ಲಹರಿ ಸಿ ಎಲ್ ಬರೆದಿರುವ ಕವನ
Sunday, September 18, 2022
Edit
ಮಕ್ಕಳ ಜಗಲಿಯಲ್ಲಿ
5 ನೇ ತರಗತಿ ವಿದ್ಯಾರ್ಥಿನಿ
ಲಹರಿ ಸಿ ಎಲ್
ಬರೆದಿರುವ ಕವನ
ಮಳೆಗಾಲ - ಕವನ
-------------------------
ಮಳೆ ಎಂದರೆ ನನಗೆ ಪ್ರೀತಿ
ಸಸ್ಯಗಳು ಖುಷಿಯಾಗುವ ರೀತಿ
ಪ್ರಾಣಿ ಪಕ್ಷಿಗಳಿಗೆ ಜೀವ ಧಾರೆ
ನದಿ, ಕೆರೆ, ಬಾವಿಗಳಿಗೆ ಚಿಲುಮೆಯ ಚಿಗುರೆ
ಭೂಮಿಯನ್ನು ತಂಪೆರೆವ ನೀರೆ
ಬಾ ಬಾ ಪೃಥ್ವಿಗೆ ನೀರ ಧಾರೆ
ಮಳೆಗಾಲವೆಂದರೆ ನನಗೆ ಇಷ್ಟ
ಕೊಡೆ ಇಲ್ಲದೆ ನೆನೆದು ಮನೆಗೆ ಹೋದರೆ
ಅಮ್ಮನ ಬೈಗುಳವೆ ಕಷ್ಟ
ಚುಮು ಚುಮು ಚಳಿ ಮನೆಯ ಹೊರಗೆ
ಬಿಸಿಬಿಸಿ ಖಾರ ತಿನ್ನಲು ಖುಷಿ ನನಗೆ
5 ನೇ ತರಗತಿ
ವಿಶ್ವಮಂಗಳ ಹಿರಿಯ ಪ್ರಾಥಮಿಕ
ಇಂಗ್ಲೀಷ್ ಮಾಧ್ಯಮ ಶಾಲೆ ಕೊಣಾಜೆ
ಮಂಗಳೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************