-->
ಸಂಚಾರಿಯ ಡೈರಿ : ಸಂಚಿಕೆ - 12

ಸಂಚಾರಿಯ ಡೈರಿ : ಸಂಚಿಕೆ - 12

ಸಂಚಾರಿಯ ಡೈರಿ : ಸಂಚಿಕೆ - 12

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ           
                ಭಾರತದ 51 ಶಕ್ತಿ ಪೀಠಗಳಲ್ಲಿ ಮುಖ್ಯವಾದ ದೇವೀ ಆಲಯ ತ್ರಿಪುರೇಶ್ವರಿ‌ ಮಂದಿರ. ತ್ರಿಪುರಾ ರಾಜ್ಯದ ಉದಯಪುರದಲ್ಲಿರುವ ಈ ಆಲಯ ತ್ರಿಪುರಾದ ಜನರಿಗೆ 'ಮಾತಾ ಬರಿ' (ತಾಯಿ ಮನೆ) ಎಂದೇ ಜನಜನಿತ. ಈ ದೇವಾಲಯಕ್ಕೆ ದಿನಂಪ್ರತಿ ಸಾವಿರಾರು ಭಕ್ತಾದಿಗಳು ದೇಶ ವಿದೇಶಗಳಿಂದ ಬರುತ್ತಿರುತ್ತಾರೆ.

        ದಕ್ಷ ಮಹಾ ಯಜ್ಞದಲ್ಲಿ ಅವಮಾನಕ್ಕೊಳಗಾದ ದಾಕ್ಷಾಯಿಣಿಯು, ಯಜ್ಞ ಕುಂಡಕ್ಕೆ ಹಾರುತ್ತಾಳೆ‌. ಈ ವಿಚಾರ ತಿಳಿದ ಶಿವ ಕೋಪದಿಂದ ತಾಂಡವ ನೃತ್ಯವಾಡುತ್ತಾ, ಅಗ್ನಿ ಜ್ವಾಲೆಯನ್ನೇ ಸುರಿಸತೊಡಗುತ್ತಾನೆ. ಅದೇ ಜ್ವಾಲೆಯಲ್ಲಿ ವೀರಭದ್ರನ ಜನನವಾಗಿ , ಆತ ದಕ್ಷನ ಸಂಹಾರ ಮಾಡುತ್ತಾನೆ. ಶಿವ ಯಜ್ಞ ಕುಂಡದಲ್ಲಿ ಬೆಂದ ದಾಕ್ಷಾಯಿಣಿಯ ಶರೀರವನ್ನು ಎತ್ತಿಕೊಂಡು ಕುಣಿಯತೊಡಗುತ್ತಾನೆ. ಲೋಕ ಕಲ್ಯಾಣದ ಜವಾಬ್ದಾರಿ ಹೊತ್ತಿದ್ದ ಶಿವ ಲಯಕಾರ್ಯವನ್ನ ಮರೆತು ಹೀಗೆ ನೃತ್ಯ , ಕ್ರೋಧ ತೋರ್ಪಡಿಸುವುದು ಸಲ್ಲದೆನಿಸಿ, ದೇವತೆಗಳು ನಾರಾಯಣನ ಮೊರೆಯಿಡುತ್ತಾರೆ. ಆಗ ವಿಷ್ಣು ತನ್ನ ಸುದರ್ಶನ ಚಕ್ರದಿಂದ ಧಾಕ್ಷಾಯಿಣಿಯ ದೇಹವನ್ನು ಕತ್ತರಿಸುತ್ತಾನೆ. ಅದರಲ್ಲಿ ಕಿರುಬೆರಳು ಬಿದ್ದ ಜಾಗವೇ ಈ ತ್ರಿಪುರ ಸುಂದರಿ ಆಲಯ. ದೇವಾಲಯದ ಗೋಪುರವೂ ಸಹ ಕಿರು ಬೆರಳಿನ ಆಕಾರವನ್ನೇ ಹೋಲುತ್ತದೆ..
   
ತ್ರಿಪುರ ಸುಂದರಿ ಆಲಯದಲ್ಲಿ ಭಕ್ತಾದಿಗಳು ಸಿಹಿ ತಿಂಡಿಯಾದ ಪೇಡಾವನ್ನು ಅರ್ಪಿಸುತ್ತಾರೆ. ಅದರ ಜತೆಗೆ ಕೆಲವು ಹರಕೆ ಹೊತ್ತವರು ಕಪ್ಪು ಬಣ್ಣದ ಆಡನ್ನ ಇಲ್ಲಿ ಬಲಿಕೊಡುತ್ತಾರೆ.
  
       ತ್ರಿಪುರಾದ ರಾಜಧಾನಿ ಆಗರ್ತಲಾದಿಂದ ಸುಮಾರು ೫೦ಕಿಮೀ ದೂರದಲ್ಲಿದೆ. ಅಗರ್ತಲಾದಿಂದ ಬಸ್ಸು, ಬಾಡಿಗೆ ಕಾರು ಲಭ್ಯವಿವೆ. ಜತೆಗೆ ಉದಯ್‌ಪುರ್ ಹತ್ತಿರದ ರೈಲು ನಿಲ್ದಾಣವಾಗಿದೆ.

▪️ ದೇವಾಲಯವು ಬಂಗಾಳಿ ಏಕರತ್ನ ಶೈಲಿಯಲ್ಲಿ ನಿರ್ಮಾಣಗೊಂಡಿದೆ.
▪️ ದೇವಾಲಯದ ಪಕ್ಕದಲ್ಲಿ ಕೆರೆಯೊಂದಿದ್ದು ಅಲ್ಲಿ ಭಕ್ತಾದಿಗಳು ಮೀನುಗಳಿಗೆ ಆಹಾರ ನೀಡಬಹುದಾಗಿದೆ.
▪️ದೇವಿಗೆ ಅರ್ಪಿಸಿದ ಭೋಗ ಪ್ರಸಾದ ಕೆಲವೊಮ್ಮೆ ಭಕ್ತರಿಗೆ ನೀಡುತ್ತಾರೆ.
▪️ತ್ರಿಪುರಾ ರಾಜ್ಯದಲ್ಲಿ ಇರುವ 4-5 ಉನ್ನತ ಪ್ರವಾಸೀ ತಾಣಗಳ ಪೈಕಿ ತ್ರಿಪುರ ಸುಂದರಿ ದೇವಾಲಯ ಭೇಟಿ ನೀಡಲೇಬೇಕಾದ ಧಾಮವಾಗಿದೆ.
......................................... ಸುಭಾಸ್ ಮಂಚಿ 
ಕಾಡಂಗಾಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
******************************************Ads on article

Advertise in articles 1

advertising articles 2

Advertise under the article