ಆಕಾಶ - ಕವನ ರಚನೆ : ಗ್ರೀಷ್ಮಾ
Saturday, October 1, 2022
Edit
ಮಕ್ಕಳ ಜಗಲಿಯಲ್ಲಿ
9ನೇ ತರಗತಿ ವಿದ್ಯಾರ್ಥಿನಿ
ಗ್ರೀಷ್ಮಾ
ಬರೆದಿರುವ ಕವನ
ಹಕ್ಕಿಗಳು ಹಾರುವುದು ಗಗನದಲಿ
ನಕ್ಷತ್ರಗಳು ಮಿನುಗುವುದು ಆಗಸದಲಿ
ಚಂದ್ರನು ನಗುವನು ಬಾನಂಗಳದಲಿ
ಮೋಡಗಳು ಸ್ವತಂತ್ರವಾಗಿ ಓಡಾಡುವವು
ಕಾಮನಬಿಲ್ಲು ಆಕಾಶದಲಿ ರಾರಾಜಿಸುವವು
ಉತ್ತರದಲಿ ಇರುವುದು ಧ್ರುವ ನಕ್ಷತ್ರವು
ಹಗಲು ರಾತ್ರಿಯಾಗುವುದು ಪ್ರತಿದಿನವು
ಅಮಾವಾಸ್ಯೆಯಲಿ ಕಾಣೆಯಾಗುವ ಚಂದಿರ
ಹುಣ್ಣಿಮೆಯಲಿ ಬೆಳಗುವ ಪೂರ್ಣ ಚಂದಿರ
ಮೋಡಗಳೆಡೆಯಲಿ ಮರೆಯಾಗುವ ನೇಸರ
ಮೂಡುವನು ನೋಡನೋಡುತ್ತಲೇ ಚಂದಿರ
ಹಕ್ಕಿಗಳು ಹಾರಾಡಲು ಬೇಕು ಆಕಾಶವು ವಿಮಾನಗಳು ಸಂಚರಿಸಲು ಬೇಕು ಆಕಾಶವು ತಾರೆಗಳು ಮಿನುಗಲು ಬೇಕು ಆಕಾಶವು ಇಡೀ ಭೂಮಿಯನು ಆವರಿಸಿದ ಆಕಾಶವು
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ-ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************