ಆದರ್ಶ ಶಿಕ್ಷಕರು : ಸಂಚಿಕೆ - 2
Tuesday, September 6, 2022
Edit
ಆದರ್ಶ ಶಿಕ್ಷಕರು : ಸಂಚಿಕೆ - 2
ಸೆಪ್ಟೆಂಬರ್ - 5 - 2022
ಶಿಕ್ಷಕರ ದಿನಾಚರಣೆ
ತಮಗೆ ಆದರ್ಶವಾದ ಶಿಕ್ಷಕರ ಬಗೆಗೆ ಜಗಲಿಯ ಮಕ್ಕಳು ಬರೆದಿರುವ ಅನಿಸಿಕೆ ಇಲ್ಲಿದೆ
ನನ್ನ ಹೆಸರು ಸಾತ್ವಿಕ್ ಗಣೇಶ್...... ವಿದ್ಯೆಯ ಕಲಿಸಿ, ತಪ್ಪನ್ನು ತಿದ್ದಿ ಒಳ್ಳೆಯ ವಿದ್ಯಾಬುದ್ಧಿ ಯ ನೀಡುವ, ನಮ್ಮ ಎಲ್ಲಾ ಶಿಕ್ಷಕರಿಗೆ ಶಿಕ್ಷಕ ದಿನಾಚರಣೆಯ ಶುಭಾಶಯಗಳು.
ನನಗೆ ಒಂದನೇ ತರಗತಿಯಿಂದ ಏಳನೇ ತರತಿಯವರೆಗೆ ಕಲಿಸಿದ ಬಜಿರೆ ಶಾಲೆಯ ಎಲ್ಲಾ ಶಿಕ್ಷಕರು ತುಂಬಾ ಇಷ್ಟ. ಅವರು ನಮಗೆ ಒಳ್ಳೆಯ ವಿದ್ಯೆ, ಒಳ್ಳೆಯ ನಡತೆ, ಸಮಯಪಾಲನೆ, ಶಿಸ್ತು, ಆಹಾರದ ಮಹತ್ವ ಎಲ್ಲವನ್ನೂ ಹೇಳಿಕೊಟ್ಟಿದ್ದಾರೆ. ಅವರು ನನ್ನಲ್ಲಿರುವ ಕಲೆಯನ್ನು ಗುರುತಿಸಿ ಅದರಲ್ಲಿ ಭಾಗವಹಿಸಲು ಧೈರ್ಯವನ್ನು ತುಂಬುತ್ತಿದ್ದರು. ನಾನು ಮೊದಲಿಗೆ ಚಿತ್ರ ಮಾಡಿದಾಗ ನೀನು ಸುಂದರವಾಗಿ ಮಾಡುತ್ತಿ ನಿನ್ನಿಂದ ಇನ್ನೂ ಸುಂದರವಾಗಿ ಮಾಡಲು ಸಾಧ್ಯ ಎಂದು ನನ್ನನು ಚಿತ್ರ ಮಾಡಲು ಹುರಿದುಂಬಿಸುತ್ತಿದ್ದರು. ನನ್ನ ಪುಸ್ತಕ ನೋಡಿದ ಎಲ್ಲರೂ ನಿನ್ನ ಅಕ್ಷರ ಚೆನ್ನಾಗಿದೆ , ಚೆನ್ನಾಗಿ ಬರೆದಿದ್ದಿ, ಪುಸ್ತಕವನ್ನು ಜಾಗರೂಕತೆಯಿಂದ ಇಡುತ್ತಿ ಎಂದು ಹೇಳುತ್ತಾರೆ. ನನಗೆ ತುಂಬಾ ಸಂತೋಷವಾಗುತ್ತದೆ. ಇದಕ್ಕೆ ಕಾರಣ ನನ್ನ ಪ್ರೀತಿಯ ಶಿಕ್ಷಕರು ಹಾಗೂ ನಾನು ಓದಿ ಒಳ್ಳೆಯ ಅಂಕ ಪಡೆಯಲು ಕಾರಣ ನನ್ನ ಪ್ರೀತಿಯ ಶಿಕ್ಷಕರು. ಅವರಿಗೆ ಮಕ್ಕಳಲ್ಲಿರುವ ಪ್ರೀತಿ, ಎಲ್ಲರೂ ತಮ್ಮ ಮಕ್ಕಳಂತೆಯೇ ಎನ್ನುವ ಅವರ ಕಾಳಜಿಯನ್ನು ನೋಡಿ ನಾನು ಕೂಡ ದೊಡ್ಡವನಾದ ಮೇಲೆ ಅವರಂತೆಯೇ ಆಗಿ ಎಲ್ಲರೂ ಮೆಚ್ಚುವಂತಹ ಒಳ್ಳೆಯ ಕೆಲಸವನ್ನು ಮಾಡಲು ಇಷ್ಟ ಪಡುತ್ತೇನೆ. ನಾನು ಪ್ರೌಢ ಶಾಲೆಗೆ ಬಂದಾಗ ನನಗೆ ಯಾವ ಶಿಕ್ಷಕರ ಪರಿಚಯವೂ ಇರಲಿಲ್ಲ ಆಗ ನನನ್ನು ಪ್ರೀತಿಯಿಂದ ಮಾತನಾಡಿಸಿ ಹಾಗೂ ಧೈರ್ಯ ತುಂಬಿದ ರವೀಂದ್ರ ಸರ್ ಅವರೂ ಕೂಡಾ ನನಗೆ ತುಂಬಾ ಇಷ್ಟ.
8ನೇ ತರಗತಿ
ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
*******************************************
ಓಂ ಗುರುಭ್ಯೋ ನಮಃ.... ನನ್ನ ಹೆಸರು ಕಾರುಣ್ಯ ಎನ್. ಮಕ್ಕಳ ಜಗಲಿಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಕರನ್ನು ನೆನಪಿಸುವಂತಹ ಮಾತು ನನ್ನದು.
ಮೊನ್ನೆ ನಮ್ಮ ಶಾಲೆಯ ಸಹಶಿಕ್ಷಕರಾಗಿ ಪ್ರವೀಣ್ ಬಿ ಸರ್ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಎಂಬ ಪ್ರಶಸ್ತಿಯನ್ನು ಪಡೆದುಕೊಂಡರು. ಅವರು ಕಲಿಕೆಯ ದೃಷ್ಟಿಕೋನವನ್ನು ಬದಲಾಯಿಸಬಲ್ಲ ದೊಡ್ಡ ವ್ಯಕ್ತಿ ಹಾಗೂ ವಿದ್ಯಾರ್ಥಿಗಳಿಗೆ ಸರಿಯಾದ ದಿಕ್ಕನ್ನು ತೋರಿಸಿರುವ ನಮ್ಮ ಪ್ರವೀಣ್ ಬಿ ಸರ್ ಇವರಿಗೆ ನನ್ನ ಮನದಾಳದ ಅಭಿನಂದನೆಗಳೊಂದಿಗೆ ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
ನಾಲ್ಕನೇ ತರಗತಿ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ
ಪ್ರಾಥಮಿಕ ಶಾಲೆ ನೆಟ್ಲ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ನನ್ನ ಹೆಸರು ಆತ್ಮಿಕ್. ಜೆ. ನನ್ನ ನೆಚ್ಚಿನ ಗುರುಗಳು ಶಾಂತಿ ಟೀಚರ್. ಇವರೆಂದರೆ ನನಗೆ ತುಂಬಾ ಇಷ್ಟ. ಇವರು ತುಂಬಾ ಚೆನ್ನಾಗಿ ಅರ್ಥ ಆಗುವ ಹಾಗೆ ಪಾಠ ಹೇಳಿ ಕೊಡುತ್ತಾರೆ ಮತ್ತು ಸಂಸ್ಕಾರ ದ ಬಗ್ಗೆ ಚೆನ್ನಾಗಿ ಹೇಳಿ ಕೊಡುತ್ತಾರೆ. ಅಪ್ಪ ಅಮ್ಮನಿಗೆ , ಅಜ್ಜ ಅಜ್ಜಿಗೆ, ಹಿರಿಯರಿಗೆ ಗೌರವ ನೀಡುವ ಬಗ್ಗೆ ಹೇಳಿ ಕೊಡುತ್ತಾರೆ. ಆದ್ದರಿಂದ ನಾನು ಅವರಿಗೆ ತುಂಬಾ ಗೌರವ ಕೊಡುತ್ತೇನೆ. ಅವರನ್ನು ನಮ್ಮ ಶಾಲೆಯ ಉತ್ತಮ ಶಿಕ್ಷಕಿ ಎಂದು ಮನದಾಳದಿಂದ ಹೇಳಲು ಇಷ್ಟ ಪಡುತ್ತೇನೆ. ಶಾಂತಿ ಟೀಚರ್ ಗೆ ವಂದನೆಗಳು. ಶಿಕ್ಷಕ ದಿನಾಚಣೆಯ ಶುಭಾಶಯ ಗಳು.
2ನೇ ತರಗತಿ
ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಮಡಂತ್ಯಾರು.
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ನನ್ನ ಹೆಸರು ದಿಶಾ. ನನ್ನ ನೆಚ್ಚಿನ ಶಿಕ್ಷಕರು ವಿಜಯ ಸರ್. ಮತ್ತು ಪರಮೇಶ್ವರ ಸರ್. ತರಗತಿಯ ಪ್ರೀತಿಯ ಶಿಕ್ಷಕರು ಅವರು ನಮಗೆ ಇಂಗ್ಲಿಷ್ ಪಾಠ ಮತ್ತು ಗಣಿತ ಪಾಠ ಚೆನ್ನಾಗಿ ಅರ್ಥ ಆಗುವ ಹಾಗೆ ಕಲಿಸುತ್ತಾರೆ. ಕುಳಾಲು ಶಾಲೆಯಲ್ಲಿ ಉತ್ತಮ ಶಿಕ್ಷಕರು ಆಗಿದ್ದಾರೆ. ನಾನು ಉತ್ತಮ ಪ್ರಜೆಯಾಗಲು ಒಳ್ಳೆಯ ಶಿಕ್ಷಕರ ಮಾರ್ಗದರ್ಶನ ಬೇಕಾಗುತ್ತದೆ. ಅಂತಹ ಒಳ್ಳೆಯ ಶಿಕ್ಷಕರು ನಮ್ಮ ಕುಳಾಲು ಶಾಲೆಯ ವಿಜಯ ಸರ್ ಮತ್ತು ಪರಮೇಶ್ವರ್ ಸರ್. ಅವರ ಸರಳ ವ್ಯಕ್ತಿತ್ವ ನನಗೆ ತುಂಬಾ ಇಷ್ಟ ವಾಯಿತು. ಎಲ್ಲರಿಗೂ ಪ್ರೀತಿಯಿಂದ ಪಾಠ ಹೇಳಿ ಕೊಡುತ್ತಾರೆ.
5 ನೇ ತರಗತಿ
ದ. ಕ ಜಿ. ಪ. ಹಿ. ಪ್ರಾ. ಶಾಲೆ ಕುಳಾಲು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ನಮಸ್ತೆ, ನನ್ನ ಹೆಸರು ಪ್ರಣವ್ ದೇವ್......
ನನಗೆ "ನಿಶಾ" ಟೀಚರ್ ಹೇಳಿ ಕೊಟ್ಖ ಗಣಿತ ಬಹಳ ಇಷ್ಟ. ಬೇರೆ ತರ ತರದ ವಸ್ತುಗಳ ಮೂಲಕ ಅರ್ಥ ಮಾಡಿಸುತ್ತಾರೆ, ನಾನು ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗವಹಿಸಲು, ಪ್ರೋತ್ಸಾಹ ನೀಡುತ್ತಾರೆ. ನನ್ನನ್ನು ಹುರಿದುಂಬಿಸಿದ ನನ್ನ "ನಿಶಾ" ಟೀಚರ್ ಗ ವಂದನೆಗಳು.
ತರಗತಿ -೨
ಲೇಡಿ ಹಿಲ್ ಇಂಗ್ಲೀಷ್
ಹೈಯರ್ ಫ್ರೖಮರಿ ಸ್ಕೂಲ್
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
*******************************************
ನನ್ನ ಹೆಸರು ದೀಕ್ಷಾ. ಎಂ... ನನ್ನ ಶಾಲೆಯಲ್ಲಿ ನನಗೆ ತುಂಬಾ ಇಷ್ಟವಾದ ಶಿಕ್ಷಕರು ಎಂದರೆ ukg ಯಲ್ಲಿ ಕಲಿಸಿದ ಶಿಕ್ಷರಾದ ಪುಷ್ಪಲತಾ ಮ್ಯಾಡಮ್. ಅವರು ಶಾಲೆ ಎಂದರೆ lkg ಲಿ ತುಂಬಾ ಭಯಪಟ್ಟಿ ನನ್ನ ಮತ್ತು ನನ್ನ ತಂಗಿಗೆ... ಪ್ರೀತಿಯಿಂದ ನೋಡಿಕೊಳ್ಳೋ ಒಳ್ಳೆ ಮನಸ್ಸುಗಳು ಇರುತ್ತವೆ... ಎಂದು ತೋರಿಸಿದ ಶಿಕ್ಷಕಿ... ಪುಷ್ಪ ಲತಾ ಮೇಡಂ.. ಮೊದಲು ಪುಟ್ಟ ಮಕ್ಕಳಾದ ನಮಗೆ ಮನೆಯಲ್ಲಿ ಪ್ರೀತಿ ವಾತ್ಸಲ್ಯದಿಂದ ಇದ್ದು... ತಕ್ಷಣ ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳೋ ಬೇಕಾದರೆ... ಮನೆ ಪ್ರೀತಿ ಶಾಲೆಯಲ್ಲೂ ಸಿಕ್ಕಿದರೆ ಶಾಲೆಯೂ ಒಂದು ಮನೆಯಗುತ್ತದೆ... ಅದೇ ಪ್ರೀತಿ ಕೊಟ್ಟು ಕಲಿಸಿದ ಶಿಕ್ಷಕಿ... ಅನಾರೋಗ್ಯದ ಸಮಯದಲ್ಲೂ... ಅಮ್ಮ ಬರೋವರೆಗೂ ಪ್ರೀತಿಯಿಂದ ನೋಡಿಕೊಂಡಿದ್ದಾರೆ... ಶಾಲೆ ಕಾರ್ಯಕ್ರಮಗಳಲ್ಲಿ ನಮಗೆ ಊಟ ಮಾಡಿಸಿದ್ದಾರೆ... ಕುಸುಮ ಮಿಸ್ ಸಹ.. ಗೋಲ್ಡ್ ಗರ್ಲ್ಸ್ ಅಂತ ನನ್ನ ಮತ್ತು ನನ್ನ ತಂಗಿನ ಕರೀತಿದ್ರು.. ಧನ್ಯವಾದಗಳು ಪುಷ್ಪಲತಾ ಮೇಡಂ ಕುಸುಮ ಮೇಡಂ... ಲವ್ ಯು..
3ನೇ ತರಗತಿ
ಕೇಂದ್ರೀಯ ವಿದ್ಯಾಲಯ ಮಾದಾಪುರ..
ಚಾಮರಾಜ ನಗರ ತಾಲ್ಲೂಕು
ಚಾಮರಾಜ ನಗರ ಜಿಲ್ಲೆ
*******************************************
ನನ್ನ ಹೆಸರು ದೀಪ್ತಿ. M . ನನ್ನ ಶಾಲೆಯಲ್ಲಿ ಎಲ್ಲಾ ಶಿಕ್ಷಕರು ನನಗೆ ತುಂಬಾ ಇಷ್ಟ. ಇವರಲ್ಲಿ ನನ್ನ ನೆಚ್ಚಿನ ಶಿಕ್ಷಕರು ಎಂದರೆ ಅಭಿಲಾಶ ಮೇಡಂ.. ಏಕೆಂದರೆ ನನಗೆ ಇಂಗ್ಲೀಷ್ ವಿಷಯವೆಂದರೆ ತುಂಬಾ ಕಷ್ಟದ ವಿಷಯ ಅನಿಸುತಿತ್ತು ಆದರೆ... ಅಭಿಲಾಶ ಮೇಡಂ ಇಂಗ್ಲೀಷ ನೂ ಸುಲಭವಾಗಿ.... ನಮ್ಮೆಲ್ಲರಿಗೂ ಅರ್ಥವಾಗುವ ರೀತಿ... ಹೇಳಿಕೊಡುತ್ತಿದ್ದಾರೆ... ಅಲ್ಲದೆ... ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವಂತೆ... ಪ್ರೋತ್ಸಾಹಿಸಿಸುತ್ತಾರೆ... ಪ್ರೀತಿಯಿಂದ ನಮ್ಮ ತಪ್ಪು ತಿದ್ದುತ್ತಾರೆ... ಹಾಗಾಗಿ... ನನ್ನ ಪ್ರೀತಿಯ, ನೆಚ್ಚಿನ ಶಿಕ್ಷಕರಿಗೆ... ನಾನು ನಮ್ಮ ಭವಿಷ್ಯ ರೂಪಿಸುವ ಪೆನ್ನನ್ನೂ ಕೊಡುಗೆಯಾಗಿ ನೀಡಿದೆ...
3ನೇ ತರಗತಿ
ಕೇಂದ್ರೀಯ ವಿದ್ಯಾಲಯ ಮಾದಾಪುರ..
ಚಾಮರಾಜ ನಗರ ತಾಲ್ಲೂಕು
ಚಾಮರಾಜ ನಗರ ಜಿಲ್ಲೆ
*******************************************