ಹನಿಗವನಗಳು : ರಚನೆ - ಸಂಜಯ್
Sunday, September 18, 2022
Edit
ಮಕ್ಕಳ ಜಗಲಿಯಲ್ಲಿ
7ನೇ ತರಗತಿ ವಿದ್ಯಾರ್ಥಿ
ಸಂಜಯ್
ಬರೆದಿರುವ ಹನಿಗವನಗಳು
ನೀರು
------------
ನೀರು ನೀರಿದ್ದರೆ ಹಸಿರು,
ಹಸಿರಿದ್ದರೆ ಉಸಿರು,
ಉಸಿರಿದ್ದರೆ ಊರಿಗೆ ಹೆಸರು,
ಹೆಸರಿದ್ದರೆ ಅದೇ ನಮ್ಮೂರು.
ಮನೆ
------------
ಸುಂದರವಾದ ನಮ್ಮ ಮನೆ,
ಮನೆಯ ಪಕ್ಕದಲ್ಲಿದೆ ಭತ್ತದ ತೆನೆ,
ಬೆಳೆಯುತ್ತೇವೆ ಇಲ್ಲಿ ತುಳುವಿನ..ಕೇನೆ,
ಆದರೆ ನಾನು ಅದನ್ನು ತಿನ್ನದೆ ಇರುವೆ ಸುಮ್ಮನೆ.
ಶಾಲೆ
-----------
ಸುಂದರವಾದ ನಮ್ಮ ಶಾಲೆ,
ಇಲ್ಲಿ ನಡೆಯುತ್ತದೆ ಸಾಂಸ್ಕೃತಿಕಾ ಕಲೆ,
ಶಾಲೆಯೇ ನಮಗೆ ಸುಂದರ ನೆಲೆ,
ಎಲ್ಲರೂ ಕರೆಯುತ್ತಾರೆ ನಮ್ಮ ಶಾಲೆ - ಮಾದರಿಶಾಲೆ.
ಆಟ
----------
ನಾವು ಶಾಲೆಯಲ್ಲಿ ಆಡುತ್ತೇವೆ
ವಿಧ-ವಿಧದ ಆಟ,
ತರಗತಿಯಲ್ಲಿ ನಮಗೆ ಕಲಿಸುತ್ತಾರೆ ಪಾಠ,
ಮೈದಾನದಲ್ಲಿ ಕಂಡೆ ನವಿಲಿನ ನಲಿದಾಟ.
ಸಮಯ
-----------
ಈಗಿನ ಸಮಯ,
ಮಳೆಯ ಸಮಯ,
ಶಾಲೆಗೆ ಹೋಗಲು ತುಂಬಾ ಭಯ
ಮಳೆರಾಯ ಬೇಗ ಹೋಗಯ್ಯಾ.
ಹಣ್ಣು
----------
ನಾನು ತಿನ್ನುತೇನೆ ವಿಧ-ವಿಧವಾದ ಹಣ್ಣು,
ತಿಂದರೆ ಹೋದೀತು ರೋಗದ ಹುಣ್ಣು
ಬೆಳೆಯಲು ಇದೆ ಕರುನಾಡಿನ ಕಪ್ಪು ಮಣ್ಣು,
ಕೊಯ್ಯಲು ಮಳೆ ಕಾಟ ಬಿಡಲಿಲ್ಲ ಇನ್ನು.
ನವಿಲು
-----------
ನವಿಲು ನೋಡಲು ಬಲು ಚಂದ,
ನವಿಲಿನ ನಾಟ್ಯ ಬಲು ಅಂದ,
ಅದನ್ನು ನೋಡಿದರೆ ಆಗುತ್ತದೆ ಆನಂದ,
ಅಮ್ಮನಿಗೆ ಮಕ್ಕಳೇ ಕಂದ.
ಅಮ್ಮ ಅಪ್ಪ
--------------
ನನ್ನ ಪ್ರೀತಿಯ ಅಮ್ಮ ಅಪ್ಪ,
ಅಪ್ಪ ಆಗುತ್ತಾರೆ ಕೋಪ,
ಅಮ್ಮ ಆಗುತ್ತಾರೆ ಪಾಪ,
ಇವರ ಬಾಳಲ್ಲಿ ನಿತ್ಯ ಆನಂದಪ್ಪ.
7ನೇ ತರಗತಿ
ಸ. ಉ. ಹಿ. ಪ್ರಾಥಮಿಕ ಶಾಲೆ , ನಾರಾವಿ.
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************