ನಾ ಹಕ್ಕಿಯಾದರೆ...!!! ಕವನ ರಚನೆ : ಪ್ರಣಮ್ಯಾ ಜಿ.
Saturday, October 1, 2022
Edit
ಮಕ್ಕಳ ಜಗಲಿಯಲ್ಲಿ
10ನೇ ತರಗತಿ ವಿದ್ಯಾರ್ಥಿನಿ
ಪ್ರಣಮ್ಯಾ. ಜಿ
ಬರೆದಿರುವ ಕವನ
ಜಗದೆಲ್ಲೆಡೆ ಸುತ್ತುವೆ
ಮುಗಿಲಿನತ್ತ ಹಾರುವೆ
ನಾ ಹಕ್ಕಿಯಾದರೆ....!
ಗೂಡನೊಂದು ಕಟ್ಟುವೆ
ಕಾಳುಗಳನ್ನು ಹೆಕ್ಕುವೆ
ಸಂತಸದಿ ಬಾಳುವೆ
ನಾ ಹಕ್ಕಿಯಾದರೆ....!
ರೆಕ್ಕೆಗಳನ್ನು ಬಡಿಯುತ
ಮೇಲೆ - ಮೇಲೆ ಹಾರುತ
ಮುದದಿಂದ ಬೀಗುವೆ
ನಾ ಹಕ್ಕಿಯಾದರೆ...!
ಕಡಲ ಮೇಲೂ ಹಾರುವೆ
ಮುಗಿಲ ನಡುವೆ ನಲಿಯುವೆ
ಹಾಯಾಗಿ ತಿರುಗುವೆ
ನಾ ಹಕ್ಕಿಯಾದರೆ....!
ಜಗದ ಸೊಬಗ ಕಾಣುವೆ
ಮೈಮರೆತು ಕುಣಿಯುವೆ
ಹರುಷದಿ ತೇಲಾಡುವೆ
ನಾ ಹಕ್ಕಿಯಾದರೆ....!
10ನೇ ತರಗತಿ.
ಸಂತ ಜಾರ್ಜ್ ಆಂಗ್ಲ ಮಾಧ್ಯಮ
ಪ್ರೌಢ ಶಾಲೆ, ನೆಲ್ಯಾಡಿ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************