-->
ಪ್ರೀತಿಯ ಪುಸ್ತಕ : ಸಂಚಿಕೆ - 24

ಪ್ರೀತಿಯ ಪುಸ್ತಕ : ಸಂಚಿಕೆ - 24

ಪ್ರೀತಿಯ ಪುಸ್ತಕ
ಸಂಚಿಕೆ - 24

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ 

                                        ವಿನಯವಿಲ್ಲದ ವಿದ್ಯೆ
               ಪ್ರೀತಿಯ ಮಕ್ಕಳೇ... ಮನಸ್ಸಿಗೆ ತಟ್ಟುವ ಕಥೆಗಳು, ಅಂದರೆ ಕಣ್ಣು ತೆರೆಸುವ ಕಥೆಗಳ ಸಂಗ್ರಹ ಇದರಲ್ಲಿ ಇವೆ. ಹಿರಿಯರ ಕಿರುಗತೆಗಳು ಅಂತ ಕೂಡಾ ಹೇಳಬಹುದು. ಸಾಮಾನ್ಯ ಜನರ ವಿಶೇಷ ಜ್ಞಾನಕ್ಕೆ ಸಂಬಂಧಿಸಿದ ಕಥೆಗಳೂ ಇವೆ. ನಾಮದೇವ, ಸೂರದಾಸ, ರಾಮದಾಸ, ಮುದ್ಗಲ ಮುಂತಾದ ಹಿರಿಯರ ಬದುಕಿನ ಪುಟ್ಟ ಪುಟ್ಟ ಕಥೆಗಳು ಇವೆ. ಚಕ್ಕಂತ ಒಂದು ವಿಚಾರ ಅರ್ಥ ಮಾಡಿಸುವ ರೀತಿಯಲ್ಲಿ ಈ ಕಥೆಗಳು ಇವೆ. ಹಾಗೆಯೇ ಚಕ್ಕಂತ ಓದಿಕೊಳ್ಳುವ ಹಾಗೆಯೂ ಇವೆ. ಜೊತೆಗೆ ತಿಳಿ ಹಾಸ್ಯವನ್ನೂ ಈ ಕಥೆಗಳಲ್ಲಿ ಕಾಣಬಹುದು. ಈ ಕಥೆಗಳನ್ನು ಸಂದರ್ಭಕ್ಕೆ ತಕ್ಕ ಹಾಗೆ ಸರಳವಾಗಿ ಹೇಳುವುದಕ್ಕೂ ಚೆನ್ನಾಗಿವೆ. ಪ್ರತಿ ಕಥೆಗೂ ಸೂಕ್ತವಾಗುವಂತೆ ಒಂದು ಸುಂದರ ಚಿತ್ರವೂ ಇವೆ. ಒಟ್ಟು 23 ಕಥೆಗಳಿವೆ. ಪ.ರಾಮಕೃಷ್ಣ ಶಾಸ್ತ್ರಿಯವರು ಮಕ್ಕಳಿಗಾಗಿ ಬಹಳಷ್ಟು ಬರೆದಿದ್ದಾರೆ. ಕನ್ನಡದ ಅನೇಕ ಪತ್ರಿಕೆಗಳಲ್ಲಿ ಅವರ ಬರಹಗಳು ಬರುತ್ತಿದ್ದವು. ಅವನ್ನು ಓದುತ್ತಾ ಬೆಳೆದವರು ನಾವು. ನೀವೂ ಓದಿ ನೋಡಿ. 
ಲೇಖಕರು: ಪ.ರಾಮಕೃಷ್ಣ ಶಾಸ್ತ್ರಿ 
ಚಿತ್ರಗಳು: ರಘುಪತಿ ಶೃಂಗೇರಿ
ಪ್ರಕಾಶಕರು: ಅಂಕಿತ ಪ್ರಕಾಶನ (ಪುಸ್ತಕ ಅಂಗಡಿಗಳಲ್ಲಿ ಲಭ್ಯವಿದೆ)  
ಬೆಲೆ: ರೂ.50/
ಆರು, ಏಳನೆಯ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರ ಸಹಕಾರದೊಂದಿಗೆ ಚಿಕ್ಕವರೂ ಓದಬಹುದು. 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************

Ads on article

Advertise in articles 1

advertising articles 2

Advertise under the article