-->
ಪಕ್ಷಿಗಳ ಸಭೆ - ಕಥೆ

ಪಕ್ಷಿಗಳ ಸಭೆ - ಕಥೆ

ಸಾತ್ವಿ ಡಿ
6ನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ 
ದರ್ಭೆತ್ತಡ್ಕ ಪುತ್ತೂರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ

ಚಿತ್ರರಚನೆ : ಅಶ್ವಿನ್ ಕೃಷ್ಣ ಮಂಚಿ


           ಒಂದಾನೊಂದು ಊರಿನಲ್ಲಿ ಒಂದು ಕಾಡಿತ್ತು. ಅಲ್ಲಿ ಪ್ರಾಣಿ-ಪಕ್ಷಿಗಳು ವಾಸವಾಗಿದ್ದವು. ಒಂದು ದಿನ ಪಕ್ಷಿಗಳು ಗುಂಪು ಸೇರಿದ್ದವು. ಆವಾಗ ಎಲ್ಲಾ ಪಕ್ಷಿಗಳು ಕಾಗೆಯನ್ನು ನೋಡಿ ನಗುತ್ತಾ ಕಾಗಕ್ಕ ಕಾಗಕ್ಕ ನೀನು ಕಪ್ಪಾಗಿರುವೆ ಮತ್ತು ನಿನಗೆ ಹಾಡು, ನೃತ್ಯ ಯಾವುದು ಬರಲ್ಲ ಎಂದು ತಮಾಷೆ ಮಾಡುತ್ತಿದ್ದವು. 
        ಆದರೆ ಕೋಗಿಲೆ ಮಾತ್ರ ಸುಮ್ಮನಿತ್ತು. ಯಾಕೆಂದರೆ ಅದು ಕಾಗೆಯ ಗೆಳತಿಯಾಗಿತ್ತು. ಕಾಗೆ ಬೇಸರದಿಂದ ಹೋಯಿತು. ಕೋಗಿಲೆ ಬಂದು ಸಮಾಧಾನ ಮಾಡಿ, "ನಾನು ಕೂಡ ಕಪ್ಪಾಗಿರುವೆ ನನ್ನ ಧ್ವನಿಯಿಂದ ಎಲ್ಲರೂ ಮೈಮರೆಯುತ್ತಾರೆ ಹಾಗಾಗಿ ನನ್ನನ್ನು ತಮಾಷೆ ಮಾಡುವುದಿಲ್ಲ. ನೀನು ಪಿಟೀಲು ನುಡಿಸುವುದನ್ನು ಕಲಿ. ನಾವು ನಾಳೆ ಒಂದು ಸಭೆಯನ್ನು ಏರ್ಪಾಡು ಮಾಡೋಣ. ನಾನು ಹಾಡು ಹೇಳುತ್ತೇನೆ ನೀನು ಪಿಟೀಲು ನುಡಿಸು" ಎಂದು ಕೋಗಿಲೆ ಹೇಳುತ್ತದೆ. ಕಾಗೆ, "ಆಯ್ತು ಕೋಗಿಲೆ" ಎನ್ನುತ್ತದೆ. 
       ಕೋಗಿಲೆ ಎಲ್ಲಾ ಪಕ್ಷಿಗಳನ್ನು ಸಭೆಗೆ ಕರೆಯುತ್ತದೆ. ಕಾಗೆ ಪಿಟೀಲು ನುಡಿಸುವುದನ್ನು ಕಲಿತು ಸಭೆಗೆ ಬಂದಿತ್ತು. ಸಭೆಗೆ ಎಲ್ಲಾ ಪಕ್ಷಿಗಳು ಬಂದವು. ಕೋಗಿಲೆ ಹಾಡು ಹೇಳುವುದನ್ನು ಶುರುಮಾಡಿತು. ಕಾಗೆ ಪಿಟೀಲು ನುಡಿಸುವುದನ್ನು ಶುರುಮಾಡಿತು. ಎಲ್ಲಾ ಪಕ್ಷಿಗಳಿಗೆ ಕಾಗೆ ಪಿಟೀಲು ನುಡಿಸುವುದನ್ನು ನೋಡಿ ಆಶ್ಚರ್ಯವಾಯಿತು. ಎಲ್ಲಾ ಪಕ್ಷಿಗಳು ಚಪ್ಪಾಳೆ ತಟ್ಟಿದವು. ಕಾಗೆಗೆ ತುಂಬಾ ಖುಷಿಯಾಯಿತು. ಪಕ್ಷಿಗಳು ಊಟ ಮುಗಿಸಿಕೊಂಡು ಹೋದವು. ಕಾಗೆ ಕೋಗಿಲೆಗೆ ಧನ್ಯವಾದ ಹೇಳಿತು.
................................................... ಸಾತ್ವಿ ಡಿ
6ನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ 
ದರ್ಭೆತ್ತಡ್ಕ ಪುತ್ತೂರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************





Ads on article

Advertise in articles 1

advertising articles 2

Advertise under the article