ದೀಪಾವಳಿ - ಕವನ ರಚನೆ: ಅನುಲಕ್ಷ್ಮಿ
Monday, October 24, 2022
Edit
ಮಕ್ಕಳ ಜಗಲಿಯಲ್ಲಿ
ಪ್ರಥಮ ಪಿಯುಸಿ ವಿದ್ಯಾರ್ಥಿನಿ
ಅನುಲಕ್ಷ್ಮಿ
ಬರೆದಿರುವ ದೀಪಾವಳಿ ವಿಶೇಷ ಕವನ
ನಮ್ಮಲ್ಲಿ ತುಂಬಿರುವ ಅಹಂ
ಕೋಪಗಳನ್ನು ದೂರಮಾಡೋಣ
ಮನೆ ಮನೆಯಲ್ಲೂ ತಳಿರು-ತೋರಣ
ಮನ-ಮನದಲ್ಲೂ ಹರುಷ ಸಂಭ್ರಮ
ನಮ್ಮಲ್ಲಿ ತುಂಬಿರುವ
ಅಜ್ಞಾನ ದೂರವಾಗಲಿ
ಸುಜ್ಞಾನ ಬೆಳಗಲಿ
ಹಣತೆಯ ಬೆಳಕು ಕತ್ತಲನ್ನು ದೂರ ಮಾಡಲಿ
ಮನೆಯ ತುಂಬಾ ಬೆಳಕನ್ನು ಪಸರಿಸಲಿ
ಸ್ನೇಹ ಪ್ರೀತಿಯೆಂಬ ಭಾವನೆಗಳನ್ನು ಬಿತ್ತೋಣ
ಎಲ್ಲರೂ ಒಂದೇ ಎಂಬ ಭಾವನೆಯಿಂದ ಇರೋಣ
ನಮ್ಮ ಮನಸ್ಸಿನಲ್ಲಿ ಬರುವ ನಕಾರಾತ್ಮಕ
ಭಾವನೆಗಳನ್ನು ದೂರ ಮಾಡೋಣ
ಸದಾ ಸಕಾರಾತ್ಮಕವಾಗಿರೋಣ
ಈ ವರುಷದ ಬೆಳಕಿನ ಹಬ್ಬವು
ಎಲ್ಲರ ಮನೆ ಮನದಲ್ಲೂ
ಒಳಿತನ್ನು ಕರುಣಿಸಲಿ..
ಪ್ರಥಮ ಪಿಯುಸಿ
ಸರಕಾರಿ ಪದವಿಪೂರ್ವ ಮಹಿಳಾ ಕಾಲೇಜು ಬಲ್ಮಠ ಮಂಗಳೂರು.
ದಕ್ಷಿಣ ಕನ್ನಡ ಜಿಲ್ಲೆ
****************************************