ಸಾಮರಸ್ಯ - ಕವನ
Thursday, September 29, 2022
Edit
ಮಕ್ಕಳ ಜಗಲಿಯಲ್ಲಿ
ದ್ವಿತೀಯ ಪಿಯುಸಿ ವಿದ್ಯಾರ್ಥಿನಿ
ಸಿಂಚನಾ ಎಸ್ ಶೆಟ್ಟಿ
ಬರೆದಿರುವ ಕವನ
ಜಾತಿ ಮತ ಪಂಗಡ ಯಾಕೆ ಬೇಕಿಲ್ಲಿ
ಹಣ ಆಸ್ತಿ ಅಂತಸ್ತು ಕೊಂಡೊಯ್ಯುವರಾರು
ಸತ್ತ ಮೇಲೆ ಮಸಣದ ಹಾದಿಯಲಿ......
ಮೇಲು ಕೀಳು ಎಂಬ ಭಾವನೆ ಹೊತ್ತು
ಗಳಿಸುವರು ಕೈತುಂಬಾ ಸಂಪತ್ತು
ಇನ್ನೊಬ್ಬರ ಮನಸ್ಸನ್ನು ನೋಯಿಸಿ
ಹಾಕಿಕೊಳ್ಳುವರು ಮೈಮೇಲೆ ಆಪತ್ತು
ನಾವೆಲ್ಲರೂ ಒಂದೇ ತಾಯಿಯ ಮಕ್ಕಳು
ಎಂಬ ಮನೋಭಾವನೆ ಇದ್ದಷ್ಟು
ಜಗತ್ತು ಮುಂದೆ ಬರುವುದು
ಊಹಿಸಿ ಕೊಳ್ಳಲಾಗದಷ್ಟು
ದ್ವಿತೀಯ ಪಿ ಯು ಸಿ
ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜು ಕಾರ್ಕಳ
ಕಾರ್ಕಳ ತಾಲೂಕು , ಉಡುಪಿ ಜಿಲ್ಲೆ
********************************************