-->
ನವದುರ್ಗೆಯರ ನವರಾತ್ರಿ - ಕವನ

ನವದುರ್ಗೆಯರ ನವರಾತ್ರಿ - ಕವನ

ಮಕ್ಕಳ ಜಗಲಿಯ ಎಲ್ಲರಿಗೂ 
ನವರಾತ್ರಿ ಹಬ್ಬದ ಶುಭಾಶಯಗಳು 
ಮಕ್ಕಳ ಜಗಲಿಯಲ್ಲಿ
9ನೇ ತರಗತಿ ವಿದ್ಯಾರ್ಥಿ
ಆದ್ಯಂತ್ ಅಡೂರು 
ಬರೆದಿರುವ ಕವನ
        

ಬಂದಿದೆ ಹಬ್ಬವು ನವರಾತ್ರಿ 
ನವದುರ್ಗೆಯರ ಶುಭರಾತ್ರಿ 
ಶಾರದಾಪೂಜೆ, ವಿಜಯದಶಮಿ
ಶಕ್ತಿ ದೇವತೆಗಳ ಮನಸಾ ಸ್ಮರಾಮಿ  
      ನವರಾತ್ರಿಯ ಮೊದಲ ದಿನ 
      ಶೈಲಪುತ್ರಿಗೆ ಭಕ್ತಿಯ ನಮನ
      ಹಿಮವಂತನಾ ಮಗಳಾಗಿರುವೆ 
      ಬಿಳಿ ಬಟ್ಟೆಯನು ಧರಿಸಿರುವೆ  
ದುರ್ಗೆಯ ಎರಡನೇ ಅವತಾರ 
ಬ್ರಹ್ಮಚಾರಿಣಿಯೇ ನಮಸ್ಕಾರ 
ಸಕ್ಕರೆ ನಿನಗೆ ಬಲು ಇಷ್ಟ 
ಪರಿಹರಿಸು ನಮ್ಮೆಲ್ಲರ ಕಷ್ಟ 
    ದುರ್ಗೆಯ ಮೂರನೇ ಅವತಾರ 
    ಹುಲಿಯ ಮೇಲೆಯೇ ಸಂಚಾರ
    ಚಂದ್ರಘಂಟಾ ದೇವಿಯ ರೂಪ
    ಹೊನ್ನಿನ ಬಣ್ಣದ ಪುಣ್ಯ ಸ್ವರೂಪ 
ನವರಾತ್ರಿಯ ನಾಲ್ಕನೇ ದಿನವು
ಕೂಷ್ಮಾಂಡಿಯನು ಪೂಜಿಸುವೆವು
ಅಷ್ಟಭುಜಾದೇವಿ ಎಂದೇ ಖ್ಯಾತಳು 
ಸೂರ್ಯಮಂಡಲದೊಳಗಿರುವಳು 
     ನವರಾತ್ರಿಯ ಐದನೇ ದಿನವು 
     ಕೆಂಪು ಬಣ್ಣವು ನಿನಗೆ ಇಷ್ಟವು
     ಸ್ಕಂದಮಾತೆಯನು ಪೂಜಿಸುವರು 
     ಕಮಲಾಸನಾ ದೇವಿ ಎನ್ನುವರು 
ನವರಾತ್ರಿಯ ಆರನೇ ದಿನವು 
ಕಾತ್ಯಾಯಿನಿಯನು ಪೂಜಿಸುವರು 
ಮಹಿಷಾಸುರನನು ಕೊಂದವಳು
ಸಿಂಹದ ಮೇಲೆ ಸಂಚರಿಸುವವಳು 
     ಮರುದಿನ ಭಜಿಪರು ಕಾಳರಾತ್ರಿಯನು 
     ಭಕ್ತರಿಗೆಲ್ಲಾ ಶುಭಕರಿ ನೀನು
     ಕತ್ತೆಯ ಮೇಲೆ ಸಂಚರಿಸುವೆ
     ಕಡುಕಪ್ಪು ಬಣ್ಣದಿ ಕಂಗೊಳಿಸುವೆ 
ಬಿಳಿ ಬಣ್ಣದ ಬಟ್ಟೆಯ ಧರಿಸಿದೆ
ವೃಷಭದ ಮೇಲೆ ಸಂಚರಿಸಿದೆ
ಅರಳು ಮಲ್ಲಿಗೆ ನಿನಗೆ ಪ್ರಿಯ
ಮಹಾಗೌರಿಯೇ ನೀಡು ಅಭಯ 
    ನವರಾತ್ರಿಯ ಒಂಭತ್ತನೇ ದಿನ
    ಕೆಂಪು ಬಣ್ಣದ ತಾವರೆಯಾಸನ
    ಸಿದ್ಧಿಧಾತ್ರಿಯೇ ನಿನಗೆ ನಮನ
    ಆಯುಧ ಪೂಜೆಯ ಮಾಡುವರು ಜನ 
ಆದಿಮಾಯೆಯೇ ಜಗದ ಶಕ್ತಿ ದೇವತೆ 
ಶಿಷ್ಟಜನರ ರಕ್ಷಿಸುವ ಜಗನ್ಮಾತೆ 
ಎಲ್ಲೆಡೆ ಇದೆ ವಿಜಯದಶಮಿ ಸಂಭ್ರಮ 
ಮಕ್ಕಳಿಗೆ ನೀಡುವರು ವಿದ್ಯೆಯ ಸರಿಗಮ
    ಬಂದಿದೆ ಹಬ್ಬವು ನವರಾತ್ರಿ 
    ನವದುರ್ಗೆಯರ ಶುಭರಾತ್ರಿ 
    ಶಾರದಾಪೂಜೆ, ವಿಜಯದಶಮಿ
    ಶಕ್ತಿ ದೇವತೆಗಳ ಮನಸಾ ಸ್ಮರಾಮಿ 
.................................... ಆದ್ಯಂತ್ ಅಡೂರು 
9ನೇ ತರಗತಿ 
ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಅಡೂರು 
ಕಾಸರಗೋಡು ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article