-->
ಅಕ್ಕನ ಪತ್ರ - 32 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 32 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 32 ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1


         ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಸಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ........



     ಮಕ್ಕಳ ಜಗಲಿಯ ಎಲ್ಲಾ ಪ್ರೀತಿ ಪಾತ್ರರಿಗೂ ಆತ್ಮೀಯ ಶುಭ ನಮನಗಳು..... ನಮಸ್ತೆ.... ಅಕ್ಕ..... ನಾನು ಪ್ರಿಯ. ಹೌದು..! ನಿಜ ಅಕ್ಕ.... ನಾವು ಯಾವುದೇ ರೀತಿಯ craft ಗಳನ್ನ ತಯಾರಿಸಬೇಕಾದ್ರೂ fevicol gum ಇಲ್ಲದಿದ್ರೆ ಆ ಎಲ್ಲಾ ಕಾರ್ಯಗಳು ಅಪೂರ್ಣವಾಗುತ್ತದೆ. ನೀವಿಂದು "ಪಿಡಿಲೈಟ್" ಸಂಸ್ಥೆಯ ಸಂಸ್ಥಾಪಕರಾದ ವಿಶ್ವದ ಅತ್ಯಂತ ಶ್ರೀಮಂತ ಹಾಗೂ ವಿಶ್ವದ ಶ್ರೇಷ್ಠ ಸಾಧಕ ವ್ಯಕ್ತಿಗಳಲ್ಲೊಬ್ಬರಾದ  ಬಲವಂತರಾಯ್ ಕಲ್ಯಾಣಜಿ ಪಾರೇಖ್ ರವರ ಸಾಧನೆಯ ಕಥನಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದೀರಿ....  ಮೊದಲು... ದಿನಕ್ಕೆ ಕೇವಲ 14 ರೂ ಗೆ ಕೆಲಸಕ್ಕೆ ಸೇರಿಕೊಂಡು... ಹಲವಾರು ಕಾರಣಗಳಿಂದ...   ಸಾಕಷ್ಟು ಅಡೆತಡೆಗಳನ್ನು ನಿವಾರಿಸಿಕೊಂಡು, ಅನೇಕ ಅವಮಾನಗಳನ್ನು ಸಹಿಸಿಕೊಂಡು... ಏನನ್ನಾದರೂ ಸಾಧಿಸಬೇಕು ಎನ್ನುವ ಛಲತೊಟ್ಟ ಮನಸ್ಥಿತಿಯಲ್ಲಿ ತನ್ನಲ್ಲಿ ದೃಢ ಸಂಕಲ್ಪವನ್ನಿಟ್ಟು ತನ್ನ ಸಾಧನೆಯ ಹಾದಿಯಲ್ಲಿ ಯಶಸ್ಸನ್ನು ಕಂಡು... ಅವಮಾನಿಸಿದವರಿಂದಲೆ. ಸನ್ಮಾನಿತರಾಗಿ.... ಎಲ್ಲರಿಂದಲೂ "ಪಾರೇಖ್ - ದಿ ಜ್ಯುವೆಲ್ ಆಫ್ ಇಂಡಿಯಾ" ಎಂದು ಕರೆಸಿಕೊಂಡಂತಹ ವಿಶ್ವದ ಸಾಧಕರಲ್ಲೊಬ್ಬರಾದ "ಪಿಡಿಲೈಟ್" ಸಂಸ್ಥೆಯ ಸಂಸ್ಥಾಪಕರಾದ ಬಲವಂತರಾಯ್ ಕಲ್ಯಾಣಜಿ ಪಾರೇಖ್ ರವರ ಜೀವನ ಗಾಥೆ ಎಲ್ಲರಿಗೂ ಸ್ಪೂರ್ತಿ ಯಾಗುವಂತಹದ್ದು ಎಂದು ಹೇಳುತ್ತ....
ನಮ್ಮೊಂದಿಗೆ ಈ ಸಾಧಕರ ಪರಿಚಯವನ್ನು ಹಾಗೂ ಜೀವನಗಾಥೆ ಯನ್ನು ಹಂಚಿಕೊಂಡ ನಿಮಗೆ ಪ್ರೀತಿಯ ಧನ್ಯವಾದಗಳು ಅಕ್ಕ.....
...................................................... ಪ್ರಿಯ
ಪ್ರಥಮ ಪಿ.ಯು.ಸಿ
ಸರಕಾರಿ ಪದವಿ ಪೂರ್ವ ಕಾಲೇಜು , ಅಳದಂಗಡಿ.
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
*******************************************



       ನಮಸ್ತೇ...... ಪ್ರೀತಿಯ ಅಕ್ಕನಿಗೆ ಧನ್ವಿ ರೈ ಮಾಡುವ ನಮಸ್ಕಾರಗಳು. ನಾನು ಪಾಣಾಜೆ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಓದುತ್ತಿದ್ದೇನೆ. ಈ ತಿಂಗಳಲ್ಲಿ ನಾವು ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉತ್ಸಾಹ ದಲ್ಲಿದ್ದೇವೆ. ಹಾಗೇನೇ ನಿಮ್ಮ ಪತ್ರವನ್ನು ಓದಿದೆನು. ನಿಮ್ಮ ಪ್ರತಿ ಪತ್ರದಲ್ಲೂ ಮಕ್ಕಳಾದ ನಮಗೆ ಉಪಯುಕ್ತವಾದ ಮಾಹಿತಿಗಳು ಇರುತ್ತದೆ. ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳ ಬಹುದಾದ ಅಂಶಗಳನ್ನು ಬಹಳ ಅರ್ಥಪೂರ್ಣ ವಾಗಿ ಬರೆಯುತ್ತಿರುವಿರಿ. ಇದು ನೀವು ಅಧ್ಯಾಪಿಕೆ ಆಗಿ ನಮಗೆ ಬರೆಯುವಂತದ್ದು ಇನ್ನೂ ತುಂಬಾ ಇಷ್ಟ. ಹಾಗೆಯೇ ನಿಮಗೂ ಶಿಕ್ಷಕರ ದಿನಾಚರಣೆ ಯ ಶುಭಾಶಯಗಳು ಅಕ್ಕ.
      ಇವತ್ತು ನೀವು ಪತ್ರದಲ್ಲಿ ಒಬ್ಬ ಸಾಧಕರ ಬಗ್ಗೆ ಬರೆದಿದ್ದೀರಿ. ಯಾವುದೇ ವ್ಯಕ್ತಿ ಜೀವನದಲ್ಲಿ ಸತ್ಯ, ನ್ಯಾಯ, ಪ್ರಾಮಾಣಿಕತೆಯಿಂದ ವರ್ತಿಸಿದರೆ, ವ್ಯವಹರಿಸಿದರೆ ಅದರ ಫಲ ತುಂಬಾನೇ ಉತ್ತಮವಾಗಿರುತ್ತದೆ ಮತ್ತು ಯಶಸ್ಸನ್ನು ಕಾಣಲು ಸಾಧ್ಯ ಎಂದು ಬಹಳ ಸುಂದರವಾಗಿ ಬಲವಂತರಾಯ್ ಕಲ್ಯಾಣ್ ಜೀ ರವರ ಜೀವನದ ಕಥೆಯನ್ನು ಬರೆದಿದ್ದೀರಿ. ತುಂಬಾನೇ ಸ್ಪೂರ್ತಿ ಯುತವಾದ , ಉತ್ತಮ ಸಂದೇಶ ಅಕ್ಕ. ಇಂದಿನ ಮಕ್ಕಳೇ ಮುಂದಿನ ಜನಾಂಗ ಎಂಬಂತೆ ಮಕ್ಕಳಾದ ನಾವು ಕೂಡ ಹಣ, ಸಂಪತ್ತಿನಿಂದ ಖಂಡಿತಾ ಸಾಧಕರಾಗುವುದಿಲ್ಲ, ಬದಲಾಗಿ ಒಳ್ಳೆಯ ಮನಸ್ಸು, ಸಾಧನೆ, ಸತ್ಯ, ಪ್ರಾಮಾಣಿಕತೆ ಯಿಂದ ಸಾಧಕರಾಗಲು ಸಾಧ್ಯ ಎಂಬುದನ್ನು ಈ ಪತ್ರದಿಂದ ತಿಳಿದೆವು. ಧನ್ಯವಾದಗಳು ಅಕ್ಕ, ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುವ,
................................... ಧನ್ವಿ ರೈ ಪಾಣಾಜೆ 
7ನೇ ತರಗತಿ 
ವಿವೇಕ ಹಿರಿಯ ಪ್ರಾಥಮಿಕ ಶಾಲೆ 
ಪಾಣಾಜೆ , ಪುತ್ತೂರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************



ಅಕ್ಕನ ಪತ್ರ ಸಂಚಿಕೆ 32ಕ್ಕೆ ಶಿಶಿರನ ಉತ್ತರ
   ಪ್ರೀತಿಯ ಅಕ್ಕನಿಗೆ ಶಿಶಿರ್ ಮಾಡುವ ನಮಸ್ಕಾರಗಳು. ನಮ್ಮೆಲ್ಲರ ದೈನಂದಿನ ಚಟುವಟಿಕೆಗಳಲ್ಲಿ ತುಂಬಾ ಉಪಯುಕ್ತವಾದ ಫೆವಿಕಾಲ್ ಗಮ್ ತಯಾರಿಕಾ ಕಂಪನಿ ಪಿಡಿಲೈಟ್ ನ ಸ್ಥಾಪಕರಾದ ಬಲವಂತಯರಾಯ್ ಕಲ್ಯಾಣ್ ಜಿ ಪಾರೇಖ್ ರವರ ಬಗ್ಗೆ ತಿಳಿಸಿದ್ದೀರಿ. ಅವರ ಪ್ರಾಮಾಣಿಕತೆ, ಬುದ್ಧಿವಂತಿಕೆ, ಛಲ, ಕೆಲಸ ಬಗ್ಗೆ ಇದ್ದ ನಿಷ್ಠೆ, ದೇಶಪ್ರೇಮ ಇವೆಲ್ಲವೂ ನಾವೂ ನಮ್ಮ ಜೀವನದಲ್ಲಿ ಅನುಸರಿಸಬೇಕಾದ ಅಂಶಗಳು. ಸಾಧಕರ ಶ್ರಮದ ಸಾಧನೆಯ ಬಗ್ಗೆ ಬರೆದ ಪತ್ರ ನನಗೆ ತುಂಬಾ ಇಷ್ಟವಾಯಿತು. ಧನ್ಯವಾದಗಳು ಅಕ್ಕ. ಮಧ್ಯವಾರ್ಷಿಕ ಪರೀಕ್ಷೆಯ ನಂತರ ಮುಂದಿನ ಪತ್ರದಲ್ಲಿ ಭೇಟಿಯಾಗೋಣ.
.............................................. ಶಿಶಿರ್ ಎಸ್
10ನೇ ತರಗತಿ 
ಎಸ್.ಎಲ್. ಎನ್. ಪಿ. ವಿದ್ಯಾಲಯ 
ಪಾಣೆಮಂಗಳೂರು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************



       ನಮಸ್ತೆ ಅಕ್ಕ..... ಪ್ರತೀ ಬಾರಿ ಹೊಸ ಹೊಸ ವಿಚಾರ ನಮ್ಮೊಂದಿಗೆ ಪ್ರಸ್ತಾಪಿಸಿರುವಿರಿ, ಈ ಬಾರಿ Favicol ನ ವಿಚಾರ.. ಇದು ನಮ್ಮ ಶಾಲಾ ದಿನದಲ್ಲಿ ಹೆಚ್ಚಿನ ಕೆಲಸಕ್ಕೆ ಉಪಯೋಗಕ್ಕೆ ಬರುವ ವಸ್ತು. ಶಾಲಾ ಚಟುವಟಿಕೆ, ಯೋಜನೆ ತಯಾರಿಕೆಯಲ್ಲಿ ಹೀಗೆ ಹೆಚ್ಚಿನ ಬಳಕೆಯಲ್ಲಿ ಇದ್ದು , ಇದಿಲ್ಲದೆ ಕೆಲಸ ಮುಂದೆ ಸಾಗುವುದಿಲ್ಲ ಎನ್ನುವ ಸಂದರ್ಭವೂ ಕೆಲವೊಮ್ಮೆ... ಹೀಗೆಲ್ಲಾ ನಾವು ಇದನ್ನು ಬಳಸುತ್ತಿದ್ದರೂ ಇದರ ಹಿನ್ನಲೆಯ ಬಗ್ಗೆ ನಾವು ಒಮ್ಮೆಯೂ ಚಿಂತಿಸಿರಲಿಲ್ಲ... ಇದರ ಹಿನ್ನಲೆ ತಿಳಿದು ತುಂಬಾ ಖುಷಿ ಎನಿಸಿತು, ಇದು ನಮ್ಮ ದೇಶದ ಉತ್ಪನ್ನ ಎನ್ನುವುದು ನಮ್ಮ ಹೆಮ್ಮೆ. ಇದರ ಸಂಸ್ಥಾಪಕರು, ಅವರ ಪರಿಶ್ರಮ ಪ್ರಸ್ತುತ ಉತ್ಪನ್ನದ ಏಳಿಗೆಯ ಬಗ್ಗೆ ಕೇಳಿ ತುಂಬಾ ಖುಷಿ ಎನ್ನಿಸಿತು........ ಧನ್ಯವಾದ ಅಕ್ಕ....
...................................................... ಶ್ರಾವ್ಯ
ದ್ವಿತೀಯ ಪಿಯುಸಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************



     ನಮಸ್ತೇ ಅಕ್ಕಾ..... ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಮಾಡುವ ನಮಸ್ಕಾರಗಳು.... ನಾನು ಆರೋಗ್ಯದಿಂದ ಇರುವೆನು. ನಿಮ್ಮ ಪತ್ರವನ್ನು ಓದಿದೆನು. ನಮ್ಮ ಅಗತ್ಯಕ್ಕೆ ಬೇಕಾದಾಗ ತಂದು ಉಪಯೋಗಿಸುವ ಫೆವಿಕಾಲ್ (ಗಮ್) ನ ಬಗ್ಗೆ ಪತ್ರ ಓದಿದಾಗ ತಿಳಿಯಿತು. ಇದನ್ನು ಉತ್ಪಾದಿಸಿದವರು ಸಾವಿರಾರು ಕೋಟಿಗಳ ಒಡೆಯರಾದ ಸಾಧಕ "ಬಲವಂತ ರಾಯ್ ಪಾರೇಖ್" ಅವರು ಎಂದು ತಿಳಿದುಕೊಂಡೆನು. "ಸೋಲೇ ಗೆಲುವಿನ ಮೆಟ್ಟಿಲು" ಎಂಬ ಮಾತಿನಂತೆ ಸೋತಾಗ ಧೃತಿಗೆಡಬಾರದು ಸೋತಾಗ ಸೋಲಿಗೆ ಕಾರಣ ಏನೆಂದು ತಿಳಿದಾಗ ಗೊತ್ತಾಗುತ್ತದೆ. ಅನುಭವವೂ ಹೆಚ್ಚುತ್ತದೆ. ಮುಂದಿನ ಪ್ರಯತ್ನದಲ್ಲಿ ಗೆಲ್ಲಬಹುದು. ಸತತ ಪ್ರಯತ್ನ, ಛಲ, ಶ್ರದ್ಧೆ, ಪ್ರಾಮಾಣಿಕತೆ, ಇದ್ದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ಅವರ ಅನುಭವದಿಂದ ತಿಳಿಯಬಹುದು. ಧನ್ಯವಾದಗಳು ಅಕ್ಕಾ,
..................................... ಸಾತ್ವಿಕ್ ಗಣೇಶ್
8 ನೇ ತರಗತಿ 
ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
*******************************************



      ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ತೃಷಾ. ನನಗೆ ಅಕ್ಕನ ಪತ್ರ ಇಷ್ಟ ಆಯ್ತು. ಇದರಲ್ಲಿ ಬಲವಂತರಾಯ್ ಅವರ ಸಾಧನೆ ಮತ್ತು ಅವರ ಪರಿಶ್ರಮ ನಮ್ಮೆಲ್ಲರಿಗೂ ಪ್ರೋತ್ಸಾಹ ವನ್ನೊದಗಿಸುತ್ತದೆ. ಅಕ್ಕ ಅಂದುಕೊಂಡ ಹಾಗೆ ನನ್ನ ಮನಸ್ಸಲ್ಲಿ ಹೀಗೆ ಹಲವಾರು ಪ್ರಶ್ನೆಗಳು ಮೂಡುತ್ತಿರುತ್ತವೆ. ಅದಕ್ಕೆ ಉತ್ತರ ಸಿಗಲು ನಾನು ಇಂಟರ್ನೆಟ್ ನ್ನು ಉಪಯೋಗಿಸುತ್ತೇನೆ. ಈ ಪತ್ರ ದಲ್ಲಿ ಫೆವಿಕಾಲ್ ಗಮ್ ನ ವಿಷಯ ತಿಳಿದು ಬಂದಿತು. ಇದು ನಮ್ಮ ದೇಶದ ಉತ್ಪನ ಎಂದು ಕೇಳಿ ತುಂಬಾ ಸಂತೋಷವಾಯಿತು. ಇನ್ನೂ ಹೇಳುವುದಾದರೆ ಇವರ ವೈಯಕ್ತಿಕ ಜೀವನದ ಕಥೆಯನ್ನು ಓದಿ ನಮ್ಮ ಜೀವನದ ಕಷ್ಟಗಳು ಯಾವ ಲೆಕ್ಕ? ಎನಿಸಿತು. Fevlcol ಇಲ್ಲದೆ ಇರ್ತಿದ್ರೆ ಕಲಾ ಜೀವನ ಹೇಗಿರುತ್ತಿತ್ತೊ ಗೊತ್ತಿಲ್ಲ. ಹಾಗಾಗಿ ಇದರ ಸಂಸ್ಥಾಪಕರಾದ ಬಲವಂತರಾಯ್ ರವರಿಗೆ Thank you. ಈ ವಿಷಯ ತಿಳಿಸಿಕೊಟ್ಟ ಅಕ್ಕನಿಗೂ ಧನ್ಯವಾದಗಳು.
...................................................... ತೃಷಾ
ಪ್ರಥಮ ಪಿಯುಸಿ
ಪದವಿ ಪೂರ್ವ ಕಾಲೇಜು ಅಳದಂಗಡಿ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************

   

      ಪ್ರೀತಿಯ ಅಕ್ಕನಿಗೆ ಹಿತಾಶ್ರೀ ಮಾಡುವ ನಮನಗಳು. ನೀವು ಕಳಿಸಿದ ಪತ್ರವನ್ನು ಓದಿದ್ದೇನೆ. ನಾನು ಕ್ರಾಫ್ಟ್ ಮಾಡುವಾಗ ಗಮ್ ಮುಗಿದು ಹೋಗುತ್ತಿತ್ತು ನನಗೂ ಒಂದು ಸಲ ಆಲೋಚನೆ ಬಂತು. ಗಮ್ ಯಾರು ಕಂಡುಹಿಡಿದರು ಯಾವಾಗ ಕಂಡುಹಿಡಿದರು ಎಂಬುವುದು ತಿಳಿದಿರಲಿಲ್ಲ. ಆದರೆ ನಿಮ್ಮ ಪತ್ರವನ್ನು ಓದಿದ ನಂತರ ತಿಳಿಯಿತು. ನೀವು ಕಳಿಸುವ ಪತ್ರದಲ್ಲಿ ಯಾವಾಗಲೂ ಬೇರೆ ಬೇರೆ ವಿಷಯದ ಬಗ್ಗೆ ನಮಗೆ ಅರಿವು ಮೂಡಿಸುತ್ತೀರಿ. ನಿಮಗೆ ವಂದನೆಗಳು
...................................................... ಹಿತಶ್ರೀ ಪಿ 
7 ನೇ ತರಗತಿ
ಶ್ರೀ ವೇಣುಗೋಪಾಲ ಅ. ಹಿ.ಪ್ರಾ.ಶಾಲೆ 
ಪಕಳಕುಂಜ ಮಾಣಿಲ
ಬಂಟ್ಟಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
*******************************************




       ಮಕ್ಕಳ ಜಗಲಿಯ ವೃಂದಕ್ಕೆ ಆತ್ಮೀಯ ವಂದನೆಗಳು.... ನಾನು ಪೂರ್ತಿ.... ನಮಸ್ತೆ ಅಕ್ಕ ... ನೀವು ಹೇಗಿದ್ದೀರಿ ಅಕ್ಕ...? ನಾವು ಚೆನ್ನಾಗಿದ್ದೇವೆ... ನಿಮ್ಮ ಈ ಪತ್ರವನ್ನು ಓದಿ ನಾವು ಬಳಸುತ್ತಿದ್ದಂತಹ fevicol gum ನ ವಿಚಾರ ಹಾಗೂ ಇದರ ರೂವಾರಿಗಳಾದಂತಹ ಬಲವಂತರಾಯ್ ಕಲ್ಯಾಣಜಿ ಪಾರೇಖ್ ರವರ ಬಗ್ಗೆ ಹೆಚ್ಚಿನ ವಿಚಾರಗಳು ತಿಳಿದುಕೊಳ್ಳಲು ಸಾಧ್ಯವಾಯಿತು.....ಇವರ ವೈಯಕ್ತಿಕ ಜೀವನ ಗಾಥೆಯನ್ನೂ ಸಂಪೂರ್ಣವಾಗಿ ಅರಿತಾಗ "ಮನಸ್ಸಿದ್ದರೆ ಮಾರ್ಗ ವಿದೆ" ಎಂಬ ಗಾದೆ ಮಾತು ಪ್ರತಿಫಲಿಸುತ್ತದೆ.... ಅವರ ಜೀವನದಲ್ಲಿ ಅವರು ಯಾವುದೇ ಕಾರಣಕ್ಕೂ ಕಷ್ಟಗಳಿಗೆ ಭಯಪಡದೆ ಆತ್ಮಸ್ಥೈರ್ಯ ದಿಂದ ಗೆಲುವೆಂಬ ಕಿರೀಟವನ್ನು ಪಡೆದು ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ.....
ಇಷ್ಟು ದೊಡ್ಡ ವ್ಯಕ್ತಿಯೆನಿಸಿಕೊಂಡರೂ ಸರಳ ಜೀವನ ನಡೆಸುವ ಇವರ ಭಾವವು ದೊಡ್ಡತನವನ್ನು ಸೂಚಿಸುತ್ತದೆ... ಇವರ ಬಗ್ಗೆ ತಿಳಿದು ನನಗೆ ಸಂತೋಷವಾಯಿತು ಹಾಗೆ fevicol ಭಾರತದಲ್ಲಿ ಉತ್ಪಾದನೆಯಾಗುತ್ತದೆ ಎಂದು ತಿಳಿದು ಹೆಮ್ಮೆಯಾಯ್ತು.... ಈ ಎಲ್ಲಾ ವಿಚಾರಗಳನ್ನು ತಿಳಿಸಿದ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು ಅಕ್ಕ.... ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ....
...................................................... ಪೂರ್ತಿ 
9ನೇ ತರಗತಿ.
ಸರಕಾರಿ ಪ್ರೌಢಶಾಲೆ ನಾರಾವಿ.
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************




       ಹರಿ ಓಂ.... ನಮಸ್ತೆ ಅಕ್ಕ ಹೇಗಿದ್ದೀರ ನಾನು ಸ್ರಾನ್ವಿ. ನಿಮ್ಮ ಪತ್ರ ಓದಿದೆ ಅಕ್ಕ ನನಗೆ ಗಮ್ ತಯಾರಿಸಿದ್ದು ಯಾರೆಂದು ನಿಮ್ಮಿಂದ ತಿಳಿಯಿತು ಅಕ್ಕ. ನಿಮ್ಮ ಪತ್ರದಿಂದ ತುಂಬಾ ವಿಷಯಗಳನ್ನು ತಿಳಿದುಕೊಳ್ಳಲು ಪ್ರಯೋಜನ ವಾಗಿದೆ. ಹೌದು ಅಕ್ಕ ನಾವು ಪ್ರಾಮಾಣಿಕವಾಗಿ ಇರಬೇಕು. ಮನೆಯಲ್ಲಿ ದಿನಾ ಹೇಳುತ್ತಿರುತ್ತಾರೆ ಯಾವ ವಿಷಯ ಆದರೂ ಮನೆಗೆ ಬಂದು ಸತ್ಯ ಹೇಳಬೇಕು ಅಂತ. ಏನಾದರೂ ತಪ್ಪಾದರೂ ಸತ್ಯ ಹೇಳಬೇಕಂತೆ. ಸತ್ಯ ಹೇಳಿದರೆ ಒಮ್ಮೆ ಜೋರು ಮಾಡಬಹುದು ಆದರೆ ಸುಳ್ಳು ಹೇಳಿದರೆ ಬೇರೆಯವರಿಂದ ವಿಷಯ ತಿಳಿದಾಗ ತುಂಬಾನೇ ಕೋಪ ಬರುತ್ತದೆ. ಹೌದು ಅಕ್ಕ, ಕಾನೂನು ಕಲಿತರೆ ಸತ್ಯನ ಸುಳ್ಳು ಮಾಡಬೇಕು, ಸುಳ್ಳನ್ನ ಸತ್ಯ ಮಾಡಬೇಕು ಅಂತ, ಎರಡು ದಿನದ ಮುಂಚೆ ಅಮ್ಮ ಇದೇ ಮಾತನ್ನು ಹೇಳಿದ್ದಾರೆ, ನನಗೆ ಪ್ರತಿಭಾ ಕಾರಂಜಿ ಡಿಬೆಟಲ್ಲಿ ದ್ವಿತೀಯ ಸ್ಥಾನ ಬಂತು ಅದಕ್ಕೆ ಅಮ್ಮನಲ್ಲಿ ಬಂದು ಕೇಳಿದೆ ನಾನು ಲಾಯರ್ ಆಗಬೇಕು ಎಂದು. ಆಗ ಅಮ್ಮ ಹೇಳಿದ್ದು ಹಾಗೆ. ನಮ್ಮ ಸುಳ್ಳಿನಿಂದ ಬೇರೆಯವರಿಗೆ ನೋವಾಗಬಾರದಲ್ವ. ನಾವು ಯಾವಾಗಲೂ ಪ್ರಾಮಾಣಿಕ ವಾಗಿರಬೇಕು, ಆಗ ನಮ್ಮ ಒಳ್ಳೆಯ ತನಕ್ಕೆ ಒಂದಲ್ಲ ಒಂದು ದಿನ ಜಯ ಸಿಗುತ್ತದೆ. ಧನ್ಯವಾದ ಅಕ್ಕ                                                      
................................................ ಸ್ರಾನ್ವಿಶೆಟ್ಟಿ    
9ನೇ ತರಗತಿ 
ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ 
ಸ್ಕೂಲ್ ಗುಡ್ಡೆಯಂಗಡಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************




        ನಮಸ್ತೇ ಅಕ್ಕ. ನಾನು ಬಿಂದುಶ್ರೀ.. ನಿಮ್ಮ ಈ ಪತ್ರ ತುಂಬಾ ಚಂದ ಉಂಟು. ನೀವು ಹೇಳಿದ ಕೆಲವು ವಿಷಯ ಗಳು ಅರ್ಥವಾಯಿತು. ನೀವು ಈ ಪತ್ರದಲ್ಲಿ ಬರೆದ ವಿಷಯ ಗೊತ್ತಿರಲಿಲ್ಲ. ನೀವು ಹೇಳಿದವರು ರಚಿಸಿದ ವಸ್ತು ವನ್ನು ನಾವು ಉಪಯೋಗ ಮಾಡುತ್ತೇವೆ ಆದರೆ ಅದನ್ನು ಕಂಡು ಹಿಡಿದವರು ಯಾರು ಎಂದು ಗೊತ್ತಿರಲಿಲ್ಲ. ಧನ್ಯವಾದಗಳು ಅಕ್ಕ
................................................ ಬಿಂದುಶ್ರೀ 
ಪ್ರಥಮ ಪಿಯುಸಿ 
ವಿವೇಕಾನಂದ ಪದವಿ ಪೂರ್ವ ಕಾಲೇಜು ಪುತ್ತೂರು 
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article