾ವಿದೇಶಗಳಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ :
▪️ 2012, 2014, 2016, 2018.. DIEPPE FRANCE
▪️2011.... USIYAANG, SOUTH KOREYA.
▪️2013... SARVIYA, ITELY.


TITLE : Pathavelli... ??
SIZE : 12x12 Inches
MEDIA : Ink On PaperTITLE : Internal Dimension
SIZE : 12x12 Inches
MEDIA : Ink and Colour On PaperTITLE : Attachment Of Bond
SIZE : 12x12 Inches
MEDIA : Ink and Colour On PaperTITLE : Birth And Death
SIZE : 12x12 Inches
MEDIA : Ink On PaperTITLE : Beyond Life
SIZE : 12x12 Inches
MEDIA : Ink On PaperTITLE : Statement
SIZE : 12x12 Inches
MEDIA : Ink On PaperTITLE : Cry
SIZE : 12x12 Inches
MEDIA : Ink On PaperTITLE : Tunnel
SIZE : 12x12 Inches
MEDIA : Ink On PaperTITLE : Society
SIZE : 12x12 Inches
MEDIA : Ink On PaperTITLE : Antarya
SIZE : 12x12 Inches
MEDIA : Ink On Paper
TITLE : Play
SIZE : 12x12 Inches
MEDIA : Ink On Paper
TITLE : Right Way
SIZE : 12x12 Inches
MEDIA : Ink On Paper
TITLE : Way To Go
SIZE : 12x12 Inches
MEDIA : Ink On Paper
TITLE : Dancing
SIZE : 12x12 Inches
MEDIA : Ink On Paper
TITLE : The Player
SIZE : 12x12 Inches
MEDIA : Ink On Paper


               ಕಾಡು ನನ್ನ ಬದುಕನ್ನೇ ಬದಲಿಸಿತು. ಆರಂಭದಲ್ಲಿ ಓರ್ವ ಮಾಮೂಲಿ ಚಾರಣಿಗನಾಗಿ ಪಶ್ಚಿಮ ಘಟ್ಟವನ್ನು ಸುತ್ತಾಡುತ್ತಿದ್ದ ನನಗೆ ಕ್ರಮೇಣ ಕಾಡು ನನ್ನೊಡನೆ ಮಾತಾಡಲು ಆರಂಭಿಸಿತು. ಆಗ ಕಂಡು ಬಂದದ್ದು ಅಡವಿಯ ಒಳಗೆ ಅಡಗಿರುವ ರೋದನ. ಬಿಳಿಗಿರಿ ರಂಗನ ಬೆಟ್ಟದ ಸೋಲಿಗ ಬುಡಕಟ್ಟು ಸಮುದಾಯದವರ ಒಂದು ನರ್ತನ ಮತ್ತು ಆ ನೃತ್ಯದ ಹಿಂದಿನ ಅವರ ವೇದನೆ ನನಗೆ ರೇಖಾ ಚಿತ್ರ ಗೀಚಲು ಮತ್ತು ಕಾವ್ಯ ಸೃಷ್ಟಿಸಲು ದಾರಿ ಮಾಡಿ ಕೊಟ್ಟಿತು. ಅದುವೇ ಇಂದಿನ 'ವನ ಚೇತನಾ' ದವರೆಗೆ ಸಾಗುತ್ತಲೇ ಬಂದಿದೆ. ರೇಖೆ ಗೀಚುತ್ತೇನೆ ನಾನು ಕಂಡ ವಾಸ್ತವದ ಆಚೆಯ ಅಗೋಚರ ಸತ್ಯಗಳನ್ನು, ಹೀಗೇ ಸೃಷ್ಟಿಯಾದ ರೇಖೆಗಳು ನನ್ನೊಳಗೆ ಸಾಹಿತ್ಯದ ಹೆಜ್ಜೆಗಳನ್ನೂ ತೋರಿಸಿ ಬಿಟ್ಟಿತು. ಅಡವಿ ಜನರ ಸಂತಸಗಳು, ಸಂಕಟಗಳು ನನ್ನ ಅಭಿವ್ಯಕ್ತ ರೇಖೆ ಗಳಲ್ಲಿ ಚಲಿಸಿರುವ ಕಾರಣ ಬುಡಕಟ್ಟು ಸಮುದಾಯ ನನ್ನ ಕುಟುಂಬವಾಯಿತು. 
      ಫ್ರಾನ್ಸ್ ನ ಡೈಪ್ಪೆ ನಗರದಲ್ಲಿ 4 ಬಾರಿ ಮತ್ತು ಇಟೆಲಿಯ ಸಾರ್ವಿಯಾ ನಗರದ ಆರ್ಟ್ ಇವೆಂಟೋ ದಲ್ಲಿ ಒಂದು ಬಾರಿ ನಾನು ರೇಖಾ ಚಿತ್ರ ಪ್ರದರ್ಶನ ಮಾಡಿದಾಗ ಈ ಪ್ರದರ್ಶನಗಳಲ್ಲಿ ಭಾರತೀಯ ಬುಡಕಟ್ಟು ಸಮುದಾಯದ ಸಾಂಸ್ಕೃತಿಕ ಬದುಕನ್ನು ಚಿತ್ರಿಸಿರುವ ಕಾರಣ ಪ್ರದರ್ಶನಕ್ಕೆ ಇಟ್ಟಿರುವ ಎಲ್ಲಾ ಕಲಾಕೃತಿಗಳು ಮಾರಾಟವಾಗಲು ಕಾರಣವಾಯಿತು. ಹೀಗೇ ಮಾರಾಟ ಆದ ಮೊತ್ತದಲ್ಲಿ ಶೇಕಡಾ 35 ಭಾಗವನ್ನು ನಮ್ಮ ಪಶ್ಚಿಮ ಘಟ್ಟದ ಅಡವಿ ಮಕ್ಕಳ ವಿದ್ಯಾವಿಕಸನಕ್ಕೆ ನೀಡುವುದರ ಮೂಲಕ ವನ ಚೇತನಾ ಕೂಡಾ ಬೆಳೆಯುತ್ತಾ ಬಂತು. ಫ್ರಾನ್ಸ್ ನ ಡೈಪ್ಪೆ ಅಂತರ್ ರಾಷ್ಟ್ರೀಯ ಕೈಟ್ ಫೆಸ್ಟಿವಲ್ ನಲ್ಲಿ ಭಾರತೀಯ ಬುಡಕಟ್ಟು ಸಮುದಾಯದ ಬದುಕಿನ 100 ಅಡಿ ರೇಖಾಚಿತ್ರ ಕಲಾಕೃತಿಯನ್ನು ಮಾಡಿದಾಗ ಅಲ್ಲಿನ ಮೇಯರ್ ಸೆಬಷ್ಟಿಯನ್ ಜುಮೆಲ್ ಬೆಸ್ಟ್ ಆರ್ಟ್ ಅಚೀವಮೆಂಟ್ ಅಂತ ನನ್ನನ್ನು ಪುರಸ್ಕರಿದಾಗ ನಾನು ನನ್ನ ವೈಯಕ್ತಿಕ ಖುಷಿಗಿಂತ ನಮ್ಮ ಅಡವಿ ಮಕ್ಕಳ ವಿದ್ಯಾಭಿವೃದ್ದಿ ಬಗ್ಗೆ ತುಂಬಾ ಖುಷಿ ಪಟ್ಟಿದ್ದೆ. ಒಟ್ಟಾರೆ ನನ್ನ ಎಲ್ಲಾ ರೇಖೆಗಳು ಅಡವಿಯ ನಡುವಿನಿಂದಲೇ ಉಗಮ ಆದದ್ದು ಅದರ ಪ್ರತಿಫಲ ಕೂಡ ಅಡವಿಯ ಒಳಗೆ ಸಂಗಮ ಆಗುತ್ತಿರುವುದು ಸಂತಸದ ವಿಚಾರ.
.......................................... ದಿನೇಶ್ ಹೊಳ್ಳ 


ART GALLERY : ಮಕ್ಕಳ ಜಗಲಿಯಲ್ಲೊಂದು ಹೊಸ ಪ್ರಯೋಗ. ಚಿತ್ರಕಲಾ ಕ್ಷೇತ್ರದ ಅನೇಕ ಮಜಲುಗಳಲ್ಲಿ ಇದೂ ಒಂದು. ಚಿತ್ರ ಕಲಾವಿದ ತಾನು ಮಾಡಿದ ಕಲಾಕೃತಿಯನ್ನು ಜನರಿಗೆ ತಲುಪಿಸುವ ಮಾಧ್ಯಮವಾಗಿ ಗ್ಯಾಲರಿಗಳು ಸಹಕರಿಸುತ್ತವೆ. ಪ್ರಪಂಚದಾದ್ಯಂತ ಅನೇಕ ನಗರಗಳಲ್ಲಿ ಚಿತ್ರಕಲಾ ಗ್ಯಾಲರಿಗಳು ಕಾರ್ಯನಿರ್ಸುತ್ತವೆ. ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಿ ಮಾರಾಟವಾಗಲು ಪ್ರೇರೇಪಿಸುತ್ತವೆ. 
      ಇಂತಹ ಗ್ಯಾಲರಿಗಳಿಗೆ ಅನೇಕರು ಭೇಟಿ ಕೊಡುತ್ತಾರೆ. ಇನ್ನು ಕೆಲವರಿಗೆ ಭೇಟಿ ಕೊಡುವಂತ ಅವಕಾಶಗಳು ಲಭ್ಯವಿರುವುದಿಲ್ಲ. ಗ್ರಾಮೀಣ ಭಾಗದ ಹೆಚ್ಚಿನವರಿಗೆ ಇಂತಹ ವ್ಯವಸ್ಥೆ ಇರೋದೇ ಗೊತ್ತಿರುವುದಿಲ್ಲ..... ಈ ನಿಟ್ಟಿನಲ್ಲಿ ನಾಡಿನ ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸುವ ಮೂಲಕ ಚಿತ್ರಕಲಾ ಪೋಷಕರಿಗೂ ಕಲಾವಿದರಿಗೂ ಸೇತುವೆಯಾಗಿ ಹಾಗೂ ಚಿತ್ರಕಲಾ ಪ್ರತಿಭೆಗಳಿಗೆ ಸ್ಪೂರ್ತಿ ನೀಡುವ ಒಂದು ಪ್ರಯತ್ನ ಮಕ್ಕಳ ಜಗಲಿಯಿಂದ.....
       ಕಲಾಕೃತಿಗಳನ್ನು ಸಂಗ್ರಹ ಮಾಡಲುದ್ದೇಶಿಸುವ ಚಿತ್ರಕಲಾಪ್ರಿಯರು ನೇರವಾಗಿ ಕಲಾವಿದರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
◾Dinesh Holla
Mesha graphics
Carstreet
Mangaluru
Dakshina Kannada
Mob : 9341116111
E-MAIL : dsholla@yahoo.com
********************************************

Ads on article

Advertise in articles 1

advertising articles 2

Advertise under the article