-->
ರಿಧಾ ಡೋರಳ್ಳಿ ಬರೆದಿರುವ ಕವನಗಳು

ರಿಧಾ ಡೋರಳ್ಳಿ ಬರೆದಿರುವ ಕವನಗಳು

ಮಕ್ಕಳ ಜಗಲಿಯಲ್ಲಿ
4 ನೇ ತರಗತಿ ವಿದ್ಯಾರ್ಥಿನಿ
ರಿಧಾ ಡೋರಳ್ಳಿ 
ಬರೆದಿರುವ ಕವನಗಳು                ನಮ್ಮ ಪರಿಸರ
            ------------------
ಸುತ್ತಲೂ ಮುತ್ತಲೂ ಹಸಿರೆ ಹಸಿರು
ನಮ್ಮಯ ಊರಿದು ಕಸಮುಕ್ತ ನಗರವು
ಗಿಡಮರ ಬೆಳೆಸಿರಿ
ಪರಿಸರ ಉಳಿಸಿರಿ
ಸ್ವಚ್ಛತೆಯನ್ನು ಕಾಪಾಡಿರಿ
     ವಾಹನಗಳನು ನಿಲ್ಲಿಸಿರಿ
     ಹೊಗೆಮುಕ್ತ ವಾತಾವರಣ ಪಡೆಯಿರಿ
     ಗಾಂಧೀಜಿಯವರ ಕನಸನ್ನು ನನಸಾಗಿಸಿ
ಪರಿಸರ ಪ್ರೇಮಿಯಾಗಿ ಬಾಳೋಣ
ಪರಿಸರ ರಕ್ಷಣೆ ಮಾಡೋಣ
ದೇಶದ ಸ್ವಚ್ಛತೆಗೆ ಕೈ ಜೋಡಿಸೋಣ
ಇಡೀ ನಾಡನ್ನೆ ಸ್ವಚ್ಛಗೊಳಿಸೋಣ. 
........................................... ರಿಧಾ ಡೋರಳ್ಳಿ 
4ನೇ ತರಗತಿ 
ಸೇಂಟ್ ಅಂಥೋನಿ ಪಬ್ಲಿಕ್ ಶಾಲೆ 
ಹುಬ್ಬಳ್ಳಿ , ಧಾರವಾಡ ಜಿಲ್ಲೆ
********************************************                ಹಬ್ಬ
             -----------
ಹಬ್ಬವು ಬಂದಿದೆ, ಸಂತಸ ತಂದಿದೆ
ಸಂತೋಷ ನೀಡಿದೆ, ಉಲ್ಲಾಸ ಮೂಡಿದೆ
ನಾನು ಹೊಸ ಬಟ್ಟೆ ಧರಿಸಿದೆ
ಮನೆಯನ್ನು ಅಲಂಕರಿಸಿದೆ
ಮಿಠಾಯಿಯನ್ನು ನಾನು ತಿಂದೆ 
ಪಟಾಕಿಯನ್ನು ಹಾರಿಸಿದೆ. .‌
      ಗೆಳತಿಯರನ್ನು ಸೇರಿಸಿದೆನು
      ಅವರೊಂದಿಗೆ ಆಟ ಆಡುವೆನು
      ಹಾಡಿ ನಾನು ಕುಣಿದೆನು
      ಸಂತೋಷದಿಂದ ದಿನ ಕಳೆದೆನು.‌.
ಹಬ್ಬವೆಂದರೆ ಸಂತಸ ದಿನ 
ನನಗಂತೂ ಬಹಳ ಇಷ್ಟವಾದ ದಿನ
ತಂಗಿಗೂ ಖುಷಿ ನೀಡುವ ದಿನ
ನಮಗೆ ಇಷ್ಟವಾದ ತಿಂಡಿ ತಿನ್ನುವ ದಿನ
     ಈ ದಿನ ಎಷ್ಟು ಚಂದವೋ
     ಈ ದಿನ ಎಷ್ಟು ಅಂದವೋ...
........................................... ರಿಧಾ ಡೋರಳ್ಳಿ 
4ನೇ ತರಗತಿ 
ಸೇಂಟ್ ಅಂಥೋನಿ ಪಬ್ಲಿಕ್ ಶಾಲೆ 
ಹುಬ್ಬಳ್ಳಿ , ಧಾರವಾಡ ಜಿಲ್ಲೆ
********************************************                ಶ್ರೀಕೃಷ್ಣ 
                -----------
ಕೊಳಲನು ಊದುತ ನಲಿಯುವೆ ನೀ
ಗೋಕುಲದಲಿ ಜನಿಸಿದೆಯೋ ನೀ
ಶಕ್ತಿಗಳಿವೆ ನಿನ್ನಯ ಹತ್ತಿರ
ನಿನ್ನಯ ಪ್ರಶ್ನೆಗೆ ಕೊಡಲಾರೆವು ಉತ್ತರ  
     ಮಾಡಿದೆ ನೀನು ಕಂಸನ ಸಂಹಾರ
     ಮೊಳಗಿತು ನಿನಗೆ ಜಯದ ಝೇಂಕಾರ
     ನಿನ್ನಯ ಗೆಳತಿ ಪ್ರೀತಿಯ ರಾಧೆ
     ನೀನೆ ನಮಗೆ ಭಗವಂತನಾದೆ
ಹಸುಗಳೆ ನಿನ್ನಯ ಪ್ರೀತಿಯ ಗೆಳೆಯರು
ಅವುಗಳಿಗೆ ನೀನೆಂದರೆ ಬಲು ಇಷ್ಟವು
ದೇವಕಿಯ ಮಗನಾಗಿ ಜನಿಸಿದೆ ನೀನು ಬಲರಾಮನ ಸಹೋದರನಾದೆ ನೀನು
     ತುಂಟತನದಿ ನಗುತಿರುವೆ ನೀನು
     ಆ ನಗುವಿನ ಹಿಂದೆ ಬಂದರು ಎಳೆಯರು
     ಬಾಯಲ್ಲೇ ತೋರಿದೆ ಬ್ರಹ್ಮಾಂಡವೆ ನೀನು
     ಮಾತೆಯು ನಿಂತಳು ಚಕಿತದಿ ನೋಡಿ
ಬೆಣ್ಣೆಯ ಕದಿಯುವ ಕೃಷ್ಣನೇ ನೀ
ನಮ್ಮೆಲ್ಲರ ವರವ ಪಾಲಿಸುವ ದೇವರು ನೀ
........................................... ರಿಧಾ ಡೋರಳ್ಳಿ 
4ನೇ ತರಗತಿ 
ಸೇಂಟ್ ಅಂಥೋನಿ ಪಬ್ಲಿಕ್ ಶಾಲೆ 
ಹುಬ್ಬಳ್ಳಿ , ಧಾರವಾಡ ಜಿಲ್ಲೆ
********************************************          ನಮ್ಮ ಗಣೇಶ
         ---------------------
ನಮಿಪೆ ನಿನಗೆ ವಿನಾಯಕ
ನೀನೆ ನಮಗೆ ಗಣನಾಯಕ
ಎಲ್ಲರ ಮನೆಯ ಪೂಜೆಧಾರಕ
ನೀನಗೆ ಇಷ್ಟವೋ ಮೋದಕ/ಪ/
      ಗೌರಿಯ ಪುತ್ರನು ನೀನೆ
      ಶಿವನ ಕುಮಾರನೋ ನೀನು
      ಆನೆ ತಲೆಯ ಗಜಾನನ ನೀ
      ಧೈರ್ಯಶಾಲಿಯ ಏಕದಂತ ನೀ/ಪ/
ಲಡ್ಡು ಸಿಕ್ಕರೆ ಸಾಕು ಲೋಕ ಸುತ್ತುವೆ
ಯಾರಿಗೂ ಹೆದರದೆ ಮುಂದೆ ನುಗ್ಗುವೆ
ಶಕ್ತಿಶಾಲಿಯ ಗಣಪನೋ ನೀ
ನಮ್ಮೆಲ್ಲರ ಭಾಗ್ಯವಂತನೋ ನೀ/ಪ/
     ಶ್ರೀ ಗಣೇಶ ಗಣಾಧೀಕ್ಷ
     ನೀನೆ ನಮ್ಮೂರಿಗೆ ನಾಯಕ
     ಎಲ್ಲರ ವರವ ಪಾಲಿಸೋ ಫಲದಾಯಕ/ಪ/
........................................... ರಿಧಾ ಡೋರಳ್ಳಿ 
4ನೇ ತರಗತಿ 
ಸೇಂಟ್ ಅಂಥೋನಿ ಪಬ್ಲಿಕ್ ಶಾಲೆ 
ಹುಬ್ಬಳ್ಳಿ , ಧಾರವಾಡ ಜಿಲ್ಲೆ
********************************************Ads on article

Advertise in articles 1

advertising articles 2

Advertise under the article