ಸ್ವರಚಿತ ಕತೆ : ರಂಜಿತ್ ನ ಬುದ್ಧಿವಂತಿಕೆ
Tuesday, September 20, 2022
Edit
4ನೇ ತರಗತಿ.
ಸ.ಉ.ಹಿ.ಪ್ರಾ.ಶಾಲೆ. ಮುಂಡೂರು.
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಚಿತ್ರರಚನೆ : ಸುದೀಪ್ ಆಚಾರ್ಯ
ಒಂದು ಊರಿನಲ್ಲಿ ರಂಜಿತ್ ಎನ್ನುವ ಒಬ್ಬ ಹುಡುಗ ಮಣ್ಣಿನಲ್ಲಿ ಆಟವಾಡುತ್ತಿದ್ದ. ಆಗ ಅವನ ಅಮ್ಮ ಅವನನ್ನು ಕರೆದಳು. ರಂಜಿತ್ ಅಮ್ಮನ ಬಳಿ ಬಂದನು. ಆಗ ಅಮ್ಮ ರಂಜಿತ್ ಗೆ ಬಕೆಟ್ ನಲ್ಲಿ ನೀರು ತರಲು ಹೇಳಿದಳು. ಆಗ ರಂಜಿತ್, "ಅಮ್ಮ ನನಗೆ ಅದು ತುಂಬಾ ಭಾರ ಆಗುತ್ತದೆ. ನನ್ನಿಂದ ಎತ್ತಲು ಆಗುವುದಿಲ್ಲ" ಎಂದು ಹೇಳಿ ವಾಪಾಸ್ಸು ಮಣ್ಣಿನಲ್ಲಿ ಆಟ ಆಡಲು ಹೋದನು. ಆಟ ಆಡುತ್ತಿರುವಾಗ ಇವನು, ಒಂದು ಇರುವೆ ಅದರ ಬೆನ್ನಿನ ಮೇಲೆ ಇನ್ನೊಂದು ಇರುವೆಯನ್ನು ಎತ್ತಿಕೊಂಡು ಹೋದದ್ದನ್ನು ನೋಡಿದನು. ಇದನ್ನು ನೋಡಿ ರಂಜಿತ್ ಗೆ ತುಂಬಾ ಆಶ್ಚರ್ಯವಾಯಿತು.
ಇಷ್ಟು ಸಣ್ಣ ಇರುವೆ ತನಗಿಂತ ದೊಡ್ಡ ಗಾತ್ರದ ಇರುವೆಯನ್ನು ಎತ್ತಿಕೊಂಡು ಹೋಗುತ್ತದೆಯಲ್ಲಾ..... ಎಂದು ಅದನ್ನೇ ಗಮನಿಸಿದನು. ಹಾಗಾದರೆ ನನಗೆ ಬಕೇಟಿನ ನೀರು ಎತ್ತಲು ಏಕೆ ಸಾಧ್ಯವಿಲ್ಲ...? ಎಂದು ಯೋಚಿಸಿದನು. ಪ್ರಯತ್ನಿಸಿ ನೋಡುತ್ತೇನೆಂದು ಅಮ್ಮನ ಬಳಿಗೆ ಓಡಿದನು. ಅಮ್ಮ ಹೇಳಿದ ಕೆಲಸವನ್ನು ಮಾಡಿದನು. ಇದರಿಂದ ಅಮ್ಮನಿಗೆ ತುಂಬಾ ಸಂತೋಷವಾಯಿತು.
4ನೇ ತರಗತಿ.
ಸ.ಉ.ಹಿ.ಪ್ರಾ.ಶಾಲೆ. ಮುಂಡೂರು.
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************