
ಸೌಹಾರ್ದತೆ - ಕವನ
Friday, September 30, 2022
Edit
10ನೇ ತರಗತಿ ವಿದ್ಯಾರ್ಥಿನಿ
ಶಿಫಾನ
ಬರೆದಿರುವ ಕವನ
ಅದುವೇ ನಮ್ಮ ವಿಶೇಷತೆ
ನಾವೆಲ್ಲರೂ ಯಾವಾಗಲೂ ಒಂದೇ
ಅದಕ್ಕಾಗಿ ಬರಬೇಕು ಮುಂದೆ
ವಿದ್ಯೆಯನ್ನು ಅರಸುವವನು ವಿದ್ಯಾರ್ಥಿ
ಸೌಹಾರ್ದತೆಯನ್ನು ಬಯಸುವವನು ನಿಸ್ವಾರ್ಥಿ
ವಿದ್ಯಾರ್ಥಿಗಳು ಕೂಡಿ ಬಾಳುವ ಜೀವನ
ಸಮಾನತೆಗೆ ಅದುವೇ ಪರಮ ಪಾವನ
ಸೌಹಾರ್ದ ಬದುಕಿನ ಹರ್ಷ
ಶ್ರಮ ಪಡಬೇಕು ಪ್ರತೀ ನಿಮಿಷ
ಎಲ್ಲಾ ಧರ್ಮವೂ ಬಯಸುವ ಪ್ರೀತಿ
ಅದುವೇ ದೇಶದ ಪ್ರಗತಿಯ ಸ್ಪೂರ್ತಿ
ಜಾತಿ ಧರ್ಮದ ಬೇದ ಭಾವ
ತೊಲಗಲಿ ಎಂಬುದು ನಮ್ಮ ಆಶಾ ಭಾವ
ಸೌಹಾರ್ದತೆ ಇಲ್ಲದ ಜೀವನ
ನರಕ ಯಾತನೆಗೆ ಸಮಾನ
ಸೌಹಾರ್ದತೆಗೆ ಮಾಡುವೆನು ಪ್ರಮಾಣ
ಧಕ್ಕೆ ತರುವವರ ತೆಗೆಯುವ ಮಾನ
10ನೇ ತರಗತಿ
ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************