-->
ಮಕ್ಕಳ ಜಗಲಿಯಲ್ಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2022

ಮಕ್ಕಳ ಜಗಲಿಯಲ್ಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2022

ಮಕ್ಕಳ ಜಗಲಿಯಲ್ಲಿ 
ರಾಜ್ಯಮಟ್ಟದ 
ಕವನ ಮತ್ತು ಕಥಾ ಸ್ಪರ್ಧೆ - 2022


         ಕೊರೊನಾ ಸಂಕಷ್ಟ ಕಾಲದಲ್ಲಿ ವಿದ್ಯಾರ್ಥಿಗಳ ಸೃಜನಾತ್ಮಕ ಚಟುವಟಿಕೆಗಳಿಗಾಗಿ ಬೆಳಕಿಗೆ ಬಂದ
ಮಕ್ಕಳ ಜಗಲಿ (ಮಕ್ಕಳಿಗಾಗಿ ಮೀಸಲಾದ ಆನ್ಲೈನ್ ಪತ್ರಿಕೆ ) ಯು ಮುಂದಿನ ನವೆಂಬರ್ - 14 ರಂದು ಎರಡನೇ ವರ್ಷದ ಸಂಭ್ರಮವನ್ನು ಆಚರಿಸಲಿದೆ. ಆ ಪ್ರಯುಕ್ತ ಮಕ್ಕಳಲ್ಲಿ ಸಾಹಿತ್ಯಿಕ ಅಭಿರುಚಿಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಥಮ - ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2022 ಯನ್ನು ಆಯೋಜಿಸಲಾಗಿದೆ. ಸ್ಪರ್ಧಾ ವಿಜೇತರಿಗೆ "ಮಕ್ಕಳ ಜಗಲಿ - ಕವನ ಸಿರಿ ಮತ್ತು ಕಥಾ ಸಿರಿ - ಪ್ರಶಸ್ತಿ -- 2022" ಪ್ರದಾನ ಮಾಡಲಾಗುವುದು. 
      ಈ ಸ್ಪರ್ಧೆಯ ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಬಂಟ್ಟಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ಎಂ ಪಿ, "ಸಂಕಷ್ಟವನ್ನು ಅವಕಾಶವನ್ನಾಗಿಸುವ ಕಾರ್ಯ ಮಹತ್ತರವಾದುದು. ಆನ್ಲೈನ್ ಶಿಕ್ಷಣದ ಕಾಲದಲ್ಲಿ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿ ಮೂಡಿ ಬಂದ ಮಕ್ಕಳ ಜಗಲಿ ವಿದ್ಯಾರ್ಥಿಗಳ ಸೃಜನಶೀಲ ಅಭಿವ್ಯಕ್ತಿಗೆ ವೇದಿಕೆಯಾಯಿತು. ಬಂಟ್ಟಾಳದಲ್ಲಿ ಹುಟ್ಟಿದ ಮಕ್ಕಳ ಜಗಲಿ ಇಂದು ಜಗದಗಲ ಪಸರಿಸಿರುವುದು ಹೆಮ್ಮೆಯ ಸಂಗತಿ. ದೇಶಾದ್ಯಂತ ಕನ್ನಡಬಲ್ಲ ವಿದ್ಯಾರ್ಥಿಗಳು ಮಕ್ಕಳ ಜಗಲಿಯಲ್ಲಿ ಬೆರೆಯುತ್ತಿರುವುದರಿಂದ ಕಲೆ ಹಾಗೂ ಸಾಹಿತ್ಯಿಕ ಪ್ರತಿಭೆಗಳ ವಿಕಸನಕ್ಕೆ ಮಾದರಿಯಾಗಿದೆ." ಎಂದರು.
       ಮಂಚಿ -ಕೊಳ್ನಾಡು ಪ್ರೌಢಶಾಲಾ ಮುಖ್ಯಶಿಕ್ಷಕರಾದ ಶ್ರೀಮತಿ ಸುಶೀಲ , ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶ್ರೀ ರಾಘವೇಂದ್ರ ಬಳ್ಳಾಲ್ , ಶಿಕ್ಷಣ ಸಂಯೋಜಕರಾದ ಶ್ರೀಮತಿ ಸುಜಾತ, ಶ್ರೀಮತಿ ಸುಧಾ, ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶುಭ ಹಾರೈಸಿದರು. 
   ಕನ್ನಡ ಶಿಕ್ಷಕರಾದ ಶ್ರೀ ಶಿವಕುಮಾರ್ ಎಂ.ಜಿ, ಚಿತ್ರಕಲಾ ಶಿಕ್ಷಕರಾದ ಶ್ರೀ ಮುರಳಿ ಕೃಷ್ಣರಾವ್ ಶಾರದಾ ಪ್ರೌಢಶಾಲೆಯ ಶ್ರೀ ಧನರಾಜ್, ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಚಿನ್ನಪ್ಪ ಜಾಲ್ಸೂರು, ಶ್ರೀ ಪ್ರವೀಣ್ ಕುಮಾರ್ , ಶ್ರೀಮತಿ ತುಳಸಿ ಕೈರಂಗಳ ಉಪಸ್ಥಿತರಿದ್ದರು. ಮಕ್ಕಳ ಜಗಲಿಯ ಅಂಕಣಕಾರ ಗೋಪಾಲಕೃಷ್ಣ ನೇರಳಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ಕಲಾವಿದ ತಾರಾನಾಥ್ ಕೈರಂಗಳ ಸ್ವಾಗತಿಸಿದರು. ಶ್ರೀಮತಿ ಸುಶೀಲ ವಂದಿಸಿದರು.

ಕಥೆ ಮತ್ತು ಕವನಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ : ಅಕ್ಟೋಬರ್ - 25 , 2022

ಫಲಿತಾಂಶ ಪ್ರಕಟ : ನವಂಬರ್ 14 , 2022

ಪ್ರತಿ ವಿಭಾಗದಲ್ಲೂ ಸಮಾನ 2 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ 
ಹಾಗೂ ಅತ್ಯುತ್ತಮ ಹತ್ತು ಕಥೆ ಮತ್ತು ಹತ್ತು ಕವನಗಳಿಗೆ ಮೆಚ್ಚುಗೆ ಪ್ರಶಸ್ತಿ ಪತ್ರಗಳು

ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಪ್ರಮಾಣ ಪತ್ರ ನೀಡಲಾಗುವುದು.


ಸ್ಪರ್ಧಾ ವಿವರ:

ವಿಭಾಗ 1) - 5, 6, 7, 8ನೇ ತರಗತಿ
ಕವನದ ವಿಷಯ : ಐಚ್ಛಿಕ (ನಿಮ್ಮ ಆಯ್ಕೆಯ ವಿಷಯ)
ಕವನ ಕನಿಷ್ಠ 12 ಸಾಲುಗಳು ಗರಿಷ್ಠ 20 ಸಾಲುಗಳು

ಕಥೆಯ ವಿಷಯ : ಐಚ್ಛಿಕ (ನಿಮ್ಮ ಆಯ್ಕೆಯ ವಿಷಯ)
ಕಥೆ A4 ಅಳತೆಯ ಪೇಪರಲ್ಲಿ 2 ಪುಟವನ್ನು ಮೀರ ಬಾರದು


ವಿಭಾಗ 2) - 9, 10, 11, 12 ನೇ ತರಗತಿ
ಕವನದ ವಿಷಯ : ಐಚ್ಛಿಕ (ನಿಮ್ಮ ಆಯ್ಕೆಯ ವಿಷಯ)
ಕವನ ಕನಿಷ್ಠ 16 ಸಾಲುಗಳು ಗರಿಷ್ಠ 24 ಸಾಲುಗಳು

ಕಥೆಯ ವಿಷಯ : ಐಚ್ಛಿಕ (ನಿಮ್ಮ ಆಯ್ಕೆಯ ವಿಷಯ)
ಕಥೆ A4 ಅಳತೆಯ ಪೇಪರಲ್ಲಿ 3 ಪುಟವನ್ನು ಮೀರ ಬಾರದು
ಸ್ಪರ್ಧಿಗಳಿಗೆ ಇತರ ಸೂಚನೆಗಳು :
1. ಒಬ್ಬ ಸ್ಪರ್ಧಿಗೆ ಕಥೆ ಮತ್ತು ಕವನ ಎರಡೂ ವಿಭಾಗದಲ್ಲೂ ಸ್ಪರ್ಧಿಸುವ ಅವಕಾಶವಿದೆ
2. ಭಾಗವಹಿಸುವ ಸ್ಪರ್ಧಿಗಳು ಅತ್ಯುತ್ತಮವಾದ 1 ಕಥೆ ಅಥವಾ 1 ಕವನವನ್ನು ಮಾತ್ರ ಕಳುಹಿಸಲು ಅವಕಾಶ.
3. ಸ್ಪರ್ಧಿಗಳು ಕಳುಹಿಸುವಾಗ ಒಂದು ಮೂಲ ಪ್ರತಿಯೊಂದಿಗೆ 3 ಜೆರಾಕ್ಸ್ ಪ್ರತಿಗಳನ್ನು ಕಳುಹಿಸಬೇಕು
4. ಸ್ಪರ್ಧಿಗಳು ಕವನ ಅಥವಾ ಕಥೆಯನ್ನು ಸ್ವಂತ ಕಲ್ಪನೆಯಲ್ಲಿ ಯಾರದೇ ಸಹಾಯವಿಲ್ಲದೆ ರಚನೆ ಮಾಡಿರಬೇಕು. 
5. ಓದಿದ ಕಥೆ, ಕವನಗಳು ಅಥವಾ ಯಾರೋ ಹೇಳಿದ , ಕಥೆ, ಕವನಗಳನ್ನು ಬರೆದು ಕಳುಹಿಸಬಾರದು. ನಕಲು ಕೃತಿಗಳನ್ನು ಪರಿಗಣಿಸುವುದಿಲ್ಲ.
6. ವಿದ್ಯಾರ್ಥಿಗಳು ಸ್ವಂತವಾಗಿ ರಚನೆ ಮಾಡಿರುವುದನ್ನು ಶಾಲೆ/ಕಾಲೇಜಿನ ಮುಖ್ಯಸ್ಥರು ಶಾಲಾ ಮೊಹರು, ಸಹಿಯೊಂದಿಗೆ ದೃಢೀಕರಿಸಿರಬೇಕು.
7. ಸ್ವಂತವಾಗಿ ಬರೆದ ಕಥೆ - ಕವನಗಳ ಹಾಳೆಯ ಹಿಂಬದಿಯಲ್ಲಿ ಶಾಲೆ/ ಕಾಲೇಜಿನ ಮುಖ್ಯಸ್ಥರು ದೃಡೀಕರಿಸದಿದ್ದರೆ ಅಂತಹ ಕೃತಿಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.
8. ರಾಜಕೀಯ /ಧರ್ಮ / ಜಾತಿ / ವ್ಯಕ್ತಿ ನಿಂದನೆ ಯ ಬರಹಗಳಿಗೆ ಅವಕಾಶವಿಲ್ಲ.
9. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
10. ಬರಹಗಳ ಮೂಲಪ್ರತಿ, 3 ಜತೆ ಜೆರಾಕ್ಸ್ ಪ್ರತಿಯನ್ನು ಅಂಚೆ ಮೂಲಕ 
ಕಳುಹಿಸಬೇಕಾದ ವಿಳಾಸ :
ಮಕ್ಕಳ ಜಗಲಿ : ಕಥೆ ಮತ್ತು ಕವನ ಸ್ಪರ್ಧೆ - 2022
ತಾರಾನಾಥ್ ಕೈರಂಗಳ
ಚಿತ್ರಕಲಾ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಮಂಚಿ - ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Pin : 574 323
Mob: 9844820979
*******************************************
ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ : 

1. ಗೋಪಾಲಕೃಷ್ಣ ನೇರಳಕಟ್ಟೆ
+919980223736

2. ರಮೇಶ್ ನಾಯ್ಕ ಉಪ್ಪುಂದ
+919448887713

3. ಶಿವಕುಮಾರ್ ಎಂ.ಜಿ.
9964499583

4. ಅರವಿಂದ ಕುಡ್ಲ
+919844898124

5. ಅಬ್ದುಲ್ ಮಜೀದ್ ಎಸ್
+919535522717

6. ವಿಜಯಾ ಶೆಟ್ಟಿ ಸಾಲೆತ್ತೂರು
7892587191

7. ತೇಜಸ್ವಿ ಅಂಬೆಕಲ್ಲು
+919480345799

8. ತುಳಸಿ ಕೈರಂಗಳ
9480288214

9. ವಿದ್ಯಾಕಾರ್ಕಳ
+917619447371


*******************************************

Ads on article

Advertise in articles 1

advertising articles 2

Advertise under the article