ಧೃತಿ ಬರೆದಿರುವ ಮಕ್ಕಳ ಕವನಗಳು
Tuesday, September 13, 2022
Edit
ಮಕ್ಕಳ ಜಗಲಿಯಲ್ಲಿ
10ನೇ ತರಗತಿ ವಿದ್ಯಾರ್ಥಿನಿ
ಧೃತಿ ಬರೆದಿರುವ
4 ಮಕ್ಕಳ ಕವನಗಳು
ಗೆಳೆತನ
------------
ಸ್ನೇಹವೆಂಬುದು
ಮನಸ್ಸಿಗೆ ಹಿಡಿದ ಕನ್ನಡಿ
ಈ ಬಂಧಕ್ಕೆ
ಪರಸ್ಪರ ನಂಬಿಕೆಯೇ ಮುನ್ನುಡಿ
ಈ ಜಗದಿ ಬೆಲೆ ಕಟ್ಟಲಾಗದ
ಬಂಧನ ಈ ಸ್ನೇಹ
ದೂರ ಮಾಡುವುದು
ಮನಸ್ಸಿನ ಎಲ್ಲಾ ಕಲಹ
ಮನದ ದುಃಖ ಹೇಳದೆ
ಅರಿಯುವ ಮನೋಭಾವ
ಕಷ್ಟದಲ್ಲೂ ಕೈ ನೀಡಿ
ಜೊತೆಯಾಗುವ ಜೀವ
ಸುಖ ದುಃಖದಲ್ಲಿ
ಜೊತೆಯಾಗಿರುವ ಕವಚ
ಮುಗ್ಧ ಮನಕೆ
ಇದೊಂದು ರಕ್ಷಾ ಕವಚ
ಎಲ್ಲೆಡೆ ಪಸರಿಸೋಣ
ಸ್ನೇಹ ಭಾವ
ಮರೆಯಾಗಿಸೋಣ
ಮನದ ನೋವ
ದೂರ ಮಾಡಿ
ಕೋಪ ದ್ವೇಷ ಹಗೆತನ
ಪಸರಿಸೋಣ ಎಲ್ಲರಲ್ಲೂ
ನಿಷ್ಕಲ್ಮಶ ಗೆಳೆತನ
......................................................... ಧೃತಿ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************
ಸರ್ವಸ್ವ
-----------
ಅಮ್ಮನ ಮಡಿಲು
ಮಮತೆಯ ಕಡಲು
ಪ್ರೀತಿಯ ಸಾಗರ
ಸಂತೋಷದ ಆಗರ
ಅಮ್ಮನೇ ಸರ್ವಸ್ವ
ತೋರುವಳು ವಿಶ್ವ
ಅಮ್ಮ ನಿನಗೆ ಎಂದೂ ಋಣಿ
ಆಗುವೆ ನಾ ಹೊಳೆಯುವ ಮಣಿ
ನಿನ್ನಲ್ಲಿ ಕಾಣುವೆ ದೇವರ
ನನಗೆ ಕೊಟ್ಟ ಈ ವರ
ಅಮ್ಮ ನೀನು ನಕ್ಕರೆ
ನಮ್ಮ ಬಾಳು ಸಕ್ಕರೆ
ನಮ್ಮ ಬಾಳ ರಕ್ಷಕಿ
ಕಲಿಸುವ ಅಮ್ಮನೇ ಶಿಕ್ಷಕಿ
ಬಿಡಿಸಲಾಗದ ತಾಯಿಯ ಬಂಧ
ಎಂದೆಂದೂ ಬಿಟ್ಟಿರಲಾರದ ಅನುಬಂಧ
ತೋರುವಳು ಪ್ರೀತಿ ವಿಶ್ವಾಸ
ಹೊತ್ತಿರುವ ನಮ್ಮನು ನವಮಾಸ
ಕಣ್ಣಾರೆ ಕಂಡ ದೇವರು
ಹಗಲು ರಾತ್ರಿ ಕಾಯುವರು
ಅಮ್ಮ ನೀನೇ ಜೀವ
ಅರಿಯುವಳು ನಮ್ಮಯ ಭಾವ
ನಿನಗಿದೋ ನಾ ಬರೆದ ಕವನ
ನಿನಗೆ ನನ್ನ ಕೋಟಿ ಕೋಟಿ ನಮನ
......................................................... ಧೃತಿ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************
ಅಣ್ಣ ತಂಗಿ
-----------
ಅಣ್ಣ ತಂಗಿಯ ಸಂಬಂಧ
ಬಿಡಿಸಲಾಗದ ಅನುಬಂಧ
ಪ್ರೀತಿ ವಾತ್ಸಲ್ಯದ ಸಾಗರ
ಕೊಡುವ ಅಣ್ಣನೇ ಆಗರ
ಆಗಾಗ ಮುನಿಸು ಕೋಪ
ಕ್ಷಣದಿ ಕಡಿಮೆಯಾಗುವುದದರ ತಾಪ
ನಂಬಿಕೆ ವಿಶ್ವಾಸದ ಬಂಧನ
ಕೊಟ್ಟಂತಹ ನಿನಗೆ ನನ್ನ ನಮನ
ಅಣ್ಣನ ಮನಸ್ಸು ಸುಂದರ
ಎದೆಯಲ್ಲಿ ತಂಗಿಗಾಗಿ ಮಂದಿರ
ಅಣ್ಣನ ಮಾತು ಚಂದ
ತಂಗಿಗೆ ಅದುವೆ ಅಂದ
ಅಣ್ಣನ ಬಲು ಒಳ್ಳೆಯತನ
ಎಲ್ಲದಕ್ಕೂ ಸಹಕರಿಸುವ ಅವನ ಮನ
ಕಷ್ಟಕೂ ಮಿಡಿಯುವ ಮುದ್ದು ಮನಸ್ಸು
ತಂಗಿಯ ಕನಸನು ಮಾಡುವನು ನನಸು
......................................................... ಧೃತಿ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************
ಸೈಕಲ್
-----------
ಆರೋಗ್ಯಕ್ಕೆ ಬಹಳ ಉಪಕಾರಿ
ಬಡವರ ಪಾಲಿನ ಸವಾರಿ
ಇದ್ದರೆ ಅಂಕುಡೊಂಕು ದಾರಿ
ಸರಾಗವಾಗಿ ಚಲಿಸುವುದು ಬಾರಿ
ಪರಿಸರ ಸ್ನೇಹಿಯ ಒಳ್ಳೆಯ ಸಾರಿಗೆ
ಹೆಚ್ಚು ಬೆಲೆಯುಂಟು ಕಾರಿಗೆ
ಸೈಕಲ್ ಸಿಗುವುದು ಕೈಗೆಟಕುವ ಬೆಲೆಗೆ
ಆಯ್ಕೆ ಇದೆ ನಮ್ಮ ಎದುರಿಗೆ
ಬರುವುದು ದೀರ್ಘ ಬಾಳಿಕೆ
ಮಕ್ಕಳಿಗೆ ಇಷ್ಟದ ಕೋರಿಕೆ
ಜಗದಲ್ಲಿ ಹೆಚ್ಚುತ್ತಿದೆ ಬೇಡಿಕೆ
ಉತ್ತಮ ಆರೋಗ್ಯ ಪಡೆಯಲಿಕೆ
ಸ್ನಾಯುಗಳಿಗೆ ಗಟ್ಟಿಯಾಗಲು ಪೂರಕ
ಸರಾಗ ರಕ್ತ ಪರಿಚಲನೆಗೆ ಸಹಾಯಕ
ಪರಿಣಾಮಕಾರಿಯಾಗಿದೆ ದೇಹಕೆ ಪ್ರೇರಕ
ಚಂದದ ಆರೋಗ್ಯಕರ ಬದುಕಿಗೆ ರಕ್ಷಕ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************