ಮರವಾಗು - ಕವನ
Monday, October 10, 2022
Edit
ಮಕ್ಕಳ ಜಗಲಿಯಲ್ಲಿ
10ನೇ ತರಗತಿ ವಿದ್ಯಾರ್ಥಿನಿ
ಧೃತಿ
ಬರೆದಿರುವ ಕವನ
ಉಸಿರು ನೀಡುವ ಹಸಿರು ಮರವಾಗು
ದಣಿದು ಬಂದವರಿಗೆ ಆಸರೆಯಾಗಿ
ಪಕ್ಷಿ ಸಂಕುಲಕ್ಕೆ ನೀ ಮನೆಯಾಗು
ಬಿಸಿಲಿಗೆ ಬಳಲಿ ಬಂದವರಿಗೆ ನೆರಳಾಗಿ
ಹಸಿದವರಿಗೆ ಹಣ್ಣು ಹಂಪಲು ನೀಡುವ ಮರವಾಗು
ನೆಲದಾಳಕೆ ಇಳಿದು ಸ್ಥಿರವಾಗಿ ಉಳಿದು
ನೆಲೆಯೂರಿ ಯುಗಯುಗಗಳ ವರೆಗೆ ಉಳಿದು
ಹರಡು ಸುತ್ತಮುತ್ತ ಹಸಿರ ರೆಂಬೆ
ಅರಳಲಿ ನಿನ್ನ ಮಡಿಲಲಿ ಹೂ ಕೊಂಬೆ
ಬಾನೆತ್ತರಕ್ಕೆ ಬೆಳೆದು ತಡೆ ಮೋಡವ
ಮಳೆ ಸುರಿಸಿ ಕರಗಿಸು ಕಾರ್ಮೋಡವ
ಮರವೇ ಆಗು ಇಳೆಗೆ ಚೇತನ
ನಿನ್ನಿಂದ ಮೂಡಲಿ ಎಲ್ಲೆಲ್ಲೂ ಹೊಸತನ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ....
******************************************