ದೀಪಾವಳಿ ವಿಶೇಷ ಕವನ
Monday, October 24, 2022
Edit
ಮಕ್ಕಳ ಜಗಲಿಯಲ್ಲಿ
5ನೇ ತರಗತಿ ವಿದ್ಯಾರ್ಥಿ
ನಿನಾದ್ ಕೈರಂಗಳ
ಬರೆದಿರುವ ದೀಪಾವಳಿ ವಿಶೇಷ ಕವನ
ಬೆಳಗಿಸುತ್ತೇವೆ ದೀಪ
ಅದನ್ನು ನೋಡಿದಾಗ ಕಾಣಿಸುತ್ತದೆ
ದೇವರ ರೂಪ
ಪಟಾಕಿಗಳನ್ನು ಸಿಡಿಸುವುದು
ನೋಡುವುದೇ ಚಂದ
ನಕ್ಷತ್ರಕಡ್ಡಿಯನ್ನು ಉರಿಸುವುದೇ
ನನಗಾನಂದ
ಅಪ್ಪ ತಂದ ನೀಲಿ ಬಣ್ಣದ
ಹೊಸ ಬಟ್ಟೆ
ಅದನ್ನು ನೋಡಿ ನಾನು
ತುಂಬಾ ಸಂತೋಷಪಟ್ಟೆ
ಅಂದು ನರಕಾಸುರನನ್ನು ಶ್ರೀಕೃಷ್ಣ
ಕೊಂದ ದಿನ
ಇಂದು ನಮಗೆಲ್ಲರಿಗೂ ದೀಪಾವಳಿಯ
ಸಂಭ್ರಮದ ಸುದಿನ
5ನೇ ತರಗತಿ
ಶ್ರೀರಾಮ ವಿದ್ಯಾಕೇಂದ್ರ ಹನುಮಾನ್ ನಗರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************