-->
ಪ್ರೀತಿಯ ಪುಸ್ತಕ : ಸಂಚಿಕೆ - 28

ಪ್ರೀತಿಯ ಪುಸ್ತಕ : ಸಂಚಿಕೆ - 28

ಪ್ರೀತಿಯ ಪುಸ್ತಕ
ಸಂಚಿಕೆ - 28

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ 

                                            ಇಲಿಗಳ ಥಕ್ಕ ಥೈ       
           ಪ್ರೀತಿಯ ಮಕ್ಕಳೇ.... ಇಲಿಗಳು ಹೇಗೆ ಥಕ್ಕ ಥೈ ಮಾಡಬಹುದು. ಮಕ್ಕಳು ನೀವು, ಹೇಳಿದ ತಕ್ಷಣ ಕಲ್ಪನೆ ಮಾಡಿಕೊಳ್ಳಬಲ್ಲಿರಿ. ಅಲ್ಲವೇ? ವೈದೇಹಿಯವರ ಸಂಪಾದಕತ್ವದಲ್ಲಿ ಅನೇಕ ಮಕ್ಕಳ ಸಾಹಿತಿಗಳು ಬರೆದ ಹತ್ತು ಕಥೆಗಳು ಇಲ್ಲಿವೆ. ಅವುಗಳಲ್ಲಿ ಒಂದೆರಡು ಅಜ್ಜಿ ಕಥೆಗಳು ಮತ್ತು ಜನಪದ ಕಥೆಗಳೂ ಇವೆ. ‘ಆಯಿ ಮಾತಾಯೆ, ಆನು ಮಾತಾಯೆ’, ಪೀಪಿಯ ಪರಾಕ್ರಮ, ಗುಂಡು ಜಿಲೇಬಿ, ಗಂಡು ಗುಬ್ಬಿಯ ಕಾಡಿಗೆಗಣ್ಣು – ಹೀಗೆ ಕಥೆಗಳ ಹೆಸರುಗಳೇ ಒಂದು ರೀತಿಯಲ್ಲಿ ಆಕರ್ಷಕವಾಗಿವೆ. ಪ್ರತಿಯೊಂದು ಕಥೆಗೂ ಒಂದು ಅಥವಾ ಎರಡು ಚಿತ್ರಗಳಿವೆ. ಗುಂಡು ಜಿಲೇಬಿ ಕಥೆಯಲ್ಲಿ ಅಜ್ಜಿ ತಯಾರಿಸಿದ ಗರಿಗರಿ ಜಿಲೇಬಿ, ತಟ್ಟೆಯಿಂದ ಹೊರಗೆ ಬಿದ್ದು ಗುಡು ಗುಡು ಓಡುವುದು, ಅಜ್ಜಿ ಅದರ ಹಿಂದೆ ಓಡುವುದು.. ಎಷ್ಟು ಮಜವಾಗಿರುವ ದೃಶ್ಯ. ಅಜ್ಜಿಗೆ ಸಹಾಯ ಮಾಡಲು ಮತ್ತೆ ಒಂದಷ್ಟು ಪ್ರಾಣಿಗಳು ಹಿಂದೆ ಒಡುತ್ತಾರೆ. ಆಮೇಲೆ ಜಿಲೇಬಿಗೆ ಸಿಗುವುದು ನರಿ. ನರಿ ಹೇಗೆ ಜಿಲೇಬಿಯನ್ನು ಹಿಡಿದುಕೊಂಡಿತು? ಆಮೇಲೆ ಏನು ಮಾಡಿತು? ತಿಳಿದುಕೊಳ್ಳಲು ಪುಸ್ತಕ ಓದಿ. 
ಸಂಪಾದಕರು: ವೈದೇಹಿ
ಚಿತ್ರಗಳು: ಸುರೇಶ ಡಿ ಹಾಲಭಾವಿ
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ (ಈ ಪ್ರಕಾಶಕರ ಪುಸ್ತಕಗಳು ಬೇಕಿದ್ದಲ್ಲಿ ಇವರನ್ನು ಸಂಪರ್ಕಿಸಬಹುದು – ಮೋಹನ – 9980181718) 
ಬೆಲೆ: ರೂ.85 
ಆರು, ಏಳನೆಯ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************Ads on article

Advertise in articles 1

advertising articles 2

Advertise under the article