-->
ನಾವು ಸಮಾನರು - ಕಥೆ

ನಾವು ಸಮಾನರು - ಕಥೆ

ಲಹರಿ ಸಿ. ಎಲ್
5ನೇ ತರಗತಿ
ವಿಶ್ವಮಂಗಳ ಆಂಗ್ಲ ಮಾಧ್ಯಮ ಹಿ. ಪ್ರಾ. ಶಾಲೆ
ಕೊಣಾಜೆ , ಮಂಗಳೂರು 
ಮಂಗಳೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ

ಚಿತ್ರರಚನೆ : ಸುದೀಪ್ ಆಚಾರ್ಯ

       
        ಒಂದು ಊರಿನಲ್ಲಿ ಒಂದು ಉದ್ಯಾನವನವಿತ್ತು. ಅದರಲ್ಲಿ ಒಂದು ಸುಂದರವಾದ ಗುಲಾಬಿ ಗಿಡವಿತ್ತು. ಅದಕ್ಕೆ ತುಂಬಾ ಜಂಭವಿತ್ತು. ಒಂದು ದಿನ ಗುಲಾಬಿ ಹೂವು ಹೇಳಿತು, "ಎಲ್ಲರೂ ಕೇಳಿರಿ, ನನ್ನನ್ನು ಮನುಷ್ಯರು ಬಳಸುತ್ತಾರೆ ಹಾಗೂ ನನ್ನನ್ನು ಪೂಜಾ ವಿಧಿವಿಧಾನಗಳಿಗೆ ನನ್ನನ್ನು ಉಪಯೋಗಿಸುತ್ತಾರೆ ಹಾಗೂ ನಾನು ಬೇರೆ ಬೇರೆ ಬಣ್ಣಗಳಲ್ಲಿ ಬರುತ್ತೇನೆ ನನ್ನನ್ನು ನೋಡಿದರೆ ಎಲ್ಲರಿಗೂ ಇಷ್ಟ". 
ಗುಲಾಬಿ ಗಿಡದ ಮಾತು ಕೇಳಿದ ದಾಸವಾಳ ಗಿಡ, "ಎಲೈ ಗುಲಾಬಿ ಗಿಡವೇ ಇದೇನು ಈ ರೀತಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಿಯ...! ಅವರವರ ಉಪಯೋಗಕಷ್ಟೆ ನಮ್ಮನ್ನು ಉಪಯೋಗಿಸುತ್ತಾರೆ. ನನ್ನನ್ನು ದೇವರ ಪೂಜೆಗೆ ಹಾಗೂ ಔಷಧಿಗೆ ಬಳಸುತ್ತಾರೆ". ದಾಸವಾಳ ಗಿಡದ ಮಾತು ಕೇಳಿದ ಸೇವಂತಿಗೆ ಗಿಡವು, "ನಮ್ಮ ನಮ್ಮಲ್ಲಿ ಯಾರು ಹೆಚ್ಚು ಇಲ್ಲ, ಕಡಿಮೆಯೂ ಇಲ್ಲ". ಎಂದು ಹೇಳಿತು ನಾವು ಎಲ್ಲರೂ ಸಮಾನರು ಎಂದು ಹೇಳಿತು.
.......................................... ಲಹರಿ ಸಿ. ಎಲ್
5ನೇ ತರಗತಿ
ವಿಶ್ವಮಂಗಳ ಆಂಗ್ಲ ಮಾಧ್ಯಮ ಹಿ. ಪ್ರಾ. ಶಾಲೆ
ಕೊಣಾಜೆ , ಮಂಗಳೂರು 
ಮಂಗಳೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article