-->
 ಚುಟುಕುಗಳು - ರಚನೆ: ಬಬಿತಾ

ಚುಟುಕುಗಳು - ರಚನೆ: ಬಬಿತಾ

ಮಕ್ಕಳ ಜಗಲಿಯಲ್ಲಿ
8ನೇ ತರಗತಿ ವಿದ್ಯಾರ್ಥಿನಿ
ಬಬಿತಾ ಬರೆದಿರುವ
ಚುಟುಕುಗಳು




  ಚುಟುಕು - 1
  -------------
ಭೂಮಿಗೆ ಮಳೆ ಚೆಂದ
ಮಳೆಗೆ ಬೆಳೆ ಚೆಂದ
ಆಟಕ್ಕೆ ಬಯಲು ಚೆಂದ
ಊಟಕ್ಕೆ ಉಪ್ಪಿನಕಾಯಿ ಚೆಂದ
ಮಕ್ಕಳಿಗೆ ಓದು ಚೆಂದ


ಚುಟುಕು - 2
-------------
ಹೂವನು ನೋಡಲು ಚೆಂದ
ಹೂವಿನ ಸುವಾಸನೆ ಬಲುಚೆಂದ
ಹೂವನು ಮುಡಿಯಲು ಅಂದ 
ಹೂವಿನ ಪರಿಮಳ ಸುಂಗಧ


ಚುಟುಕು - 3
-------------
ಹಣೆಗೆ ಒಂದು ಬೊಟ್ಟು 
ಸೋಮು ಚಪ್ಪಾಳೆ ತಟ್ಟು 
ಚಿತ್ರಕೆ ಬಣ್ಣ ಕೊಟ್ಟು 
ಲೀಲಾಳಿಗೆ ಮೇಷ್ಟ್ರು ಕೊಟ್ರು ಪೆಟ್ಟು


ಚುಟುಕು - 4
-------------
ನನ್ನ ಮನೆಯ ಬೆಕ್ಕು
ಅದರ ಹೆಸರು ಪಿಕ್ಕು 
ಅದು ತಿನ್ನುವುದು ಚಿಕ್ಕು 
ನನಗೆ ಸಿಕ್ಕಿದ್ದು ನನ್ನ ಲಕ್ಕು


ಚುಟುಕು - 5
-------------
ಹಸುವಿಗೆ ಕರು ಚೆಂದ 
ನವಿಲಿಗೆ ನಾಟ್ಯ ಚೆಂದ 
ಅಮ್ಮನಿಗೆ ಮಗು ಚೆಂದ 
ಆದರೆ ನನಗೆ ಪ್ರಕೃತಿ ಚೆಂದ
................................................... ಬಬಿತಾ 
8ನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ. ದರ್ಬೆತ್ತಡ್ಕ 
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************

Ads on article

Advertise in articles 1

advertising articles 2

Advertise under the article